ಕರ್ನಾಟಕ

karnataka

ETV Bharat / business

ಕೊರೊನಾ ಎದುರಿಸಲು ಭಾರತಕ್ಕೆ ಯಾವ ಕಂಪನಿ ಎಷ್ಟು ದೇಣಿಗೆ, ಏನು ಕೊಟ್ಟು ನೆರವಾಗಿವೆ? - ಕೋವಿಡ್ ಹೋರಾಟದಲ್ಲಿ ಖಾಸಗಿ ಕಂಪನಿಗಳು

ಕಳೆದ ವರ್ಷದ ಮೊದಲ ಅಲೆಯ ವೇಳೆ ಎಸಿಟಿ ಗ್ರಾಂಟ್ಸ್ ಸ್ಥಾಪಿಸಲಾಯಿತು. ಅಕ್ಸೆಲ್, ಸಿಕ್ವೊಯ ಕ್ಯಾಪಿಟಲ್, ಮ್ಯಾಟ್ರಿಕ್ಸ್ ಪಾರ್ಟ್​ನರ್ಸ್, ಕಲಾರಿ ಕ್ಯಾಪಿಟಲ್, ಲೆಟ್ಸ್ ವೆಂಚರ್ ಸೇರಿದಂತೆ 44 ಹೂಡಿಕೆ ನಿಧಿಗಳೊಂದಿಗೆ 34 ಸಂಸ್ಥಾಪಕರು ಒಟ್ಟಾಗಿ ನವೀನ ಚಿಂತನೆ ಮತ್ತು 500 ಕೋಟಿ ರೂ. ನಿಧಿ ರಚಿಸುವ ಮೂಲಕ ಸಾಂಕ್ರಾಮಿಕ ರೋಗವು ಎದುರಿಸಲು ದೇಣಿಗೆ ಕೊಟ್ಟರು.

Private sector
Private sector

By

Published : Apr 27, 2021, 8:31 PM IST

ಹೈದರಾಬಾದ್: ಕೊರೊನಾ ವೈರಸ್‌ನ ಎರಡನೇ ಅಲೆಯ ಉಗ್ರತೆ ಭಾರತದಾದ್ಯಂತ ಹರಿದಾಡುತ್ತಿದ್ದಂತೆ ಹಲವು ಉದ್ಯಮಿಗಳು ಮತ್ತು ಹೂಡಿಕೆದಾರರು ಒಟ್ಟಾಗಿ ಸಹಾಯದ ಹಸ್ತಚಾಚಿ ದೇಣಿಗೆ ಮತ್ತು ಸಂಪನ್ಮೂಲಗಳನ್ನು ನೀಡುತ್ತಿದ್ದಾರೆ.

ಎಸಿಟಿ ಅನುದಾನ

ಆ್ಯಕ್ಷನ್ ಕೋವಿಡ್ -19 ತಂಡ ಧನಸಹಾಯ (ಎಸಿಟಿ ಅನುದಾನ) ಗೃಹ ಆರೋಗ್ಯ ನಿರ್ವಹಣೆ, ಆಮ್ಲಜನಕ ಪರಿಹಾರಗಳು, ವ್ಯಾಕ್ಸಿನೇಷನ್ ಮತ್ತು ವೈದ್ಯಕೀಯ ಕಾರ್ಯಪಡೆಗೆ ಪೂರಕವಾಗಿ 75 ಕೋಟಿ ರೂ. ಒದಗಿಸಿದೆ.

ಕಳೆದ ವರ್ಷದ ಮೊದಲ ಅಲೆಯ ವೇಳೆ ಎಸಿಟಿ ಗ್ರಾಂಟ್ಸ್ ಸ್ಥಾಪಿಸಲಾಯಿತು. ಅಕ್ಸೆಲ್, ಸಿಕ್ವೊಯ ಕ್ಯಾಪಿಟಲ್, ಮ್ಯಾಟ್ರಿಕ್ಸ್ ಪಾರ್ಟ್​ನರ್ಸ್, ಕಲಾರಿ ಕ್ಯಾಪಿಟಲ್, ಲೆಟ್ಸ್ ವೆಂಚರ್ ಸೇರಿದಂತೆ 44 ಹೂಡಿಕೆ ನಿಧಿಗಳೊಂದಿಗೆ 34 ಸಂಸ್ಥಾಪಕರು ಒಟ್ಟಾಗಿ ನವೀನ ಚಿಂತನೆ ಮತ್ತು 500 ಕೋಟಿ ರೂ. ನಿಧಿ ರಚಿಸುವ ಮೂಲಕ ಸಾಂಕ್ರಾಮಿಕ ರೋಗವು ಎದುರಿಸಲು ದೇಣಿಗೆ ಕೊಟ್ಟರು.

