ಕರ್ನಾಟಕ

karnataka

By

Published : May 29, 2020, 5:02 PM IST

ETV Bharat / business

ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್​ಗೆ ಕೋಟ್ಯಂತರ ರೂ. ದಂಡ ವಿಧಿಸಿದ RBI

ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಎನ್‌ಪಿಎ ಖಾತೆಗಳಲ್ಲಿನ ಮುಂಗಡ ಭಿನ್ನತೆಗೆ ಸಂಬಂಧಿಸಿದ ನಿಬಂಧನೆ, ಚಾಲ್ತಿ ಖಾತೆಗಳ ತೆರೆಯುವಿಕೆ ಕುರಿತು ಹೊರಡಿಸಿದ ನಿರ್ದೇಶನಗಳ ನಿಬಂಧನೆಗಳಿಗೆ ಸಂಬಂಧಿಸಿದ ಕೆಲವು ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾಗಿದ್ದರಿಂದ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್​ಗೆ ದಂಡ ವಿಧಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ.

Reserve Bank of India
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಮುಂಬೈ: ಬ್ಯಾಂಕ್ ಆಫ್ ಇಂಡಿಯಾಕ್ಕೆ 5 ಕೋಟಿ ರೂ.ಗಳ ವಿತ್ತೀಯ ದಂಡ ವಿಧಿಸಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ.

ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಎನ್‌ಪಿಎ ಖಾತೆಗಳಲ್ಲಿನ ಮುಂಗಡ ಭಿನ್ನತೆಗೆ ಸಂಬಂಧಿಸಿದ ನಿಬಂಧನೆ, ಚಾಲ್ತಿ ಖಾತೆಗಳ ತೆರೆಯುವಿಕೆ ಕುರಿತು ಹೊರಡಿಸಿದ ನಿರ್ದೇಶನಗಳ ನಿಬಂಧನೆಗಳಿಗೆ ಸಂಬಂಧಿಸಿದ ಕೆಲವು ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾಗಿದ್ದರಿಂದ ದಂಡ ವಿಧಿಸಲಾಗಿದೆ ಎಂದು ಆರ್​ಬಿಐ ಹೇಳಿದೆ.

ಈ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ. ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಪ್ರವೇಶಿಸಿದ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವವನ್ನು ಉದ್ದೇಶಿಸಿಲ್ಲ ಎಂದು ಹೇಳಿದೆ.

ಮತ್ತೊಂದು ಪ್ರಕರಣದಲ್ಲಿ ಇದೇ ಮಾದರಿಯ ಆದೇಶ ನಿಯಮ ಉಲ್ಲಂಲಘಿಸಿದ ಕರ್ನಾಟಕ ಬ್ಯಾಂಕ್ ಮೇಲೆ ಕೇಂದ್ರೀಯ ಬ್ಯಾಂಕ್​ 1.20 ಕೋಟಿ ರೂ. ದಂಡ ವಿಧಿಸಿದೆ. ಸಾರಸ್ವತ್ ಸಹಕಾರಿ ಬ್ಯಾಂಕ್​ಗೂ 30 ಲಕ್ಷ ರೂ. ದಂಡ ಹಾಕಲಾಗಿದೆ ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details