ಕರ್ನಾಟಕ

karnataka

ETV Bharat / business

ಮೊಬೈಲ್​ ದುನಿಯಾ ಆಳಿದ್ದ ನೋಕಿಯಾ ಸಿಇಒ ಹುದ್ದೆಗೆ ವಿದಾಯ ಹೇಳಿದ ಸೂರಿ - ರಾಜೀವ್ ಸೂರಿ

ಸೂರಿ ಅವರು ನೋಕಿಯಾ ಬೋರ್ಡ್​ನ ನಿರ್ದೇಶಕ ಹುದ್ದೆಯಿಂದ ಕೆಳಗಿಳಿಯುವುದಾಗಿ ಈ ಹಿಂದೆಯೇ ಸುಳಿವು ಬಿಟ್ಟುಕೊಟ್ಟಿದ್ದರು. 'ನೋಕಿಯಾದಲ್ಲಿ 25 ವರ್ಷಗಳ ನಂತರ ನಾನು ಬೇರೆ ಏನನ್ನಾದರೂ ಮಾಡಲು ಬಯಸುತ್ತೇನೆ' ಎಂದು ಸೂರಿ ಹೇಳಿದ್ದಾರೆ.

Nokia
ನೋಕಿಯಾ

By

Published : Mar 2, 2020, 4:24 PM IST

ನವದೆಹಲಿ: ನೋಕಿಯಾ ಆ್ಯಂಡ್​ ನೋಕಿಯಾ ಸೀಮೆನ್ಸ್ ನೆಟ್‌ವರ್ಕ್‌ಗಳ ಅಧ್ಯಕ್ಷ ಮತ್ತು ಸಿಇಒ ಆಗಿ ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ರಾಜೀವ್ ಸೂರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಸೂರಿ ಅವರು ನೋಕಿಯಾ ಬೋರ್ಡ್​ನ ನಿರ್ದೇಶಕ ಹುದ್ದೆಯಿಂದ ಕೆಳಗಿಳಿಯುವುದಾಗಿ ಈ ಹಿಂದೆಯೇ ಸುಳಿವು ಬಿಟ್ಟುಕೊಟ್ಟಿದ್ದರು. 'ನೋಕಿಯಾದಲ್ಲಿ 25 ವರ್ಷಗಳ ನಂತರ ನಾನು ಬೇರೆ ಏನನ್ನಾದರೂ ಮಾಡಲು ಬಯಸುತ್ತೇನೆ' ಎಂದು ಸೂರಿ ಹೇಳಿದ್ದಾರೆ.

ನೋಕಿಯಾ ಯಾವಾಗಲೂ ನನ್ನ ಭಾಗವಾಗಲಿದೆ. ನನ್ನನ್ನು ಉತ್ತಮ ನಾಯಕನನ್ನಾಗಿ ಮಾಡಲು ನೆರವಾದವರಿಗೂ ಹಾಗೂ ನನ್ನ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಪ್ರಸ್ತುತ ಫಿನ್‌ಲ್ಯಾಂಡ್‌ನ ಎಸ್ಪೂ ಮೂಲದ ಇಂಧನ ಕಂಪನಿಯಾದ ಫೋರ್ಟಮ್‌ನ ಅವರು ಅಧ್ಯಕ್ಷ ಮತ್ತು ಸಿಇಒ ಆಗಿ ಸೆಪ್ಟೆಂಬರ್ 1ರಂದು ಹುದ್ದೆ ಅಲಂಕರಿಸುವ ನಿರೀಕ್ಷೆಯಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

ABOUT THE AUTHOR

...view details