ಅಮೆಜಾನ್​ನಿಂದ ಆಕ್ಸಿಜನ್​ ಸಾಂದ್ರಕಗಳ ದಾನ

ಭಾರತದ ಅನೇಕ ನಗರಗಳಲ್ಲಿ ಕೋವಿಡ್ -19 ಸೋಂಕಿತ ರೋಗಿಗಳಿಗೆ ನೆರವಿನ ಸಾಮರ್ಥ್ಯ ಹೆಚ್ಚಿಸಲು ಅಮೆಜಾನ್ 10,000 ಆಮ್ಲಜನಕ ಸಾಂದ್ರಕಗಳು ಮತ್ತು ಬೈಪಾಪ್ ಯಂತ್ರಗಳನ್ನು ಆಸ್ಪತ್ರೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ದಾನ ಮಾಡುತ್ತಿದೆ. ಸಿಂಗಾಪುರದಿಂದ 8,000ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳು ಮತ್ತು 500 ಬೈಪಾಪ್ ಯಂತ್ರಗಳನ್ನು ತುರ್ತಾಗಿ ವಿಮಾನ ಮೂಙಲಕ ಅಮೆಜಾನ್ ಎಸಿಟಿ ಗ್ರಾಂಟ್ಸ್, ತೆಮಾಸೆಕ್ ಫೌಂಡೇಷನ್, ಪುಣೆ ಪ್ಲಾಟ್‌ಫಾರ್ಮ್ ಫಾರ್ ಕೋವಿಡ್ -19 ರೆಸ್ಪಾನ್ಸ್ (ಪಿಪಿಸಿಆರ್) ಮತ್ತು ಇತರ ಪಾಲುದಾರರೊಂದಿಗೆ ಕೈಜೋಡಿಸಿದೆ.

ಹೆಚ್ಚುವರಿಯಾಗಿ ಅಮೆಜಾನ್ ಇಂಡಿಯಾ 1,500ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳು ಮತ್ತು ಇತರ ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಸ್ವಾಶ್ತ್, ಕನ್ಸರ್ನ್ ಇಂಡಿಯಾ ಮತ್ತು ಎಸಿಟಿ ಗ್ರ್ಯಾಂಟ್ಸ್ ಮತ್ತು ಸತ್ವ ಕನ್ಸಲ್ಟಿಂಗ್‌ನಂತಹ ಲಾಭರಹಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂಗ್ರಹಿಸುತ್ತಿದೆ.

ಮೈಕ್ರೋಸಾಫ್ಟ್ ಪರಿಹಾರ ಘೋಷಣೆ

ಪರಿಹಾರ ಕಾರ್ಯಗಳಿಗೆ ನೆರವಾಗಲು ಮತ್ತು ನಿರ್ಣಾಯಕ ಆಮ್ಲಜನಕ ಸಾಂದ್ರತೆಯ ಸಾಧನಗಳ ಖರೀದಿಗೆ ಬೆಂಬಲ ನೀಡಲು ಕಂಪನಿಯ ಧ್ವನಿ ಎತ್ತಿದ್ದು, ಸಂಪನ್ಮೂಲಗಳು ಮತ್ತು ತಂತ್ರಜ್ಞಾನವನ್ನು ಬಳಕೆ ಮುಂದುವರಿಸಲಿದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಮಾರಣಾಂತಿಕ ಕೋವಿಡ್​-19 ಬಿಕ್ಕಟ್ಟು ಎದುರಿಸಲು ಭಾರತಕ್ಕೆ ನೆರವಾಗಲು ಅಗತ್ಯ ವೈದ್ಯಕೀಯ ಜೀವ ರಕ್ಷಕ ಸರಬರಾಜು ಮತ್ತು ಸಲಕರಣೆಗಳ ರವಾನೆ ಸೇರಿದಂತೆ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಭಾರತಕ್ಕೆ ಭರವಸೆ ನೀಡಿದ್ದಾರೆ ಎಂದು ನಾಡಲ್ಲಾ ಹೇಳಿದ್ದಾರೆ.

