ಕರ್ನಾಟಕ

karnataka

ETV Bharat / business

ರೈಲ್ವೆ ಅಪಘಾತ ತಡೆಯುವ 'ತ್ರಿನೇತ್ರ'ಕ್ಕೆ ಮಂಜು ಅಡ್ಡಿ: ಜಾಗತಿಕ ಹೆಗ್ಗಳಿಕೆಗೆ ಕಾಯುತ್ತಿರುವ ಭಾರತ

ಒಂದು ಕಿ.ಮಿ. ದೂರದಿಂದಲ್ಲೇ ಹಳಿಯ ಮೇಲಿರುವ ವಸ್ತುಗಳನ್ನು ಗುರುತಿಸುವ ರೀತಿಯ ವ್ಯವಸ್ಥೆ ತ್ರಿನೇತ್ರ ತಂತ್ರಜ್ಞಾನ ಹೊಂದಿದೆ. ರಾಡಾರ್ ಹಾಗೂ ಲೇಸರ್​ನ ಟೆರೇನ್‌ ಇಮೇಜಿಂಗ್ ವಿಷನ್ ತಂತ್ರಜ್ಞಾನವನ್ನು ರೈಲ್ವೆ ಇಲಾಖೆಯಲ್ಲಿ ಬಳಕೆ ಮಾಡುವ ವ್ಯವಸ್ಥೆ ಜಾರಿಯಾಗಿದ್ದೇ ಆದಲ್ಲಿ ಈ ವಿನೂತನ ವ್ಯವಸ್ಥೆಯನ್ನು ಮೊದಲ ಬಾರಿಗೆ ಜಾರಿಗೆ ತಂದ ಹೆಗ್ಗಳಿಕೆ ಭಾರತದ್ದಾಗಿರಲಿದೆ.

ಸಾಂದರ್ಭಿಕ ಚಿತ್ರ

By

Published : Jun 28, 2019, 6:33 PM IST

ನವದೆಹಲಿ: 'ತ್ರಿನೇತ್ರ' ತಂತ್ರಜ್ಞಾನ ಪರೀಕ್ಷಾರ್ಥ ಪ್ರಯೋಗ ಹಂತದಲ್ಲಿದ್ದು, ಮಂಜು ಸುರಿಯುವ ವೇಳೆ ಹಳಿಗಳಲ್ಲಿನ ಯಾವುದೇ ಅಡೆತಡೆಗಳು ಪತ್ತೆಹಚ್ಚಲು ಪರಿಪೂರ್ಣವಾಗಿ ನೆರವಾದ ಬಳಿಕವೇ ಇದು ಚಾಲನೆಗೆ ಬರಲಿದೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್​ ಹೇಳಿದ್ದಾರೆ.

ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಲಿಖಿತ ಉತ್ತರ ನೀಡಿದ ಸಚಿವರು, ರೈಲ್ವೆ ಅಪಘಾತ ತಡೆಯುವ ಉದ್ದೇಶದಿಂದ ತ್ರಿನೇತ್ರ ತಂತ್ರಜ್ಞಾನ ಜಾರಿಗೆ ಬರಲಿದೆ. ರೈಲ್ವೆಯಲ್ಲಿ ಅಳವಡಿಸಿಕೊಳ್ಳುತ್ತಿರುವ ಮೊತ್ತೊಂದು ಅತ್ಯಾಧುನಿಕ ತಂತ್ರಜ್ಞಾನ ಪ್ರಾಯೋಗಿಕ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ತ್ರಿನೇತ್ರಾ ಸಾಧನವು ಮಂಜು ಸುರಿಯುವ ಸಮಯದಲ್ಲಿ ಅಲ್ಟ್ರಾಸಾನಿಕ್ ತರಂಗಗಳ ಮೂಲಕ ಹಳಿ ಮೇಲಿರುವ ಯಾವುದೇ ರೀತಿಯ ಅಪಾಯ ಕಂಡುಹಿಡಿಯಲು ನೆರವಾಗುತ್ತದೆ. ಸದ್ಯ ಇದು ಪರೀಕ್ಷೆಯ ಹಂತದಲ್ಲಿದ್ದು, ಪರೀಕ್ಷಾರ್ಥ ಪ್ರಯೋಗ ಯಶಸ್ವಿ ಆಗುವವರೆಗೂ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

2002-03ರಲ್ಲಿ ತ್ರಿನೇತ್ರ ಅಭಿವೃದ್ಧಿಪಡಿಸಲು ವ್ಯಾಪಕವಾಗಿ ಪ್ರಯತ್ನಿಸಲಾಯಿತು. ಪ್ರಯೋಗ ಯಶಸ್ವಿ ಆಗುವವರೆಗೂ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಅದು ಎಷ್ಟರ ಮಟ್ಟಿಗೆ ಹಾನಿ ಉಂಟುಮಾಡಬಲ್ಲದು ಎಂಬುದು ತಿಳಿಯಬೇಕು. ಹೀಗಾಗಿ, ಆ ಯೋಜನೆ ಸ್ಥಗಿತಗೊಳಿಸಿದ ಬಳಿಕ ಇದರ ಬದಲಿ ಪ್ರಯೋಗವನ್ನು ನಡೆಸಲಾಯಿತು. ಮಂಜು ಹಿಂದಿನ ವಸ್ತುವನ್ನು ಗುರುತಿಸಲು ಮತ್ತೊಂದು ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದೆವು. ಇದು ಈಗ ಪ್ರಯೋಗದ ಹಂತದಲ್ಲಿದೆ ಎಂದು ಗೋಯಲ್​ ವಿವರಿಸಿದರು.

ಏನಿದು ತ್ರಿನೇತ್ರ..?
ಟೆರೇನ್‌ ಇಮೇಜಿಂಗ್ ವಿಷನ್ ತಂತ್ರಜ್ಞಾನವನ್ನು ಬಳಸಿ ರೈಲ್ವೆ ಅಪಘಾತಗಳನ್ನು ತಡೆಯುವ ಸಾಧನ. ರೈಲು ಹಳಿಗಳ ಮೇಲೆ ನಡೆಯುವ ಪ್ರತಿಯೊಂದು ಘಟನಾವಳಿಗಳನ್ನು ಈ ಟೆರೇನ್ ಇಮೇಜಿಂಗ್ ವಿಷನ್ ತಂತ್ರಜ್ಞಾನ ದಾಖಲು ಮಾಡಿಕೊಳ್ಳಲಿದ್ದು, ಇದರಿಂದಾಗಿ ರೈಲು ಹಳಿಗಳ ಮೇಲೆ ನಡೆಯುವ ಅಪಘಾತಗಳನ್ನು ನಿಯಂತ್ರಿಸಬಹುದು.

ಒಂದು ಕಿ.ಮಿ. ದೂರದಿಂದಲ್ಲೇ ಹಳಿಯ ಮೇಲಿರುವ ವಸ್ತುಗಳನ್ನು ಗುರುತಿಸುವ ರೀತಿಯ ವ್ಯವಸ್ಥೆ ಹೊಂದಿದೆ. ರಾಡಾರ್ ಹಾಗೂ ಲೇಸರ್​ನ ಟೆರೇನ್‌ ಇಮೇಜಿಂಗ್ ವಿಷನ್ ತಂತ್ರಜ್ಞಾನವನ್ನು ರೈಲ್ವೆ ಇಲಾಖೆಯಲ್ಲಿ ಬಳಕೆ ಮಾಡುವ ವ್ಯವಸ್ಥೆ ಜಾರಿಯಾಗಿದ್ದೆ ಆದಲ್ಲಿ ಈ ವಿನೂತನ ವ್ಯವಸ್ಥೆಯನ್ನು ಮೊದಲ ಬಾರಿಗೆ ಜಾರಿಗೆ ತಂದ ಹೆಗ್ಗಳಿಕೆ ಭಾರತದ್ದಾಗಿರಲಿದೆ.

For All Latest Updates

TAGGED:

ABOUT THE AUTHOR

...view details