ಕರ್ನಾಟಕ

karnataka

ETV Bharat / business

ನಷ್ಟದ ಕೂಪದಿಂದ ಫೀನಿಕ್ಸ್​ ಹಕ್ಕಿಯಂತೆ ಮೇಲೆದ್ದ PNB! ಈಗ 'ಉಡ್ತಾ ಪಂಜಾಬ್​' -

2020ರ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಪಂಜಾಬ್ ಬ್ಯಾಂಕ್​ನ ವಹಿವಾಟು ಸುಧಾರಣೆ ಕಂಡಿದ್ದು, ಜೂನ್ ತಿಂಗಳಲ್ಲಿ ಬಿಡುಗಡೆಯಾದ ಮಾಹಿತಿ ಅನ್ವಯ, ₹ 1,018 ಕೋಟಿಯಷ್ಟು ನಿವ್ವಳ ಲಾಭ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ ₹ 4,749 ಕೋಟಿ ನಷ್ಟಕ್ಕೆ ತುತ್ತಾಗಿತ್ತು. ಮಾರ್ಚ್​ ತ್ರೈಮಾಸಿಕದಲ್ಲಿ ನಷ್ಟದ ಮೊತ್ತ ₹ 940 ಕೋಟಿ ಇತ್ತು.

ಸಾಂದರ್ಭಿಕ ಚಿತ್ರ

By

Published : Jul 26, 2019, 3:37 PM IST

ನವದೆಹಲಿ: ವಜ್ರೋದ್ಯಮಿ ನೀರವ್ ಮೋದಿಯ ಸಾವಿರಾರು ಕೋಟಿ ರೂಪಾಯಿ ವಂಚನೆಯಿಂದ ನಷ್ಟದ ಕೂಪಕ್ಕೆ ಬಿದ್ದಿದ್ದ ಸಾರ್ವಜನಿಕ ಸ್ವಾಮ್ಯದ ಪಂಜಾಬ್ ನ್ಯಾಷನಲ್​ ಬ್ಯಾಂಕ್​ (ಪಿಎನ್​ಬಿ) ಲಾಭದ ಹಾದಿಗೆ ಮರಳಿದೆ.

2020ರ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ವ್ಯವಹಾರದಲ್ಲಿ ಸುಧಾರಣೆ ಕಂಡಿದ್ದು, ಜೂನ್ ತಿಂಗಳಲ್ಲಿ ಬಿಡುಗಡೆಯಾದ ಮಾಹಿತಿ ಅನ್ವಯ, ₹ 1,018 ಕೋಟಿಯಷ್ಟು ನಿವ್ವಳ ಲಾಭ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ ₹ 4,749 ಕೋಟಿ ನಷ್ಟಕ್ಕೆ ತುತ್ತಾಗಿತ್ತು. ಮಾರ್ಚ್​ ತ್ರೈಮಾಸಿಕದಲ್ಲಿ ನಷ್ಟದ ಮೊತ್ತ ₹ 940 ಕೋಟಿ ಇತ್ತು.

ನಿವ್ವಳ ಬಡ್ಡಿ ಆದಾಯ, ದುರ್ಬಲ ಬಂಡವಾಳ ಅನುಪಾತ ಮತ್ತು ಕೆಲವು ವಂಚನೆಗಳ ನಿಬಂಧನೆಗಳ ಮುಂದೂಡುವಿಕೆಯಿಂದಾಗಿ ಶೇ12 ರಷ್ಟು ಕುಸಿತ ಬ್ಯಾಂಕ್​ನ ಗಳಿಕೆಯ ಮೇಲಿನ ಒತ್ತಡವನ್ನು ಸೂಚಿಸುತ್ತದೆ.

ಜೂನ್ ತ್ರೈಮಾಸಿಕದಲ್ಲಿ ವಸೂಲಾಗದ ಸಾಲದ ಪ್ರಮಾಣ ಅಲ್ಪ ಕುಸಿದಿದೆ. ಸುಮಾರು ₹ 77,000 ಕೋಟಿಯಷ್ಟು ಇರುವ ವಸೂಲಾಗದ ಸಾಲದ ಪ್ರಮಾಣ ಕಳವಳಕಾರಿ ಬೆಳವಣಿಗೆಯಾಗಿದೆ. ಒಟ್ಟು ವಸೂಲಾಗದ ಸಾಲ ಪ್ರಮಾಣ (ಜಿಎನ್​ಪಿಎ) ಮಾರ್ಚ್​ನಲ್ಲಿ ಶೇ15.5ರಷ್ಟು ಇದ್ದ ದ್ದು, ಜೂನ್​ಗೆ ಶೇ 16.5ರಷ್ಟಾಗಿದೆ.

For All Latest Updates

TAGGED:

ABOUT THE AUTHOR

...view details