ಕರ್ನಾಟಕ

karnataka

ETV Bharat / business

ಅಗ್ಗದ ಬೆಲೆಗೆ ಔಷಧ ಮಾರುವ 18ರ ಯಂಗ್​ CEO:  ಅರ್ಜುನ್​ ಕನಸಿಗೆ 'ಶ್ರೀಕೃಷ್ಣ'ನಂತಾದ ರತನ್​ ಟಾಟಾ - ಸ್ಟಾರ್ಟ್​ಅಪ್ ಜನರಿಕ್ ಆಧಾರ್

ರತನ್ ಟಾಟಾ ಅವರು ಯುವಕನ ಮಹತ್ವಾಕಾಂಕ್ಷಿ ವ್ಯವಹಾರ ಯೋಜನೆಯ ಬಗ್ಗೆ ತಿಳಿದುಕೊಂಡರು. ಔಷಧ ಉದ್ಯಮದ ಜನತಾ ಕಾಳಜಿಗೆ​ ಪ್ರಭಾವಿತರಾದರು. ಮತ್ತು ವೈಯಕ್ತಿಕ ಸಾಮರ್ಥ್ಯದಲ್ಲಿ ತಾವೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ನಿರ್ಧರಿಸಿದರು. ಪ್ರತಿಯೊಬ್ಬ ಭಾರತೀಯನಿಗೂ ಜೆನೆರಿಕ್ ಔಷಧ ತಲುಪಿಸುವ ಯುವ ಕನಸುಗಾರನಿಗೆ ಶಕ್ತಿ ತುಂಬಿದರು. ತಮ್ಮ ವೈಯಕ್ತಿಕ ಉಳಿತಾಯದ ಪಾಲು ಯುವಕನ ಸ್ಟಾರ್ಟ್​ಅಪ್ ಜನರಿಕ್​ ಆಧಾರ್​​ನಲ್ಲಿ ಹೂಡಿಕೆ ಮಾಡಿದ್ದಾರೆ.

Ratan Tata

By

Published : May 7, 2020, 11:09 PM IST

ನವದೆಹಲಿ:ಟಾಟಾ ಸನ್ಸ್‌ನ ಚೇರ್ಮನ್ ರತನ್ ಟಾಟಾ ಅವರು ತಮ್ಮ ವೈಯಕ್ತಿಕ ಮೊತ್ತದ ಬಂಡವಾಳವನ್ನು ಔಷಧೀಯ ಸ್ಟಾರ್ಟ್ಅಪ್​ನ ಜೆನೆರಿಕ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ.

ಈ ಸ್ಟಾರ್ಟ್ಅಪ್ ಅನ್ನು ಸ್ಥಾಪಕ ಮತ್ತು ಸಿಇಒ ಆಗಿರುವ 18 ವರ್ಷದ ಅರ್ಜುನ್ ದೇಶಪಾಂಡೆ ನಿರ್ವಹಿಸುತ್ತಿದ್ದಾರೆ. ಮುಂಬೈ ಮೂಲದ ಯಂಗ್ ಸಿಇಒ, ಜನಸಾಮನ್ಯರಿಗೆ ಕೈಗೆಟುಕುವ ಔಷಧಗಳನ್ನು ದೊರೆಯುಂತಾಗಲಿ ಎಂಬ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಈ ಉದ್ಯಮ ಆರಂಭಿಸಿದ್ದರು.

ರತನ್ ಟಾಟಾ ಅವರು ಯುವಕನ ಮಹತ್ವಕಾಂಕ್ಷಿ ವ್ಯವಹಾರ ಯೋಜನೆಯ ಬಗ್ಗೆ ತಿಳಿದುಕೊಂಡರು. ಔಷಧಿ ಉದ್ಯಮದ ಜನತಾ ಕಾಳಜಿಗೆ​ ಪ್ರಭಾವಿತರಾದರು. ಮತ್ತು ವೈಯಕ್ತಿಕ ಸಾಮರ್ಥ್ಯದಲ್ಲಿ ತಾವೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ನಿರ್ಧರಿಸಿದರು. ಪ್ರತಿಯೊಬ್ಬ ಭಾರತೀಯನಿಗೂ ಜೆನೆರಿಕ್ ಔಷಧ ತಲುಪಿಸುವ ಯುವ ಕನಸುಗಾರನಿಗೆ ಶಕ್ತಿತುಂಬಿದರು. ತಮ್ಮ ವೈಯಕ್ತಿಕ ಉಳಿತಾಯದ ಪಾಲು ಯುವಕನ ಸ್ಟಾರ್ಟ್​ಅಪ್ ಜನರಿಕ್​ ಆಧಾರ್​​ನಲ್ಲಿ ಹೂಡಿಕೆ ಮಾಡಿದ್ದಾರೆ.

