ನವದೆಹಲಿ:ಭಾರತೀಯ ವಾಹನೋದ್ಯಮ ವಲಯ ಮಂದಗತಿಯಲ್ಲಿ ಸಾಗುತ್ತಿದೆ. ಕ್ಷೀಣಿಸಿದ ಮಾರಾಟದ ಸಂಖ್ಯೆಗಳಿಂದಾಗಿ ಉದ್ಯಮದಲ್ಲಿ ದೀರ್ಘಕಾಲದ ಕಗ್ಗತ್ತಲು ಆವರಿಸಿದೆ. ನಿಧಾನಗತಿಯ ಬಳಕೆಯಿಂದಾಗಿ ವಾಹನಗಳ ಬೇಡಿಕೆಯನ್ನು ಪುನರುಜ್ಜೀವನಗೊಳಿಸಿಬೇಕಿದೆ. ಇಂತಹ ಸಂದರ್ಭದಲ್ಲಿ ಉದ್ಯಮಿ ದಿಗ್ಗಜ ರತನ್ ಟಾಟಾ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ವಾಹನೋದ್ಯಮ ಸಂಬಂಧ ಕೆಲವು ವಾಣಿಜ್ಯಾತ್ಮಕ ಸಲಹೆಗಳನ್ನು ನೀಡಿದ್ದಾರೆ.
'ಆಟೋ ಎಕ್ಸ್‌ಪೋ 2020' ದಹನಕಾರಿ ಎಂಜಿನ್‌ಗಳಿಂದ ಎಲೆಕ್ಟ್ರಿಕ್ ಎಂಜಿನ್‌ಗಳಿಗೆ ಟೆಕ್ಟೋನಿಕ್ ಪರಿವರ್ತನೆಗೆ ಸಾಕ್ಷಿಯಾಗಿದೆ. 'ಹಸಿರು' ಪರಿವರ್ತನೆಯು ಜಾಗತಿಕ ಹವಾಮಾನ ವೈಪರೀತ್ಯದ ಬೇಡಿಕೆಗಳು ಮತ್ತು ಬದಲಾಗುತ್ತಿರುವ ಗ್ರಾಹಕರ ಆದ್ಯತೆಗೆ ಸೇತುವೆಯಾಗಲಿದೆ. ಪರಿವರ್ತನೆಯ ಹೇರಿಕೆಯನ್ನು ಅನೇಕ ಉದ್ಯಮದ ಪ್ರಮುಖರು ಈ ವೇಳೆ ಪ್ರಶ್ನಿಸಿದ್ದರು.
ಭವಿಷ್ಯದ ವಾಹನೋದ್ಯಮದ ಚಲನಶೀಲತೆಯ ಕುರಿತು ಮಾತನಾಡಿದ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ, ಭವಿಷ್ಯದ ಕಾರುಗಳಿಗೆ ಪ್ರೊಪಲ್ಷನ್ ವ್ಯವಸ್ಥೆಗಳ ಬಗ್ಗೆ 'ಬಿಗುವಾದ ದೃಷ್ಟಿಕೋನ' ತೆಗೆದುಕೊಳ್ಳುವಂತೆ ವಾಹನ ಉದ್ಯಮ ಮತ್ತು ವಿಶ್ವದಾದ್ಯಂತ ಇರುವ ಸರ್ಕಾರಗಳನ್ನು ಕೇಳಿಕೊಂಡಿದ್ದಾರೆ. ಸುಗಮ ಪರಿವರ್ತನೆಗಾಗಿ ಯೋಜನೆಗಳನ್ನು ರೂಪಿಸುವಾಗ ಸರ್ಕಾರಗಳು ವಾಸ್ತವಿಕ ಅಂಶಗಳತ್ತ ಸಹ ಗಮನಹರಿಸಬೇಕು. ಇದರಲ್ಲಿ ದಕ್ಷ ದಹನಕಾರಿ ಎಂಜಿನ್ಗಳು ಮತ್ತು ಮಿಶ್ರತಳಿಗಳು ಸಹ ಸೇರಿವೆ ಎಂದರು.