ಕರ್ನಾಟಕ

karnataka

ETV Bharat / business

ಸಂಕಷ್ಟದಿಂದ ಪಾರಾದ ಯೆಸ್​ ಬ್ಯಾಂಕ್​ಗೆ ಹೊಸ ಸಾರಥಿ ನೇಮಕ: ಮಾ.18ಕ್ಕೆ ನಿಷೇಧ ವಾಪಸ್​ - ಯೆಸ್​ ಬ್ಯಾಂಕ್ ಮೇಲೆ ನಿಷೇಧ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಶುಕ್ರವಾರ ಯೆಸ್ ಬ್ಯಾಂಕ್​ ಪುನಶ್ಚೇತನದ ಕರಡು ಯೋಜನೆ ರೂಪಿಸಿತ್ತು. ಎಲ್ಲಾ ಹೂಡಿಕೆದಾರರಿಗೆ ಬಂಡವಾಳ ಹೂಡುವ ದಿನಾಂಕದಿಂದ ಮೂರು ವರ್ಷಗಳವರೆಗೆ ಹಿಡುವಳಿ ಅವಧಿ ನೀಡಲಾಗಿದೆ. ಎಸ್‌ಬಿಐಗೆ ಶೇ 26ಕ್ಕಿಂತ ಕಡಿಮೆ ಮೊದಲ ಹಿಡುವಳಿ ಇರುತ್ತದೆ.

Prashant Kumar
ಪ್ರಶಾಂತ್ ಕುಮಾರ್

By

Published : Mar 14, 2020, 7:41 PM IST

ನವದೆಹಲಿ: ಹಣಕಾಸಿನ ಬಿಕ್ಕಟ್ಟಿನಿಂದ ಆರ್​ಬಿಐನ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದ ಯೆಸ್​ ಬ್ಯಾಂಕ್​ಗೆ ಮಾರ್ಚ್​ 18ರಿಂದ ನಿರ್ಬಂಧ ತೆರವಾಗಲಿದ್ದು, ಪ್ರಶಾಂತ್ ಕುಮಾರ್ ಅವರು ಬ್ಯಾಂಕಿನ ನೂತನ ಸಿಇಒ/ಎಂಡಿ ಆಗಿ ನೇಮಕವಾಗಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಶುಕ್ರವಾರ ಯೆಸ್ ಬ್ಯಾಂಕ್​ ಪುನಶ್ಚೇತನದ ಕರಡು ಯೋಜನೆ ರೂಪಿಸಿತು. ಎಲ್ಲಾ ಹೂಡಿಕೆದಾರರಿಗೆ ಬಂಡವಾಳ ಹೂಡುವ ದಿನಾಂಕದಿಂದ ಮೂರು ವರ್ಷಗಳವರೆಗೆ ಹಿಡುವಳಿ ಅವಧಿ ನೀಡಲಾಗಿದೆ. ಎಸ್‌ಬಿಐಗೆ ಶೇ 26ಕ್ಕಿಂತ ಕಡಿಮೆ ಮೊದಲ ಹಿಡುವಳಿ ಇರುತ್ತದೆ.

ಕುಮಾರ್ ಅವರು ಜೊತೆಗೆ ಯೆಸ್​ ಬ್ಯಾಂಕ್​ ಪುನಶ್ಚೇತನ ಮಂಡಳಿಯಲ್ಲಿ ಸುನೀಲ್ ಮೆಹ್ತಾ (ಪಿಎನ್​​ಬಿಯ ಮಾಜಿ ಕಾರ್ಯನಿರ್ವಾಹಕಯೇತರ ಮುಖ್ಯಸ್ಥ) ಕಾರ್ಯನಿರ್ವಾಹಕಯೇತರ ಮುಖ್ಯಸ್ಥರಾಗಿ ಹಾಗೂ ಮಹೇಶ್ ಕೃಷ್ಣಮೂರ್ತಿ ಮತ್ತು ಅತುಲ್​ ಭೇದಾ ಕಾರ್ಯನಿರ್ವಾಹಕಯೇತರ ನಿರ್ದೇಶಕರಾಗಿ ಇರಲಿದ್ದಾರೆ.

ABOUT THE AUTHOR

...view details