ಕರ್ನಾಟಕ

karnataka

ETV Bharat / business

ಯೆಸ್​ ಬ್ಯಾಂಕ್​ಗೆ RBIನ ಕನಿಕರದ ಕೊಡುಗೆ... 60,000 ಕೋಟಿ ರೂ. ಸಾಲದ ಸೌಕರ್ಯ ವಿಸ್ತರಣೆ - ಭಾರತೀಯ ರಿಸರ್ವ್ ಬ್ಯಾಂಕ್

ನಿಷೇಧವನ್ನು ತೆಗೆದುಹಾಕಿದ ನಂತರ ಅಗತ್ಯವಿದ್ದಲ್ಲಿ, ಬ್ಯಾಂಕ್​ಗೆ ದ್ರವ್ಯತೆ ನೀಡಲು ಸಿದ್ಧ ಎಂದು ಆರ್​ಬಿಐ ಈ ಹಿಂದೆಯೇ ಭರವಸೆ ನೀಡಿತ್ತು. 'ಯೆಸ್​ ಬ್ಯಾಂಕ್ ಯಾವುದೇ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ದ್ರವ್ಯತೆಯನ್ನು ಹೊಂದಿದೆ. ಅವಶ್ಯಕತೆ ಇದ್ದರೆ ಆರ್‌ಬಿಐ ಅಗತ್ಯವಾದ ದ್ರವ್ಯತೆ ಬೆಂಬಲವನ್ನು ನೀಡುತ್ತದೆ' ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್​ ಹೇಳಿದ್ದರು.

Yes Bank
ಯೆಸ್ ಬ್ಯಾಂಕ್

By

Published : Mar 19, 2020, 8:33 PM IST

ನವದೆಹಲಿ: ದ್ರವ್ಯತೆ (ನಗದು) ಸಮಸ್ಯೆ ನಿವಾರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 60,000 ಕೋಟಿ ರೂ.ಗಳ ಸಾಲ ಸೌಲಭ್ಯವನ್ನು ಯೆಸ್ ಬ್ಯಾಂಕ್‌ಗೆ ವಿಸ್ತರಿಸಿದೆ. ಇದರಿಂದ ಠೇವಣಿದಾರರು ತನ್ನ ಬಾಧ್ಯತೆಯನ್ನು ಆರ್​ಬಿಐ ಪೂರೈಸಲಿದೆ ಎಂದು ಮೂಲಗಳು ತಿಳಿಸಿವೆ.

ನಿಷೇಧವನ್ನು ತೆಗೆದುಹಾಕಿದ ನಂತರ ಅಗತ್ಯವಿದ್ದಲ್ಲಿ, ಬ್ಯಾಂಕ್​ಗೆ ದ್ರವ್ಯತೆ ನೀಡಲು ಸಿದ್ಧವೆಂದು ಆರ್​ಬಿಐ ಈ ಹಿಂದೆಯೇ ಭರವಸೆ ನೀಡಿತ್ತು. 'ಯೆಸ್​ ಬ್ಯಾಂಕ್ ಯಾವುದೇ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ದ್ರವ್ಯತೆಯನ್ನು ಹೊಂದಿದೆ. ಅವಶ್ಯಕತೆ ಇದ್ದರೆ ಆರ್‌ಬಿಐ ಅಗತ್ಯವಾದ ದ್ರವ್ಯತೆ ಬೆಂಬಲವನ್ನು ನೀಡುತ್ತದೆ' ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್​ ಹೇಳಿದ್ದರು.

ಬ್ಯಾಂಕ್​ಗಳ ಇತಿಹಾಸದಲ್ಲಿ (ಭಾರತದಲ್ಲಿ) ಠೇವಣಿದಾರರು ತಮ್ಮ ಹಣವನ್ನು ಕಳೆದುಕೊಂಡಿಲ್ಲ. ಠೇವಣಿದಾರರ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದಿದ್ದರು. ಆರ್​ಬಿಐ ಕಾಯ್ದೆ 1934ರ ಸೆಕ್ಷನ್ 17ರ ಪ್ರಕಾರ, ಕೇಂದ್ರ ಬ್ಯಾಂಕ್ ಯಾವುದೇ ದ್ರವ್ಯತೆ ಬೆಂಬಲವನ್ನು ನೀಡಬಹುದು. ಷೇರುಗಳು, ನಿಧಿಗಳು ಮತ್ತು ಸೆಕ್ಯುರಿಟೀಸ್ (ಸ್ಥಿರ ಆಸ್ತಿಯ ಹೊರತಾಗಿ) ನಂತಹ ಮೇಲಾಧಾರಗಳಿಗೆ ಪ್ರತಿಯಾಗಿ ಸಾಲ ಮತ್ತು ಮುಂಗಡಗಳ ರೂಪದಲ್ಲಿ ಸಾಲ ನೀಡುವವರು ಸಂಸತ್ತಿನ ಕಾಯ್ದೆ ಮೂಲಕ ವಿಶ್ವಾಸಾರ್ಹ ಹಣ ಹೂಡಿಕೆ ಮಾಡುವ ಅಧಿಕಾರವಿದೆ.

ಖಾಸಗಿ ವಲಯದ ಬ್ಯಾಂಕ್​ ಅನ್ನು ಉಳಿಸಿಕೊಳ್ಳಲು ಸಾರ್ವಜನಿಕ ವಲಯದ ಎಸ್​ಬಿಐ ಅತ್ಯಧಿಕ ಶೇ 48.21ರಷ್ಟು ಷೇರು ಬಂಡವಾಳ ಹೂಡಿತು. ಇದರ ಮೊತ್ತ ₹ 6,050 ಕೋಟಿಯಷ್ಟಿದೆ. ಇದರ ಜೊತೆಗೆ ಐಸಿಐಸಿಐ ಮತ್ತು ಎಚ್​ಡಿಎಫ್​ಸಿ ತಲಾ ₹ 1,000 ಕೋಟಿ, ಎಕ್ಸಿಸ್ ಬ್ಯಾಂಕ್ ₹ 600 ಕೋಟಿ, ಕೋಟಕ್​ ಮಹೀಂದ್ರ ಬ್ಯಾಂಕ್ ₹ 500 ಕೋಟಿ, ಬಂಧನ್ ಬ್ಯಾಂಕ್ ಮತ್ತು ಫೆಡರಲ್​ ಬ್ಯಾಂಕ್ ತಲಾ ₹ 300 ಕೋಟಿ ಹಾಗೂ ಐಡಿಎಫ್​ಸಿ ಫರ್ಸ್ಟ್​ ₹ 250 ಕೋಟಿಯಷ್ಟು ಹೂಡಿಕೆ ಮಾಡಿವೆ.

ABOUT THE AUTHOR

...view details