ನವದೆಹಲಿ: ಚೀನಾದ ಸ್ಮಾರ್ಟ್ಫೋನ್ ತಯಾರಕ ಕಂಪನಿ ರಿಯಲ್ಮಿ ಟೆಕ್ ಲೈಫ್ಸ್ಟೈಲ್ ವಿಭಾಗದಲ್ಲಿ ತನ್ನ ಮೊದಲ ಸ್ಮಾರ್ಟ್ ಟಿವಿಯನ್ನು ಕೇವಲ 12,999 ರೂ.ಗಳ ಆರಂಭಿಕ ಬೆಲೆಯ ಮೂಲಕ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ.
ಮೀಡಿಯಾ ಟೆಕ್ 64- ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಮತ್ತು ಡಾಲ್ಬಿ ಆಡಿಯೊ ಪ್ರಮಾಣಿತ 24 ಡಬ್ಲ್ಯೂ ಕ್ವಾಡ್ ಸ್ಟಿರಿಯೊ ಸ್ಪೀಕರ್ಗಳ ಎರಡು ರೂಪಾಂತರಗಳಲ್ಲಿ ಸ್ಮಾರ್ಟ್ಟಿವಿ ಪರಿಚಯಿಸಿದೆ. ರಿಯಲ್ಮಿ ಸ್ಮಾರ್ಟ್ಟಿವಿ 32 ಇಂಚು (ಎಚ್ಡಿ) 12,999 ರೂ ಮತ್ತು 43 ಇಂಚು ಟಿವಿಗೆ 21,999 ರೂ. ನಿಗದಿ ಮಾಡಿ.
ಈ ಎರಡೂ ಮಾದರಿಗಳು ಜೂನ್ 2ರಿಂದ ರಿಯಲ್ಮಿ.ಕಾಮ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಮಾರಾಟವಾಗಲಿವೆ. ಒಂದು ವರ್ಷ ಹೆಚ್ಚುವರಿ ವಾರಂಟಿ (ಟವಿ ಪ್ಯಾನೆಲ್ಗೆ ಮಾತ್ರ) 6 ತಿಂಗಳು ಯುಟ್ಯೂಬ್ ಪ್ರೀಮಿಯಂ ನೀಡಲಾಗಿದೆ.
64 ಬಿಟ್ ಮೀಡಿಯಾಟೆಕ್ ಪ್ರೊಸೆಸರ್, ಮಾಲಿ 470 ಜಿಪಿಯು, 1ಜಿಬಿ ರ್ಯಾಮ್ ಮತ್ತು 8ಜಿಬಿ ಸಂಗ್ರಹ ಸಾಮರ್ಥ್ಯ ಒಳಗೊಂಡಿದೆ. ಡಿಸ್ಪ್ಲೇಯಲ್ಲಿ ಕ್ರೋಮಾ ಬೂಸ್ಟ್, ಎಚ್ಡಿಆರ್ 10 ಹಾಗೂ ಎಚ್ಎಲ್ಜಿ ಫಾರ್ಮ್ಯಾಟ್ಗೆ ನೆರವಾಗಲಿದೆ.
ಆ್ಯಂಡ್ರಾಯ್ಡ್ ಟಿವಿ ಆಗಿರುವುದರಿಂದ ಎಲ್ಲ ಆ್ಯಂಡ್ರಾಯ್ಡ್ ಆ್ಯಪ್ಗಳೊಂದಿಗೆ ನೆಟ್ಫ್ಲಿಕ್ಸ್, ಯುಟ್ಯೂಬ್, ಡಿಸ್ನಿ+ ಸೇರಿದಂತೆ ಇತರ ಚಲನಚಿತ್ರ, ಟಿವಿ ಶೋ ವೀಕ್ಷಣೆಯ ಆ್ಯಪ್ಗಳನ್ನು ಹೊಂದಿದೆ.
4 ಸ್ಪೀಕರ್ ಹಾಗೂ 1 ಸಬ್ಊಫರ್ ಒಳಗೊಂಡ 100ವ್ಯಾಟ್ಸ್ ಸೌಂಡ್ಬಾರ್ ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದೆ. ಆದರೆ, ಇದರ ಬೆಲೆ ಹಾಗೂ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.
3,999 ರೂ. ಮುಖಬೆಲೆಯ ರಿಯಲ್ಮಿ ಸ್ಮಾರ್ಟ್ ವಾಚ್ ಸಹ ಬಿಡುಗಡೆ ಮಾಡಿದೆ. 3.5 ಸೆಂ.ಮೀ ಕಲರ್ ಟಚ್ಸ್ಕ್ರೀನ್, 14 ಸ್ಪೋರ್ಟ್ಸ್ ಮೋಡ್, ಹಾರ್ಟ್ ರೇಟ್ನ ರಕ್ತ–ಆಕ್ಸಿಜನ್ ಮಾನಿಟರ್, ಮ್ಯೂಸಿಕ್, ಕ್ಯಾಮೆರಾ ಕಂಟ್ರೋಲ್ ಮತ್ತು ಸ್ಮಾರ್ಟ್ ನೋಟಿಫಿಕೇಷನ್ನಂತಹ ಫಿಚರ್ಗಳನ್ನು ಒಳಗೊಂಡಿದೆ.
ಆಟೊ ಕನೆಕ್ಷನ್, 17 ಗಂಟೆಗಳ ಪ್ಲೇಬ್ಯಾಕ್ ಮತ್ತು ಇಂಟೆಲಿಜೆಂಟ್ ಟಚ್ ಸಾಮರ್ಥ್ಯದ ರಿಯಲ್ಮಿ ಬಡ್ಸ್ ಏರ್ ನಿಯೊ ಲಾಂಚ್ ಮಾಡಿದ್ದು, ಇದರ ಬೆಲೆಯನ್ನು 2,999 ರೂ.ಗೆ ನಿಗದಿಪಡಿಸಿದೆ. ಇದರ ಜೊತೆಗೆ ರಿಯಲ್ಮಿ 10,000 ಎಂಎಎಚ್ ಪವರ್ ಬ್ಯಾಂಕ್ 2 ಪರಿಚಯಿಸಿದ್ದು, 999 ರೂ. ಎಂದು ಹೇಳಿದೆ. 18 ವ್ಯಾಟ್ ಟುವೇ ಚಾರ್ಜ್, ಯುಎಸ್ಬಿ ಎ ಹಾಗೂ ಸಿ ಪೋರ್ಟ್ಸ್ ಲಕ್ಷಣಗಳನ್ನು ಹೊಂದಿದೆ.