ಭಾರತದ ಪ್ರಸ್ತುತ ಪರಿಸ್ಥಿತಿಯಿಂದ ನಾನು ಎದೆಗುಂದುತ್ತೇನೆ. ಅಮೆರಿಕ ಸರ್ಕಾರವು ಸಹಾಯ ಮಾಡಲು ಸಜ್ಜುಗೊಳಿಸುತ್ತಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಪರಿಹಾರ ಕಾರ್ಯಗಳಿಗೆ ನೆರವಾಗಲು ಮೈಕ್ರೋಸಾಫ್ಟ್ ತನ್ನ ಧ್ವನಿ, ಸಂಪನ್ಮೂಲಗಳು ಮತ್ತು ತಂತ್ರಜ್ಞಾನವನ್ನು ಬಳಸುವುದು ಮುಂದುವರಿಸುತ್ತದೆ. ನಿರ್ಣಾಯಕ ಆಮ್ಲಜನಕ ಸಾಂದ್ರತೆಯ ಸಾಧನಗಳ ಖರೀದಿಯನ್ನು ಸಹ ಬೆಂಬಲಿಸುತ್ತದೆ ಎಂದು ಟ್ವೀಟ್‌ ಮಾಡಿದ್ದರು.

ಗೂಗಲ್​​ನಿಂದ 135 ಕೋಟಿ ರೂ. ಪರಿಹಾರ ನಿಧಿ

ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಭಾರತದ ಪ್ರಸ್ತುತ ಸಾಂಕ್ರಾಮಿಕ ಸಮರಕ್ಕೆ 135 ಕೋಟಿ ಹಣದ ಬೆಂಬಲ ನೀಡಲಿದೆ. ದೇಶದಲ್ಲಿ ಹದಗೆಡುತ್ತಿರುವ ಬಿಕ್ಕಟ್ಟಿನ ಶಮನಕ್ಕೆ ಕೈಜೋಡಿಸುವುದಾಗಿ ಅಭಯ ನೀಡಿದ್ದಾರೆ.

ಜೊಮಾಟೊ

ಆಹಾರ ತಂತ್ರಜ್ಞಾನ ಕಂಪನಿ ಜೊಮಾಟೊ ಮತ್ತು ದೆಹಲಿಯೊಂದಿಗೆ 'ಫೀಡಿಂಗ್ ಇಂಡಿಯಾ' ಪ್ರೋಗ್ರಾಮನ್ನು 'ಹೆಲ್ಪ್ ಸೇವ್ ಮೈ ಇಂಡಿಯಾ' ಉಪಕ್ರಮದಡಿ ಆಮ್ಲಜನಕ ಸಾಂದ್ರಕಗಳು ಮತ್ತು ಸಂಬಂಧಿತ ಸರಬರಾಜು ಹಾಗೂ ಅಗತ್ಯವಿರುವ ಆಸ್ಪತ್ರೆಗಳು ಮತ್ತು ಕುಟುಂಬಗಳಿಗೆ ಸರಬರಾಜು ಮಾಡಲು ಪ್ರಾರಂಭಿಸಿದೆ.

ಪೇಟಿಎಂ

'ಆಕ್ಸಿಜನ್ ಫಾರ್ ಇಂಡಿಯಾ' ಎಂಬ ತನ್ನ ಉಪಕ್ರಮದ ಭಾಗವಾಗಿ 10 ಕೋಟಿ ರೂ. ಸಂಗ್ರಹಿಸಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು, ಎನ್‌ಜಿಒ ಮತ್ತು ನಿವಾಸಿ ಕಲ್ಯಾಣ ಸಂಘಗಳಿಗೆ 3,000 ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳುವ ಗುರಿ ಹೊಂದಿದೆ ಎಂದು ಪೇಟಿಎಂ ಹೇಳಿದೆ.

