ಕರ್ನಾಟಕ

karnataka

ETV Bharat / business

ಬ್ಯಾಂಕ್​​ಗಳು ಆರ್​​ಬಿಐನ ಈ ಮಾತಿಗೆ ಕಿವಿಗೊಟ್ಟರೆ ಗ್ರಾಹಕರಿಗೆ ಲಾಭದಾಯಕ - ATM Transaction

ಬ್ಯಾಂಕ್‌ಗಳು ಪ್ರತಿ ತಿಂಗಳಿಗೆ ನಿರ್ದಿಷ್ಟ ಸಂಖ್ಯೆಯ ಉಚಿತ ಎಟಿಎಂ ವಹಿವಾಟು ನಿಗದಿಪಡಿಸಿವೆ. ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಶುಲ್ಕ ವಸೂಲಿ ಮಾಡುತ್ತಿವೆ. ತಾಂತ್ರಿಕ ತೊಂದರೆಯಿಂದ ವಹಿವಾಟು ರದ್ದಾಗುವುದು, ಹಣ ದೊರೆಯದಿರುವುದನ್ನು ಬ್ಯಾಂಕ್‌ಗಳು ಉಚಿತ ಸಂಖ್ಯೆಯ ವಹಿವಾಟಿಗೆ ಸೇರ್ಪಡೆ ಮಾಡುತ್ತಿರುವುದರಿಂದ ಆರ್‌ಬಿಐ ಸ್ಪಷ್ಟನೆ ನೀಡಿದೆ.

ಸಾಂದರ್ಭಿಕ ಚಿತ್ರ

By

Published : Aug 15, 2019, 7:49 AM IST

ಮುಂಬೈ:ತಾಂತ್ರಿಕ ಕಾರಣಗಳಿಂದ ಎಟಿಎಂನಲ್ಲಿ ನಗದು ವರ್ಗಾವಣೆ ವಿಫಲವಾದರೆ ಅದನ್ನು ಉಚಿತ ವಹಿವಾಟೆಂದು ಪರಿಗಣಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ವಾಣಿಜ್ಯ ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ.

ಖಾತೆಯಲ್ಲಿನ ಹಣದ ವಿವರ ಪಡೆಯುವುದು, ಚೆಕ್‌ಬುಕ್‌ಗೆ ಮನವಿ, ತೆರಿಗೆ ಪಾವತಿ, ಹಣ ವರ್ಗಾವಣೆಯಂತಹ ನಗದುರಹಿತ ವಹಿವಾಟುಗಳನ್ನೂ ಗ್ರಾಹಕರಿಗೆ ಒದಗಿಸಿರುವ ಪ್ರತಿ ತಿಂಗಳ ನಿರ್ದಿಷ್ಟ ಸಂಖ್ಯೆಯ ಉಚಿತ ವಹಿವಾಟಿಗೆ ಸೇರ್ಪಡೆ ಮಾಡಬಾರದು ಎಂದಿದೆ.

ಬ್ಯಾಂಕ್‌ಗಳು ಪ್ರತಿ ತಿಂಗಳಿಗೆ ನಿರ್ದಿಷ್ಟ ಸಂಖ್ಯೆಯ ಉಚಿತ ಎಟಿಎಂ ವಹಿವಾಟು ನಿಗದಿಪಡಿಸಿವೆ. ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಶುಲ್ಕ ವಸೂಲಿ ಮಾಡುತ್ತಿವೆ. ತಾಂತ್ರಿಕ ತೊಂದರೆಯಿಂದ ವಹಿವಾಟು ರದ್ದಾಗುವುದು, ಹಣ ದೊರೆಯದಿರುವುದನ್ನು ಬ್ಯಾಂಕ್‌ಗಳು ಉಚಿತ ಸಂಖ್ಯೆಯ ವಹಿವಾಟಿಗೆ ಸೇರ್ಪಡೆ ಮಾಡುತ್ತಿರುವುದರಿಂದ ಆರ್‌ಬಿಐ ಸ್ಪಷ್ಟನೆ ನೀಡಿದೆ.

ಹಾರ್ಡ್‌ವೇರ್‌, ಸಾಫ್ಟ್‌ವೇರ್‌ ವೈಫಲ್ಯ, ನಗದು ಅಲಭ್ಯತೆ ಮುಂತಾದವುಗಳನ್ನು ಅಧಿಕೃತ ವಹಿವಾಟಾಗಿ ಪರಿಗಣಿಸಬಾರದು ಎಂದೂ ಸೂಚಿಸಿದೆ.

ABOUT THE AUTHOR

...view details