ಮುಂಬೈ :ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ) ಮತ್ತು ವಸತಿ ಅಭಿವೃದ್ಧಿ ಮತ್ತು ಮೂಲಸೌಕರ್ಯ ಲಿಮಿಟೆಡ್ ಕಂಪನಿಯ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ವಿವಾ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಠಾಕೂರ್ ಮತ್ತು ನಿರ್ದೇಶಕ ಮದನ್ ಗೋಪಾಲ್ ಚತುರ್ವೇದಿ ಅವರನ್ನು ಬಂಧಿಸಿದ್ದಾರೆ.
ಪಿಎಂಸಿ ಬ್ಯಾಂಕ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಇಡಿ ವಿವಾ ಗ್ರೂಪ್‌ನ ನಿರ್ದೇಶಕರ ಕಚೇರಿ ಆವರಣದ ಐದು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಈ ಆವರಣದಲ್ಲಿ ವಿರಾರ್‌ನಲ್ಲಿರುವ ವಿವಾ ಗ್ರೂಪ್‌ನ ನೋಂದಾಯಿತ ಕಚೇರಿಗಳು ಹಾಗೂ ವಸತಿಗಳಲ್ಲಿ ದಾಖಲೆಗಳ ಶೋಧ ಕಾರ್ಯ ನಡೆಸಲಾಗಿದೆ. ದಾಳಿ ವೇಳೆ 73 ಲಕ್ಷ ರೂ. ಮೌಲ್ಯದ ನಗದು, ಡಿಜಿಟಲ್ ಮತ್ತು ಇತರೆ ದಾಖಲಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.