ನವದೆಹಲಿ: ವ್ಯಾಪಾರಿ ವಹಿವಾಟಿನ ಮೇಲಿನ ಎಲ್ಲಾ ಶುಲ್ಕಗಳನ್ನು ಮನ್ನಾ ಮಾಡುವುದಾಗಿ ಫಿನ್ಟೆಕ್ ಮೇಜರ್ ಪೇಟಿಎಂ ತಿಳಿಸಿದೆ.
ಪೇಟಿಎಂನ ಈ ನಡೆಯಿಂದಾಗಿ ವ್ಯಾಪಾರಿ ಪಾಲುದಾರರಿಗೆ ಪೇಟಿಎಂ ವ್ಯಾಲೆಟ್, ಯುಪಿಐ ಅಪ್ಲಿಕೇಷನ್ ಮತ್ತು ರುಪೇ ಕಾರ್ಡ್‌ಗಳಿಂದ ಶೂನ್ಯ ಶುಲ್ಕದಲ್ಲಿ ಪಾವತಿ ಸ್ವೀಕರಿಸಲು ಸಾಧ್ಯವಾಗಲಿದೆ. ವರ್ತಕರಿಗೆ ಬೀಳುತ್ತಿದ್ದ ಹೊರೆ ಕೂಡ ಕಡಿಮೆ ಆಗಲಿದೆ.
ಪ್ರಸ್ತುತ ಸಾಂಕ್ರಾಮಿಕ ಸಮಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ) ಬೆಂಬಲಿಸಲು ಬ್ಯಾಂಕ್ಗಳು ಮತ್ತು ಇತರ ಶುಲ್ಕಗಳಿಂದ ಪೇಟಿಎಂ ವಾರ್ಷಿಕವಾಗಿ 600 ಕೋಟಿ ರೂ. ಎಂಡಿಆರ್ ಶುಲ್ಕ ಸ್ವೀಕರಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೀದಿಯಲ್ಲಿ ಕುಳಿತು ಅನ್ನದಾತರು ಪ್ರತಿಭಟನೆ, ಟಿವಿಯಲ್ಲಿ ಸುಳ್ಳಿನ ಭಾಷಣ: ಮೋದಿ ವಿರುದ್ಧ ರಾಹುಲ್ ವ್ಯಂಗ್ಯ
ನಮ್ಮ ಈ ಘೋಷಣೆಯು ಗ್ರಾಹಕರಿಂದ ಪಾವತಿ ಸ್ವೀಕರಿಸಲು ಪೇಟಿಎಂ ಆಲ್-ಇನ್-ಒನ್ ಕ್ಯೂಆರ್, ಪೇಟಿಎಂ ಸೌಂಡ್ಬಾಕ್ಸ್ ಮತ್ತು ಪೇಟಿಎಂ ಆಲ್-ಒನ್ ಆಂಡ್ರಾಯ್ಡ್ ಪಿಒಎಸ್ ಅನ್ನು ಬಳಸುವ ಪೇಟಿಎಂ ವ್ಯವಸ್ಥೆಯಲ್ಲಿ 17 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಪ್ರಯೋಜನ ಸಿಗಲಿದೆ ಎಂದಿದೆ.
ಕಂಪನಿಯು ಪೇಟಿಎಂ ವ್ಯಾಲೆಟ್, ಯುಪಿಐ, ರುಪೇ, ಎನ್ಇಎಫ್ಟಿ ಮತ್ತು ಆರ್ಟಿಜಿಎಸ್ ಸೇರಿದಂತೆ ಎಲ್ಲಾ ವಿಧಾನಗಳ ಮೂಲಕ ಪಾವತಿಗಳನ್ನು ಸ್ವೀಕರಿಸುವುದನ್ನು ಉತ್ತೇಜಿಸುತ್ತಿದೆ. ಅನಿಯಮಿತ ಪಾವತಿಗಳನ್ನು ಸ್ವೀಕರಿಸಲು ವ್ಯಾಪಾರಿಗಳಿಗೆ ಹೆಚ್ಚಿನ ಅವಕಾಶ ನೀಡುತ್ತಾ, ಪೇಟಿಎಂ ಆಲ್-ಇನ್-ಕ್ಯೂಆರ್ ಶೂನ್ಯ ಶುಲ್ಕದಲ್ಲಿ ಸ್ವೀಕರಿಸಲಿದೆ.