ನವದೆಹಲಿ: ಮುಂದಿನ ಏಳು ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಪ್ರಯಾಣಿಕರು 45.30 ಕೋಟಿ ರೂ. ಮೊತ್ತದ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಇಲಾಖೆ ಇದೇ ವೇಳೆ ಮಾಹಿತಿ ನೀಡಿದೆ.
ವಿಶೇಷ ರೈಲುಗಳಲ್ಲಿ ಬುಧವಾರ 20,149 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಗುರುವಾರ ಕಾರ್ಯನಿರ್ವಹಿಸುತ್ತಿರುವ 18 ವಿಶೇಷ ರೈಲುಗಳಲ್ಲಿ 25,737 ಪ್ರಯಾಣಿಸುಲಿದ್ದಾರೆ. ಒಟ್ಟಾರೆ ಟಿಕೆಟ್‌ಗಳಿಂದ ಇದುವರೆಗೆ ಗಳಿಸಿದ ಒಟ್ಟು ಆದಾಯ 45,30,09,675 ರೂ. ಎಂದು ಮಾಹಿತಿ ನೀಡಿದೆ.
ದೆಹಲಿ ಮುಖೇನ ದೇಶದ ಪ್ರಮುಖ ನಗರಗಳ ನಡುವೆ 15 ಜೋಡಿ ವಿಶೇಷ ರೈಲುಗಳು ಮೇ 12ರಿಂದ ಸಂಚರಿಸುತ್ತಿವೆ. ಒಂಬತ್ತು ರೈಲುಗಳಲ್ಲಿ 9,000ಕ್ಕೂ ಹೆಚ್ಚು ಜನರು ಬುಧವಾರ ರಾಷ್ಟ್ರ ರಾಜಧಾನಿಯಿಂದ ಹೊರಟಿದ್ದಾರೆ.
ಪಿಟಿಐಗೆ ಲಭ್ಯವಾದ ಮಾಹಿತಿ ಪ್ರಕಾರ, ಬುಧವಾರ ದೆಹಲಿಯಿಂದ ಬಂದ ಒಂಬತ್ತು ರೈಲುಗಳು ಹೌರಾ, ಜಮ್ಮು, ತಿರುವನಂತಪುರಂ, ಚೆನ್ನೈ, ದಿಬ್ರುಗಢ, ಮುಂಬೈ, ರಾಂಚಿ ಮತ್ತು ಅಹಮದಾಬಾದ್‌ಗೆ ತೆರಳಿವೆ. ಎಂಟು ರೈಲುಗಳು ಅವುಗಳ ಸಾಮರ್ಥ್ಯಕ್ಕೂ ಮೀರಿ ಟಿಕೆಟ್ ಬುಕ್ಕಿಂಗ್ ಆಗಿದ್ದವು. ಬಿಹಾರದ ಪಾಟ್ನಾಕ್ಕೆ ತೆರಳಿದ ಒಂದು ರೈಲು ಮಾತ್ರ ಶೇ 87ರಷ್ಟು ಸಾಮರ್ಥ್ಯದ ಟಿಕೆಟ್ ಬುಕ್ಕಿಂಗ್ ಆಗಿದ್ದವು.