ಬೆಂಗಳೂರು :ದೇಶಾದ್ಯಂತ ಆನ್‌ಲೈನ್ ಬೈಕ್ ಮತ್ತು ಟ್ಯಾಕ್ಸಿ ಸೇವಾ ಪೂರೈಕೆದಾರ ರಾಪಿಡೋ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಸೌಲಭ್ಯ ಬಿಡುಗಡೆ ಮಾಡಿದೆ.
ವಿವಿಧ ಸ್ಥಳಗಳಲ್ಲಿ ನಿಲ್ಲಿಸಿ ತಮ್ಮ ನಿತ್ಯದ ಕಾಯಕ ಕೈಗೊಳ್ಳುವವರಿಗೆ ‘ಮಲ್ಟಿಪಾಯಿಂಟ್ ಟ್ರಿಪ್’ ಸೌಲಭ್ಯ ಪ್ರಾರಂಭಿಸುವುದಾಗಿ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸೇವೆಗಳು ಬೆಂಗಳೂರು ಸೇರಿ ದೆಹಲಿ, ಹೈದರಾಬಾದ್, ಚೆನ್ನೈ, ಕೋಲ್ಕತಾ ಮತ್ತು ಜೈಪುರದಲ್ಲಿ ಲಭ್ಯವಿರಲಿದೆ.
ಈ ಪ್ಯಾಕೇಜುಗಳು ಒಂದು, ಎರಡು, ಮೂರು, ನಾಲ್ಕು ಅಥವಾ ಆರು ಗಂಟೆಗಳ ಕಾಲ ಲಭ್ಯವಾಗಲಿವೆ. ಟ್ರಿಪ್ ಮುಗಿಯುವವರೆಗೂ ವಾಹನ ಓಡಿಸಲು ಕ್ಯಾಪ್ಟನ್ ಜತೆಗೆ ಇರುತ್ತಾನೆ ಎಂದು ಕಂಪನಿ ತಿಳಿಸಿದೆ.