ನವದೆಹಲಿ: ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಕೊರೊನಿಲ್’ ಮತ್ತು ‘ಸ್ವಸಾರಿ’ ಔಷಧಿಗಳ ಕುರಿತು ಜಾಹೀರಾತು ನಿಲ್ಲಿಸಿ ಹಾಗೂ ಈ ಬಗ್ಗೆ ಮಾಹಿತಿ ಕೊಡುವಂತೆ ಆದೇಶಿಸಿದ ಆಯುಷ್ ಸಚಿವಾಲಯಕ್ಕೆ ಪತಂಜಲಿ ಸಂಸ್ಥೆಯ ಪ್ರಮುಖರಾದ ಆಚಾರ್ಯ ಬಾಲಕೃಷ್ಣನ್ ಪ್ರತಿಕ್ರಿಯಿಸಿದ್ದಾರೆ.
'ಕೊರೊನಿಲ್' ಔಷಧಿ ಜಾಹೀರಾತಿಗೆ ಆಯುಷ್ ಸಚಿವಾಲಯ ಬ್ರೇಕ್: ಪತಂಜಲಿ ಮುಖ್ಯಸ್ಥ ಪ್ರತಿಕ್ರಿಯಿಸಿದ್ದು ಹೀಗೆ... - ಪತಂಜಲಿ
'ಕೊರೊನಿಲ್' ಔಷಧಿ ಸಂಯೋಜನೆಯ ಬಗ್ಗೆ ಮಾಹಿತಿ ಸಲ್ಲಿಸುವಂತೆ ಆಯುಷ್ ಸಚಿವಾಲಯದ ನಿರ್ದೇಶನಕ್ಕೆ ಪ್ರತಿಕ್ರಿಯಿಸಿದ ಪತಂಜಲಿ ಸಂಸ್ಥೆಯ ಪ್ರಮುಖರಾದ ಆಚಾರ್ಯ ಬಾಲಕೃಷ್ಣನ್ ಅವರು, ಕಂಪನಿಯು ಸಚಿವಾಲಯದ ಬೇಡಿಕೆಯಂತೆ ಮಾಹಿತಿ ಒದಗಿಸಿದೆ ಎಂದು ಹೇಳಿದ್ದಾರೆ.
!['ಕೊರೊನಿಲ್' ಔಷಧಿ ಜಾಹೀರಾತಿಗೆ ಆಯುಷ್ ಸಚಿವಾಲಯ ಬ್ರೇಕ್: ಪತಂಜಲಿ ಮುಖ್ಯಸ್ಥ ಪ್ರತಿಕ್ರಿಯಿಸಿದ್ದು ಹೀಗೆ... Coronil](https://etvbharatimages.akamaized.net/etvbharat/prod-images/768-512-7743871-thumbnail-3x2-patanjali.jpg)
ಕೊರೊನಿಲ್
'ಕೊರೊನಿಲ್' ಔಷಧಿ ಸಂಯೋಜನೆಯ ಬಗ್ಗೆ ಮಾಹಿತಿ ಸಲ್ಲಿಸುವಂತೆ ಆಯುಷ್ ಸಚಿವಾಲಯದ ನಿರ್ದೇಶನಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣನ್ ಅವರು, ಕಂಪನಿಯು ಸಚಿವಾಲಯದ ಬೇಡಿಕೆಯಂತೆ ಮಾಹಿತಿ ಒದಗಿಸಿದೆ ಎಂದು ಹೇಳಿದ್ದಾರೆ.
ಸಂವಹನ ಅಂತರ ನಿವಾರಿಸಲಾಗಿದೆ. ಯಾದೃಚ್ಛಿಕ (ರ್‍ಯಾಂಡಮ್) ಪ್ಲೇಸ್ಬೊ-ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳಿಗಾಗಿ ನಾವು ಎಲ್ಲಾ ಪ್ರಮಾಣಿತ ನಿಯತಾಂಕಗಳನ್ನು 100 ಪ್ರತಿಶತದಷ್ಟು ಪೂರೈಸಿದ್ದೇವೆ. ಆಯುರ್ವೇದ ಔಷಧಕ್ಕೆ ಪ್ರೋತ್ಸಾಹ ಮತ್ತು ಹೆಮ್ಮೆ ನೀಡಿದ್ದಕ್ಕಾಗಿ ಆಡಳಿತಾರೂಢ ಸರ್ಕಾರದ ಬಗ್ಗೆ ಪ್ರಶಂಸಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.