ಕರ್ನಾಟಕ

karnataka

ETV Bharat / business

ಟಿಕೆಟ್ ದರ ಏರಿಕೆಯ ಬೆನ್ನ​ಲ್ಲೇ ರೈಲ್ವೆಯಿಂದ ಮತ್ತೊಂದು ಮಹತ್ವದ ಘೋಷಣೆ..! - ಸಹವಾಣಿ ಸಂಖ್ಯೆ 139

ರೈಲ್ವೆ ಪ್ರಯಾಣಿಕರಿಗೆ ಯಾತ್ರೆಯ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಇಲಾಖೆಗೆ ಮನವರಿಕೆ ಮಾಡಿಕೊಳ್ಳಲು ಸಿಂಗಲ್ ನಂಬರ್​ '139'ಗೆ ಕರೆ ಮಾಡುವ ಸೇವೆ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Railway
ರೈಲ್ವೆ

By

Published : Jan 2, 2020, 8:14 PM IST

ನವದೆಹಲಿ: ಭಾರತೀಯ ರೈಲ್ವೆಯು ಕೆಲ ದಿನಗಳ ಹಿಂದೆಯಷ್ಟೇ ದರ ಏರಿಕೆಯ ನಿರ್ಧಾರ ಪ್ರಕಟಿಸಿ ಬಳಿಕ ಈಗ ಮತ್ತೊಂದು ಮಹತ್ವದ ಬದಲಾವಣೆಯನ್ನು ತರುವುದಾಗಿ ಘೋಷಿಸಿದೆ.

ರೈಲ್ವೆ ಪ್ರಯಾಣಿಕರಿಗೆ ಯಾತ್ರೆಯ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಇಲಾಖೆಗೆ ಮನವರಿಕೆ ಮಾಡಿಕೊಳ್ಳಲು ಸಿಂಗಲ್ ನಂಬರ್​ '139'ಗೆ ಕರೆ ಮಾಡುವ ಸೇವೆ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ರೈಲ್ವೆ, ತನ್ನ ರೈಲು ಪ್ರಯಾಣದ ಸಮಯದಲ್ಲಿನ ತ್ವರಿತ ಕುಂದುಕೊರತೆ ಪರಿಹಾರ ಮತ್ತು ಪ್ರಯಾಣಿಕರ ವಿಚಾರಣೆಗಳನ್ನು '139' ಎಂಬ ಏಕ ಸಂಖ್ಯೆಗೆ ಸಂಯೋಜಿಸಲಿದೆ ಎಂದಿದೆ.

ಹೊಸ ಸಹಾಯವಾಣಿ ಸಂಖ್ಯೆ 139, ಅಸ್ತಿತ್ವದಲ್ಲಿರುವ ಎಲ್ಲಾ ಸಹಾಯವಾಣಿ ಸಂಖ್ಯೆಗಳನ್ನು (182 ಹೊರತುಪಡಿಸಿ) ತೆಗೆದುಕೊಳ್ಳುತ್ತದೆ. ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ತಮ್ಮ ಎಲ್ಲಾ ಅಗತ್ಯಗಳಿಗಾಗಿ ರೈಲ್ವೆಯೊಂದಿಗೆ ಸಂಪರ್ಕ ಸಾಧಿಸಲು ಈ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದು ಸುಲಭವಾಗಲಿದೆ ಎಂದು ಬದಲಾವಣೆಗೆ ಸ್ಪಷ್ಟನೆ ನೀಡಿದೆ.

ರೈಲ್ವೆ ಭದ್ರತೆಗಾಗಿ ಸಹಾಯವಾಣಿ ಸಂಖ್ಯೆಯಾದ 182 ಯಥಾವತ್ತಾಗಿ ಚಾಲ್ತಿಯಲ್ಲಿ ಇರುತ್ತದೆ. 139 ನಂಬರ್​ ಇಂಟರ್​ಆ್ಯಕ್ಟಿವ್ ವಾಯ್ಸ್​ ರೆಸ್ಪಾನ್ಸ್​ ಸಿಸ್ಟಮ್​ (ಐವಿಆರ್​ಸ್​) ಅಡಿ 12 ಭಾಷೆಗಳಲ್ಲಿ ಸೇವೆ ನೀಡಲಿದೆ. ಸ್ಮಾರ್ಟ್​​ಫೋನ್​ ಜೊತೆಗೆ ಯಾವುದೇ ನಂಬರ್​ನಿಂದ ಕರೆ ಮಾಡಬಹುದು. ಪ್ರಾಯಾಣಿಕರು ಕ್ಯಾಟರಿಂಗ್​ ಸಮಸ್ಯೆಗೆ 3 ಹಾಗೂ ಸಾಮಾನ್ಯ ಸಮಸ್ಯೆಗೆ 4 ನಂಬರ್ ಆಯ್ಕೆ ಮಾಡಬಹುದು ಎಂದು ವಿವರಿಸಿದೆ.

ABOUT THE AUTHOR

...view details