ಕ್ರೆಡ್

ಬೆಂಗಳೂರು ಮೂಲದ ಕ್ರೆಡ್​, ಆರೋಗ್ಯ ಸಂಸ್ಥೆಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲು ಹಣ ಸಂಗ್ರಹಿಸುವ ಉಪಕ್ರಮ ಸಹ ಪ್ರಾರಂಭಿಸಿದೆ. ಸ್ಟಾರ್ಟ್ಅಪ್ ತನ್ನ ಸದಸ್ಯರಿಗೆ ತಮ್ಮ ಕ್ರೆಡ್​ ನಾಣ್ಯಗಳನ್ನು ಆಮ್ಲಜನಕ ಸಂಬಂಧಿತ ಉಪಕರಣಗಳನ್ನು ಖರೀದಿಸಲು ದಾನ ಮಾಡಲು ಆಹ್ವಾನಿಸಿದೆ. ಒಂದು ಶತಕೋಟಿ ಲೀಟರ್ ಆಮ್ಲಜನಕವನ್ನು ಉತ್ಪಾದಿಸಲು ಉಪಕರಣಗಳನ್ನು ಸಂಗ್ರಹಿಸುವಷ್ಟು ಹಣ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ.

ಕೆವಿಎನ್ ಫೌಂಡೇಷನ್‌ನಿಂದ ಮಿಷನ್ ಮಿಲಿಯನ್ ಏರ್

ಸೀರಿಯಲ್​​ ಉದ್ಯಮಿ ಮತ್ತು ಹೂಡಿಕೆದಾರ ಕೆ ಗಣೇಶ್ ಅವರು ಸ್ಥಾಪಿಸಿದ ಕೆವಿಎನ್ ಫೌಂಡೇಷನ್ ಕಳೆದ ವರ್ಷ ಫೀಡ್ ಮೈ ಸಿಟಿ ಅಭಿಯಾನ ಪ್ರಾರಂಭಿಸಿದರು. 400ಕ್ಕೂ ಹೆಚ್ಚು ಸ್ವಯಂಸೇವಕರು 50,000 ಚಿಲ್ಲರೆ ಮತ್ತು 60 ಸಾಂಸ್ಥಿಕ ದಾನಿಗಳು ವಲಸೆ ಕಾರ್ಮಿಕರಿಗೆ 58 ಲಕ್ಷಕ್ಕೂ ಹೆಚ್ಚು ಊಟ ಬಡಿಸಿದ್ದರು. ಕೆವಿಎನ್, ಪೋರ್ಟಿಯಾ ಮತ್ತು ರೇಜಪ್ರೇ ಸಹಭಾಗಿತ್ವದಲ್ಲಿ ಈಗ ಬೆಂಗಳೂರು ಮತ್ತು ಮುಂಬೈಯಲ್ಲಿ ಬಡವರಿಗೆ ಆಮ್ಲಜನಕವನ್ನು ಉಚಿತವಾಗಿ ನೀಡಲು ಇಚ್ಛಿಸಿವೆ.

ಹೆಮಕುಂಟ್ ಫೌಂಡೇಷನ್

ಹೆಮ​ಕುಂಟ್ ಫೌಂಡೇಷನ್ ತನ್ನ ಸ್ವಯಂಸೇವಕರ ಜಾಲದ ಮೂಲಕ ಕೋವಿಡ್​-19 ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತಿದೆ.

ಸ್ವಾಸ್ತ್

ಭಾರತದಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಕೆಲಸ ಮಾಡುತ್ತಿರುವ ಲಾಭರಹಿತ ಸ್ವಾಸ್ತ್, ಭಾರತಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಲು ಮತ್ತು ಆಮದು ಮಾಡಿಕೊಳ್ಳಲು ಎಸಿಟಿ ಅನುದಾನದೊಂದಿಗೆ ಕೈಜೋಡಿಸಿದೆ.

ಮಿಷನ್ ಆಮ್ಲಜನಕ

ವೈದ್ಯಕೀಯ ಆಮ್ಲಜನಕದಿಂದ ಹೊರಗುಳಿದಿರುವ ಆಸ್ಪತ್ರೆಗಳಿಗೆ ಸಹಾಯ ಮಾಡಲು ದೆಹಲಿ ಕಾರ್ಯನಿರತವಾಗಿದೆ.

ABOUT THE AUTHOR

...view details