ನವದೆಹಲಿ :ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶಿ ಆರ್ಥಿಕತೆಯ ಮೇಲಿನ ಪರಿಣಾಮ ತಗ್ಗಿಸಲು ಕೇಂದ್ರೀಯ ಬ್ಯಾಂಕ್ ವಿತ್ತೀಯ ಸುಧಾರಣೆಗಳನ್ನು ಘೋಷಿಸಿದೆ.
ಇದರ ಬೆನ್ನಲ್ಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಗ್ರಾಹಕರ ಸಾಲದ ಮರುಹೊಂದಾಣಿಕೆ ಆದೇಶ ಜಾರಿಗೆ ತಂದಿರುವುದಾಗಿ ಬ್ಯಾಂಕ್ಗಳು ಟ್ವಿಟರ್ ಮೂಲಕ ಪ್ರಕಟಿಸಿವೆ.
ಯುಕೊ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಓವರ್ಸಿಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಗ್ರಾಹಕರು ಪಾವತಿಸಬೇಕಿರುವ ವಿವಿಧ ಸಾಲಗಳ ಕಂತಿಗೆ ಮೂರು ತಿಂಗಳ ವಿನಾಯ್ತಿ ನೀಡಿರುವುದಾಗಿ ಘೋಷಿಸಿವೆ.