ಅರ್ಜುನ್ ದೇಶಪಾಂಡೆ

ಯುವ ಉದ್ಯಮಿಯು ಆರಂಭದಲ್ಲೂ ಜೆನೆರಿಕ್ ಔಷಧಗಳನ್ನು ನೇರವಾಗಿ ಉತ್ಪಾದಕರಿಂದ ಪಡೆಯುತ್ತಿದ್ದಾನೆ. ಅದನ್ನು ಚಿಲ್ಲರೆ ಔಷಧಾಲಯಗಳಿಗೆ ಮಾರಾಟ ಮಾಡುತ್ತಾನೆ. ಇದು ಶೇ 16-20ರಷ್ಟು ಸಗಟು ವ್ಯಾಪಾರದ ಅಂಚು ತೆಗೆದುಹಾಕುತ್ತದೆ. ಈ ಔಷಧಾಲಯಗಳು ಏಕ ವೈದ್ಯಕೀಯ ಮಳಿಗೆಗಳಾಗಿದ್ದು, ಮಾರುಕಟ್ಟೆಯಲ್ಲಿ ದೊಡ್ಡ ಬ್ರಾಂಡ್‌ಗಳ ಮತ್ತು ಆನ್‌ಲೈನ್ ಔಷಧಾಲಯಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿತ್ತು. ಇದನ್ನು ತಗ್ಗಿಸಲು ಲಾಭ ಹಂಚಿಕೆ ಮಾದರಿಯನ್ನು ಅನುಸರಿಸಿ, ಜೆನೆರಿಕ್ ಆಧಾರದ ಮುಂಬೈ, ಪುಣೆ, ಬೆಂಗಳೂರು ಮತ್ತು ಒಡಿಶಾದ 30 ಚಿಲ್ಲರೆ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡ.

ಮುಂಬರುವ ದಿನಗಳಲ್ಲಿ ಫ್ರಾಂಚೈಸಿ ಆಧಾರಿತ ಮಾದರಿಯಲ್ಲಿ 1,000 ಔಷಧಾಲಯಗಳ ಜತೆ ಪಾಲುದಾರಿಕೆ ಮಾಡಿಕೊಳ್ಳಲು ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ಮತ್ತು ದೆಹಲಿಯಂತಹ ನಗರಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಯೋಜಿಸಿದೆ. ಜೆನೆರಿಕ್ ಆಧಾರಿತ ಸರಿಯಾದ ತಂತ್ರಜ್ಞಾನ, ಐಟಿ ಸೌಕರ್ಯ ಮತ್ತು ಬ್ರ್ಯಾಂಡಿಂಗ್ ಅನ್ನು ಮುಂಚೂಣಿಗೆ ತರುವ ಮೂಲಕ ಅಸಂಘಟಿತ ವಲಯಕ್ಕೆ ಬೆಂಬಲ ನೀಡಲಿದೆ.

ಈ ಸ್ಟಾರ್ಟ್ಅಪ್ ವಾರ್ಷಿಕ 6 ಕೋಟಿ ರೂ.ಯಷ್ಟು ಆದಾಯ ಹೊಂದಿದೆ. ಮುಂದಿನ ಮೂರು ವರ್ಷಗಳಲ್ಲಿ 150-200 ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆ ಯುವ ಉದ್ಯಮಿ ದೇಶಪಾಂಡೆ ಇರಿಸಿಕೊಂಡಿದ್ದಾರೆ.

ದೇಶಪಾಂಡೆ ಅವರ ಉದ್ಯಮ ಲಕ್ಷಾಂತರ ಜನರಿಗೆ ಕೈಗೆಟುಕುವ ಆರೋಗ್ಯ ಸೇವೆ ತರುವ ಮಹತ್ವದ ಗುರಿ ಹೊಂದಿದೆ. ಅಗ್ಗದ ಔಷಧಗಳನ್ನು ತಲುಪಿಸುವ ಆಲೋಚನೆ ಜತೆಗೆ ಹಿರಿಯ ನಾಗರಿಕರು ಮತ್ತು ಪಿಂಚಣಿದಾರರಿಗೆ ಅರ್ಹವಾದ ಆರೈಕೆ ಒದಗಿಸುವುದು ಸದುದ್ದೇಶ ಸಹ ಹೊಂದಿದೆ.

ABOUT THE AUTHOR

...view details