ಕರ್ನಾಟಕ

karnataka

ETV Bharat / business

ಲಾಕ್​ಡೌನ್​ ವೇಳೆ ರೈಲ್ವೆ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ 1,885 ಕೋಟಿ ರೂ. ರಿಟರ್ನ್​ - ಕಾಯ್ದಿರಿಸಿದ ಟಿಕೆಟ್ ಹಣ ಮರುಪಾವತಿ

ಆನ್‌ಲೈನ್ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಮಾರ್ಚ್ 21ರಿಂದ ಮೇ 31ರ ಅವಧಿಯಲ್ಲಿ ಪ್ರಯಾಣಿಕರಿಗೆ ಟಿಕೆಟ್ ರದ್ದತಿಗೆ ರೈಲ್ವೆಯು 1,885 ಕೋಟಿ ರೂ. ಮರುಪಾವತಿಸಿದೆ. ಇದರಲ್ಲಿ ಖರೀದಿಸಿದ ಟಿಕೆಟ್‌ನ ಸಂಪೂರ್ಣ ವೆಚ್ಚ ಸಹ ಸೇರಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.

Indian railway
ರೈಲ್ವೆ ಇಲಾಖೆ

By

Published : Jun 4, 2020, 7:15 PM IST

ನವದೆಹಲಿ:ಲಾಕ್​ಡೌನ್ ಅವಧಿಯಲ್ಲಿ ಟಿಕೆಟ್ ಕಾಯ್ದಿರಿಸಿದ ಮತ್ತು ಟಿಕೆಟ್ ರದ್ದುಗೊಳಿಸಿದ ಪ್ರಯಾಣಿಕರಿಗೆ 1,885 ಕೋಟಿ ರೂ. ಮರುಪಾವತಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಭಾರತೀಯ ರೈಲ್ವೆಯು ರಾಷ್ಟ್ರವ್ಯಾಪಿ ಲಾಕ್​ಡೌನ್ ವೇಳೆ ತನ್ನ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಿತ್ತು.

ರೈಲುಗಳನ್ನು ಸಾಮೂಹಿಕವಾಗಿ ರದ್ದುಗೊಳಿಸಿದ್ದರಿಂದ ರೈಲ್ವೆ ಪ್ರಯಾಣಿಕರಿಗೆ ಮರುಪಾವತಿ ಮಾಡಲು ಅಪಾರ ಪ್ರಮಾಣದ ಹಣ ಹಿಂದಿರುಗಿಸುವ ಸವಾಲು ರೈಲ್ವೆ ಇಲಾಖೆಗೆ ಎದುರಾಗಿತ್ತು.

ಆನ್‌ಲೈನ್ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಮಾರ್ಚ್ 21ರಿಂದ ಮೇ 31ರ ಅವಧಿಯಲ್ಲಿ ಪ್ರಯಾಣಿಕರಿಗೆ ಟಿಕೆಟ್ ರದ್ದತಿಗೆ ರೈಲ್ವೆಯು 1,885 ಕೋಟಿ ರೂ. ಮರುಪಾವತಿಸಿದೆ. ಇದರಲ್ಲಿ ಖರೀದಿಸಿದ ಟಿಕೆಟ್‌ನ ಸಂಪೂರ್ಣ ವೆಚ್ಚ ಸಹ ಸೇರಿದೆ ಎಂದು ಹೇಳಿದೆ.

ABOUT THE AUTHOR

...view details