ಕರ್ನಾಟಕ

karnataka

ETV Bharat / business

ಕೊರೊನಾ ಸಂಕಷ್ಟದ ನಡುವೆಯೂ ಪೇಟಿಎಂ ಸಾಹಸ:   500 ಹೊಸಬರ ನೇಮಕ - ಇಎಸ್ಒಪಿ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು ಅಸ್ತಿತ್ವದಲ್ಲಿರುವ ಮತ್ತು ಮಾಜಿ ಉದ್ಯೋಗಿಗಳಿಗೆ ದ್ವಿತೀಯ ಷೇರು ಮಾರಾಟದ ವೇಳೆಯಲ್ಲಿ ಸುಮಾರು 300 ಕೋಟಿ ರೂ. ಯಷ್ಟು ಇಎಸ್‌ಒಪಿಗಳ ಆಯ್ಕೆಯನ್ನು ಪೇಟಿಎಂ ನೀಡಿತ್ತು. ಉತ್ಪನ್ನ ಮತ್ತು ತಂತ್ರಜ್ಞಾನ ತಂಡಗಳಿಗೆ 500 ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹೊಸದಾಗಿ ಯೋಜಿಸಿದೆ.

Digital payments
ಪೇಟಿಎಂ

By

Published : Apr 17, 2020, 11:55 PM IST

ನವದೆಹಲಿ: ಈ ವರ್ಷ 250 ಕೋಟಿ ರೂ. ಮೌಲ್ಯದ ನೌಕರರ ಷೇರು ಮಾಲೀಕತ್ವ ಯೋಜನೆ (ಇಎಸ್ಒಪಿ) ನೀಡುವುದಾಗಿ ಡಿಜಿಟಲ್ ಪಾವತಿ ಕಂಪನಿ ಪೇಟಿಎಂ ತಿಳಿಸಿದೆ.

ಮುಂದಿನ 3-4 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳಿಗೆ ಇಎಸ್​​ಒಪಿ ಹಾಗೂ ಹೊಸಬರ ನೇಮಕ ಪ್ರಕ್ರಿಯೆ ಸಹ ಒಳಗೊಂಡಿರುತ್ತದೆ ಎಂದು ಪೇಟಿಎಂ ಪ್ರಕಟಣೆಯಲ್ಲಿ ತಿಳಿಸಿದೆ.

ಮೌಲ್ಯಮಾಪನ ಪ್ರಕ್ರಿಯೆಯು ಇನ್ನೂ ನಡೆಯುತ್ತಿರುವುದರಿಂದ ಕಂಪನಿಯು ಎಷ್ಟು ಉದ್ಯೋಗಿಗಳಿಗೆ ಇಎಸ್ಒಪಿ ನೀಡುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಈ ವರ್ಷದ ಜನವರಿಯಲ್ಲಿ ಪೇಟಿಎಂ, ಸಿಬ್ಬಂದಿಯ ವಾರ್ಷಿಕ ಕಾರ್ಯಕ್ಷಮತೆಯ ವಿಮರ್ಶೆಗಳನ್ನು ಆರಂಭಿಸಿತ್ತು.

ಉದ್ದೇಶಿತ ಈ ನಡೆಯು ಕಂಪನಿಯ ಷೇರುಗಳನ್ನು ಹೊಂದಿರುವ ನೌಕರರ ಸಂಖ್ಯೆ ವಿಸ್ತರಿಸುತ್ತದೆ. ಸಂಸ್ಥೆಯ ಬೆಳವಣಿಗೆಯ ಸ್ಟೋರಿಯಲ್ಲಿ ಹೆಚ್ಚಿನ ಜನರು ಪಾಲುದಾರರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿ ಅಸ್ತಿತ್ವದಲ್ಲಿರುವ ಮತ್ತು ಮಾಜಿ ಉದ್ಯೋಗಿಗಳಿಗೆ ದ್ವಿತೀಯ ಷೇರು ಮಾರಾಟದ ವೇಳೆಯಲ್ಲಿ ಸುಮಾರು 300 ಕೋಟಿ ರೂ.ಗಳಷ್ಟು ಇಎಸ್‌ಒಪಿಗಳ ಆಯ್ಕೆ ನೀಡಿತ್ತು.

ಪೇಟಿಎಂ ಉನ್ನತ ಕಾರ್ಯಕ್ಷಮತೆಯ ಕಲ್ಚರಲ್​ ನೌಕರರನ್ನು ಹೊಂದಿದೆ. ಸಿಬ್ಬಂದಿಯ ಮೌಲ್ಯಮಾಪನ ಮತ್ತು ಪ್ರತಿಫಲ ನೀಡಲು ಪಾರದರ್ಶಕ ಪ್ರಕ್ರಿಯೆ ಅನುಸರಿಸುತ್ತದೆ. ಯಾವಾಗಲೂ ಸಾಕಷ್ಟು ಬೆಳವಣಿಗೆಯ ಅವಕಾಶಗಳನ್ನು ಒದಗಿಸುತ್ತೇವೆ ಎಂಬುದನ್ನು ಈ ಮೂಲಕ ಖಾತ್ರಿಪಡಿಸುತ್ತೇವೆ ಎಂದು ಪೇಟಿಎಂನ ಸಿಎಚ್‌ಆರ್​ಒ ರೋಹಿತ್ ಠಾಕೂರ್ ಹೇಳಿದರು.

ಉತ್ಪನ್ನ ಮತ್ತು ತಂತ್ರಜ್ಞಾನ ತಂಡಗಳಿಗೆ 500ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಪೇಟಿಎಂ ಯೋಜಿಸಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details