ಮುಂಬೈ: ಮುಂಬೈ ಮೂಲದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಾರ್ಯಾಚರಣೆಯ ನಿರ್ಬಂಧ ವಿಧಿಸಿದ್ದು, ಈ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಆರ್ರಬಿಐ ಅಧಿಕಾರಿಗಳು ಸಹ ಖಾತೆ ಹೊಂದಿದ್ದಾರೆ.
ನಿರ್ಬಂಧ ವಿಧಿಸಿದ ಬ್ಯಾಂಕ್ನಲ್ಲಿದೆ RBI ಅಧಿಕಾರಿಗಳ ₹ 105 ಕೋಟಿ..! - PMC Bank
ಭಾರತದಾದ್ಯಂತ ಸಾಲದ ಅಗತ್ಯಗಳನ್ನು ಬ್ಯಾಂಕ್ಗಳಿಗೆ ಪೂರೈಸುವ ಮತ್ತು ಬಡ್ಡಿ ದರವನ್ನು ನಿರ್ಧಿಸುವ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಸಹಕಾರಿ ಕ್ರೆಡಿಟ್ ಬ್ಯಾಂಕ್ಗಳಲ್ಲಿ ನಿಶ್ಚಿತ ಠೇವಣಿ ಇರಿಸಿದ್ದಾರೆ. ಸೆಪ್ಟೆಂಬರ್ 23ರಂದು ಪಿಎಂಸಿ ಬ್ಯಾಂಕ್ ಮೇಲೆ ಹಲವು ನಿರ್ಬಂಧಗಳನ್ನ ಹೇರಿದ ಆರ್ಬಿಐ, ಈ ಬ್ಯಾಂಕ್ನಲ್ಲಿ ಹಲವು ಅಧಿಕಾರಿಗಳು ₹ 105 ಕೋಟಿ ಮೊತ್ತದಷ್ಟು ನಿಶ್ಚಿತ ಠೇವಣಿ ಇರಿಸಿದ್ದಾರೆ.
![ನಿರ್ಬಂಧ ವಿಧಿಸಿದ ಬ್ಯಾಂಕ್ನಲ್ಲಿದೆ RBI ಅಧಿಕಾರಿಗಳ ₹ 105 ಕೋಟಿ..!](https://etvbharatimages.akamaized.net/etvbharat/prod-images/768-512-4561275-thumbnail-3x2-rbi.jpg)
ಭಾರತದಾದ್ಯಂತ ಸಾಲದ ಅಗತ್ಯಗಳನ್ನು ಬ್ಯಾಂಕ್ಗಳಿಗೆ ಪೂರೈಸುವ ಮತ್ತು ಬಡ್ಡಿ ದರವನ್ನು ನಿರ್ಧಿಸುವ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಸಹಕಾರಿ ಕ್ರೆಡಿಟ್ ಸಹಕಾರಿ ಬ್ಯಾಂಕ್ಗಳಲ್ಲಿ ನಿಶ್ಚಿತ ಠೇವಣಿ ಇರಿಸಿದ್ದಾರೆ. ಸೆಪ್ಟೆಂಬರ್ 23ರಂದು ಪಿಎಂಸಿ ಬ್ಯಾಂಕ್ ಮೇಲೆ ಹಲವು ನಿರ್ಬಂಧಗಳನ್ನು ಹೇರಿದ ಆರ್ಬಿಐ, ಈ ಬ್ಯಾಂಕ್ನಲ್ಲಿ ಹಲವು ಅಧಿಕಾರಿಗಳು ₹ 105 ಕೋಟಿ ಮೊತ್ತದಷ್ಟು ನಿಶ್ಚಿತ ಠೇವಣಿ ಇರಿಸಿದ್ದಾರೆ.
2019ರ ಹಣಕಾಸು ವರ್ಷದ ವಾರ್ಷಿಕ ವರದಿ ಅನ್ವಯ, ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಪಿಎಂಸಿ ಬ್ಯಾಂಕ್ನಲ್ಲಿ 105 ಕೋಟಿ ರೂ. ಸೇರಿದಂತೆ ಇತರ ನಾನಾ ಸಹಕಾರಿ ಬ್ಯಾಂಕ್ಗಳಲ್ಲಿ ಒಟ್ಟು ₹ 478.64 ಕೋಟಿಗಳಷ್ಟು ಸ್ಥಿರ ಅಥವಾ ಅಲ್ಪಾವಧಿಯ ಠೇವಣಿ ಇರಿಸಿದ್ದಾರೆ. ಭಾರತ್ ಸಹಕಾರಿ ಬ್ಯಾಂಕ್ನಲ್ಲಿ ₹ 100 ಕೋಟಿ ಸ್ಥಿರ ಠೇವಣಿ, ಥಾಣೆ ಭರತ್ ಸಹಕಾರಿ ಬ್ಯಾಂಕ್ನಲ್ಲಿ ₹ 85 ಕೋಟಿ, ಸೋಲಾಪುರ್ ಜನತಾ ಸಹಕಾರಿ ಬ್ಯಾಂಕ್ ಮತ್ತು ಅಪ್ನಾ ಸಹಕಾರಿ ಬ್ಯಾಂಕ್ನಲ್ಲಿ ಕ್ರಮವಾಗಿ ₹ 50 ಕೋಟಿ ಹಾಗೂ ₹ 85 ಕೋಟಿ ನಿಶ್ಚಿತ ಠೇವಣಿ ಹೊಂದಿದ್ದಾರೆ.