ಮುಂಬೈ:ಭಾರತವು ಬಹುದೊಡ್ಡ ಕೋವಿಡ್ ಸಾಂಕ್ರಾಮಿಕ ರೋಗ ಸೆಣಸಾಡುತ್ತಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಪ್ರಸ್ತುತ ಒಂದೇ ಸ್ಥಳದಿಂದ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸುವ ದೇಶದ ಅತಿದೊಡ್ಡ ಉತ್ಪಾದಕ ಘಟಕವಾಗಿದೆ.
ಜಾಮ್ನಗರದಲ್ಲಿನ ತನ್ನ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ನಲ್ಲಿ ಆರ್ಐಎಲ್ ಈಗ ನಿತ್ಯ 1,000 ಮೆಟ್ರಿಕ್ ಟನ್ ವೈದ್ಯಕೀಯ ದರ್ಜೆಯ ದ್ರವ ಆಮ್ಲಜನಕ ಉತ್ಪಾದಿಸುತ್ತದೆ. ಭಾರತದ ಒಟ್ಟು ಉತ್ಪಾದನೆಯ ಶೇ 11ಕ್ಕಿಂತ ಹೆಚ್ಚಾಗಿದ್ದು, ಪ್ರತಿ ಹತ್ತು ರೋಗಿಗಳಲ್ಲಿ ಒಬ್ಬರಿಗೆ ಆಕ್ಸಿಜನ್ ಅಗತ್ಯತೆಗಳನ್ನು ಪೂರೈಸುತ್ತದೆ. ಮೂಲತಃ ರಿಲಯನ್ಸ್ ವೈದ್ಯಕೀಯ ದರ್ಜೆಯ ಆಮ್ಲಜನಕದ ತಯಾರಕರಲ್ಲ.
ಕೋವಿಡ್ -19 ಸಾಂಕ್ರಾಮಿಕದ ಹೊಸ ಅಲೆಯ ವಿರುದ್ಧ ಭಾರತ ಹೋರಾಡುತ್ತಿರುವಾಗ ನನಗೆ ಮತ್ತು ರಿಲಯನ್ಸ್‌ನಲ್ಲಿರುವ ನಮ್ಮೆಲ್ಲರಿಗೂ ಪ್ರತಿಯೊಬ್ಬರ ಜೀವ ರಕ್ಷಣೆಯೇ ಮುಖ್ಯವಾಗಿದೆ ಬೇರೆ ಏನೂ ಇಲ್ಲ ಎಂದು ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.
ವೈದ್ಯಕೀಯ ದರ್ಜೆಯ ಆಮ್ಲಜನಕಕ್ಕಾಗಿ ಭಾರತದ ಉತ್ಪಾದನೆ ಮತ್ತು ಸಾರಿಗೆ ಸಾಮರ್ಥ್ಯವನ್ನು ಗರಿಷ್ಠಗೊಳಿಸುವ ಅವಶ್ಯಕತೆಯಿದೆ. ಈ ಹೊಸ ಸವಾಲನ್ನು ಎದುರಿಸಲು ದೇಶಭಕ್ತಿಯ ತುರ್ತುಸ್ಥಿತಿಯೊಂದಿಗೆ ದಣಿವರಿಯದೇ ಕೆಲಸ ಮಾಡಿದ ಜಾಮ್‌ನಗರದಲ್ಲಿ ಇರುವ ನಮ್ಮ ಇಂಜಿನಿಯರ್‌ಗಳ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ಸೀತಾರಾಮನ್ ಗತ್ತು, ತೆರಿಗೆದಾರರ ತಾಕತ್ತು: GST ಇತಿಹಾಸದಲ್ಲೇ ದಾಖಲೆ ಟ್ಯಾಕ್ಸ್ ಸಂಗ್ರಹ!