ನವದೆಹಲಿ: ತನ್ನ ಇತ್ತೀಚಿನ ಗೌಪ್ಯತೆ ನೀತಿ ನವೀಕರಣದ ಬಗ್ಗೆ ವಾಟ್ಸಾಪ್ ಸರ್ಕಾರದಿಂದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಮುಕ್ತವಾಗಿದೆ. ಸಿಗ್ನಲ್‌ನಂತಹ ಪ್ರತಿಸ್ಪರ್ಧಿಗಳೊಂದಿಗೆ ಬಳಕೆದಾರರ ನಂಬಿಕೆಗಾಗಿ ಕಂಪನಿಯು ಸ್ಪರ್ಧಿಸಬೇಕಾಗುತ್ತದೆ ಎಂದು ಹೇಳಿದೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಾಟ್ಸಾಪ್ ಹೆಡ್ ವಿಲ್ ಕ್ಯಾಥ್‌ಕಾರ್ಟ್ ಮಾತನಾಡಿ, ಫೇಸ್‌ಬುಕ್ ಒಡೆತನದ ