ಕರ್ನಾಟಕ

karnataka

ETV Bharat / business

ರಾಷ್ಟ್ರೀಯ ರೈಲ್ವೆ ಯೋಜನೆ 2030: ಇನ್ಮುಂದೆ ನೋ ವೇಟಿಂಗ್ ಲಿಸ್ಟ್! - ರೈಲ್ವೆ ಸರಕು ಸಾಗಾಣೆ

ಸರಕು ಆದಾಯ ಹೆಚ್ಚಿಸುವ ಉದ್ದೇಶದಿಂದ ರೈಲ್ವೆಯು 2030ರ ವೇಳೆಗೆ ದೇಶದ ಒಟ್ಟು ಸರಕು ಸಾಗಣೆಯ ಶೇ 47ರಷ್ಟು ಸಾಗಿಸುವ ಗುರಿ ಇರಿಸಿಕೊಂಡಿದೆ. ಇದು ಪ್ರಸ್ತುತ 27 ಪ್ರತಿಶತದಷ್ಟಿದೆ. ರಾಷ್ಟ್ರೀಯ ರೈಲ್ವೆ ಯೋಜನೆಯ ಭಾಗವಾದ ವಿಷನ್ 2024ರ ಅಡಿ ರೈಲ್ವೆಯು 2024ರ ವೇಳೆಗೆ 2024 ಮಿಲಿಯನ್​ ಟನ್ ಸರಕು ಸಾಗಣೆ ಮಾಡುವಂತಹ ನೀಲನಕ್ಷೆ ಸಿದ್ಧಪಡಿಸಿದೆ.

Railway
ರಾಷ್ಟ್ರೀಯ ರೈಲ್ವೆ

By

Published : Dec 18, 2020, 9:07 PM IST

ನವದೆಹಲಿ: ಭಾರತೀಯ ರೈಲ್ವೆಯು ರಾಷ್ಟ್ರೀಯ ರೈಲು ಯೋಜನೆ 2030 ತರಲು ಸಜ್ಜಾಗಿದ್ದು, ಪ್ರಯಾಣಿಕರಿಗೆ ಉತ್ತಮ ಸೇವಾ ಸೌಲಭ್ಯ ಹಾಗೂ ಸರಕು ಸಾಗಣೆ ಪ್ರಮಾಣ ದ್ವಿಗುಣಗೊಳಿಸಿಕೊಳ್ಳುವ ಉದ್ದೇಶ ಇರಿಸಿಕೊಂಡಿದೆ.

ಸಾರಿಗೆಯ ಆದಾಯವನ್ನು ಸುಧಾರಿಸಲು, ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ರಾಷ್ಟ್ರೀಯ ರೈಲ್ವೆ ಯೋಜನೆ 2030 ಹೊಂದಿದೆ. ಸಾರ್ವಜನಿಕ ಸಮಾಲೋಚನೆಗಾಗಿ ಯೋಜನೆಯ ಅಂತಿಮ ಕರಡನ್ನು ಶುಕ್ರವಾರ ಬಿಡುಗಡೆ ಮಾಡಿತು. ಪ್ರತಿಕ್ರಿಯೆ ಪಡೆಯಲು ಕರಡಿನ ಪ್ರತಿಗಳನ್ನು ಎಲ್ಲ ಸ್ಟಾಕ್​ಹೋಲ್ಡರ್​ ಮತ್ತು ವಿವಿಧ ಸಚಿವಾಲಯಗಳಿಗೆ ಕಳುಹಿಸಲಾಗುವುದು.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್, ರಾಷ್ಟ್ರೀಯ ರೈಲ್ವೆ ಯೋಜನೆ 2030ರ ಅಡಿ ಎಲ್ಲಾ ಪ್ರಯಾಣಿಕರಿಗೆ ದೃಢೀಕೃತ ರೈಲು ಟಿಕೆಟ್‌ ಒದಗಿಸುವ ಗುರಿ ಹೊಂದಿದೆ. ಇದಕ್ಕಾಗಿ 100ಕ್ಕೂ ಅಧಿಕ ಕಡೆ ಪ್ರತಿನಿಧಿ ಸ್ಥಳಗಳಲ್ಲಿ ಬೇಡಿಕೆ ಮೌಲ್ಯಮಾಪನ ನಡೆಯುತ್ತದೆ. ಟಿಕೆಟ್ ವ್ಯವಸ್ಥೆಯನ್ನು ರೈಲ್ವೆಯ ಅಂಗಸಂಸ್ಥೆಯಾದ ಐಆರ್‌ಸಿಟಿಸಿ ನಿರ್ವಹಿಸುತ್ತದೆ ಎಂದರು.

ನುರಿತ ಗುತ್ತಿಗೆ ಕೆಲಸಗಾರರ ನೇಮಕ: ಬ್ರಿಟನ್,​ ಐರ್ಲೆಂಡ್, ನೆದರ್​ಲ್ಯಾಂಡ್​​, ಅಮೆರಿಕದಲ್ಲಿ ಭಾರತೀಯರದೇ ಹವಾ!

ಸರಕು ಆದಾಯ ಹೆಚ್ಚಿಸುವ ಉದ್ದೇಶದಿಂದ ರೈಲ್ವೆಯು 2030ರ ವೇಳೆಗೆ ದೇಶದ ಒಟ್ಟು ಸರಕು ಸಾಗಣೆಯ ಶೇ 47ರಷ್ಟು ಸಾಗಿಸುವ ಗುರಿ ಇರಿಸಿಕೊಂಡಿದೆ. ಇದು ಪ್ರಸ್ತುತ 27 ಪ್ರತಿ ಶತದಷ್ಟಿದೆ. ರಾಷ್ಟ್ರೀಯ ರೈಲ್ವೆ ಯೋಜನೆ ಭಾಗವಾದ ವಿಷನ್ 2024ರ ಅಡಿ ರೈಲ್ವೆಯು 2024ರ ವೇಳೆಗೆ 2024 ಮಿಲಿಯನ್​ ಟನ್ ಸರಕು ಸಾಗಣೆ ಮಾಡುವಂತಹ ನೀಲನಕ್ಷೆ ಸಿದ್ಧಪಡಿಸಿದೆ.

ನಾವು ಈಗಾಗಲೇ ಈ ಎಲ್ಲ ಯೋಜನೆಗಳಿಗೆ ಹಣ ಒದಗಿಸಿದ್ದೇವೆ. 2024ರ ಮಾರ್ಚ್​ವರೆಗೆ ವಿವಿಧ ಯೋಜನೆಗಳಿಗೆ ಹಣದ ಹಂಚಿಕೆ ಮಾಡಿದ್ದೇವೆ. ವಿಷನ್ 2024 ರಾಷ್ಟ್ರೀಯ ರೈಲು ಯೋಜನೆಯ ಉಪ ಯೋಜನೆಯಾಗಿದೆ. ಪೂರ್ಣಗೊಳ್ಳುವ ಎಲ್ಲಾ ಯೋಜನೆಗಳ ಪಟ್ಟಿ ಸೂಚಿಸುವ ದಾಖಲೆಯನ್ನು ಬಿಡುಗಡೆ ಮಾಡಿದ್ದೇವೆ ಎಂದರು.

ABOUT THE AUTHOR

...view details