ನ್ಯೂಯಾರ್ಕ್: ದಕ್ಷಿಣ ಒರೆಗಾನ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಓರ್ವ ಸೋಂಕಿತ ಉದ್ಯೋಗಿಯ ನಿರ್ಲಕ್ಷ್ಯದಿಂದಾಗಿ ಏಳು ಜನರು ಬಲಿಯಾಗಿ ಆತನ ಸಂಪರ್ಕಕ್ಕೆ ಬಂದಿದ್ದ ನೂರಾರು ಜನರು ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಅಮೆರಿಕ ದಕ್ಷಿಣ ಒರೆಗಾನ್ನಲ್ಲಿ ಕೋವಿಡ್ -19ನ ಹೊಸ ರೂಪಾಂತರವಾದ ಸೂಪರ್ ಸ್ಪ್ರೆಡರ್ ಹಬ್ಬಿಲ್ಲ. ಅನಾರೋಗ್ಯದಿಂದ ಕೆಲಸಕ್ಕೆ ಹೋದ ಓರ್ವ ವ್ಯಕ್ತಿಯ ಸೂಪರ್ ಸ್ಪ್ರೆಡರ್ ಚಟುವಟಿಕೆಗಳಿಂದಾಗಿ ಈ ಭಾಗದಲ್ಲಿ ಪೀಡಿತರ ಸಂಖ್ಯೆ ಹೆಚ್ಚಳವಾಗಿದೆ. ಆತನ ಸಂಪರ್ಕಕ್ಕೆ ಬಂದಿದ್ದ ಏಳು ಜನರು ಮೃತಪಟ್ಟಿದ್ದಾರೆ. 300ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ರೋಗ ಲಕ್ಷಣಗಳಿಂದ ಬಳಲುತ್ತಿರುವಾಗ ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಕೆಲಸಕ್ಕೆ ಹೋಗಿದ್ದಾನೆ. ಕೆಲ ದಿನಗಳ ಬಳಿಕ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಇರುವುದಾಗಿ ದೃಢಪಟ್ಟಿತ್ತು ಎಂದು ಡೌಗ್ಲಾಸ್ ಕೌಂಟಿ ಅಧಿಕಾರಿಗಳು ಕಳೆದ ವಾರ ಹೇಳಿದ್ದಾರೆ ಎಂಬುದು ವರದಿ ಆಗಿದೆ.