ಕರ್ನಾಟಕ

karnataka

ವಾಹನಗಳಿಗೆ ಅಪ್ಪಳಿಸಿದ ಫಾಸ್ಟ್​ಟ್ಯಾಗ್​.. ಪೇಟಿಎಂನಿಂದ ಒಂದೇ ತಿಂಗಳಲ್ಲಿ 6 ಲಕ್ಷ ಟ್ಯಾಗ್​ ವಿತರಣೆ..

By

Published : Dec 10, 2019, 4:01 PM IST

ನವೆಂಬರ್​ ಒಂದೇ ತಿಂಗಳಲ್ಲಿ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್, 6 ಲಕ್ಷ ಫಾಸ್ಟ್​ ಟ್ಯಾಗ್​ಗಳನ್ನು ಹಂಚಿಕೆ ಮಾಡಿದೆ. ಈವರೆಗೂ 1.85 ಮಿಲಯನ್​ ವಾಹನಗಳು ಫಾಸ್ಟ್​ಟ್ಯಾಗ್​ ಹೊಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

FASTags
ಫಾಸ್ಟ್​ಟ್ಯಾಗ್​

ನವದೆಹಲಿ: ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್(ಪಿಪಿಬಿ) ನವೆಂಬರ್​ ತಿಂಗಳಲ್ಲಿ 6 ಲಕ್ಷ ಫಾಸ್ಟ್ ​ಟ್ಯಾಗ್​ಗಳನ್ನು ವಿತರಿಸಿದೆ ಎಂದು ಹೇಳಿದೆ.

ಕೇಂದ್ರ ಸಾರಿಗೆ ಸಚಿನ ನಿತಿನ್ ಗಡ್ಕರಿ ಅವರು ಡಿಸೆಂಬರ್ 1ರಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲು ಎಲ್ಲ ವಿಧದ ವಾಹನಗಳು ಫಾಸ್ಟ್​ಟ್ಯಾಗ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಆದೇಶಿಸಿದ್ದರು. ಬಳಿಕ ಈ ದಿನಾಂಕವನ್ನು ಡಿ. 15ಕ್ಕೆ ಮುಂದೂಡಿದರು.

ನವೆಂಬರ್​ ಒಂದೇ ತಿಂಗಳಲ್ಲಿ ಪಿಪಿಬಿ 6 ಲಕ್ಷ ಫಾಸ್ಟ್​ ಟ್ಯಾಗ್​ಗಳನ್ನು ಹಂಚಿಕೆ ಮಾಡಿದೆ. ಈವರೆಗೂ 1.85 ಮಿಲಯನ್​ ವಾಹನಗಳು ಫಾಸ್ಟ್​ಟ್ಯಾಗ್​ ಹೊಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ದೇಶದ ನಾನಾ ಭಾಗದ ಟೋಲ್ ಪ್ಲಾಜಾಗಳಲ್ಲಿ 250ಕ್ಕೂ ಹೆಚ್ಚು ಕ್ಯಾಂಪ್​ಗಳನ್ನು ಸ್ಥಾಪಿಸಲಾಗಿದೆ. ದೆಹಲಿ-ಎನ್‌ಸಿಆರ್, ಬೆಂಗಳೂರು, ಮುಂಬೈ, ಹೈದರಾಬಾದ್, ಚಂಡೀಗಢ್, ಪುಣೆ, ಚೆನ್ನೈ ಮತ್ತು ಜೈಪುರ ಸೇರಿ ಅಗ್ರ 20 ನಗರಗಳಲ್ಲಿ ಕಾರ್ಪೊರೇಟ್ ಕಚೇರಿಗಳನ್ನು ತೆರೆಯಲಾಗಿದೆ ಎಂದು ಹೇಳಿದೆ.

ಪಿಪಿಬಿ, ಎಲ್ಲಾ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ 3,500 ನಿಯೋಜಕ ಸಿಬ್ಬಂದಿಯ ಮೂಲಕ ಫಾಸ್ಟ್‌ಟ್ಯಾಗ್‌ಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ತಿಳಿಸಿದೆ.

ABOUT THE AUTHOR

...view details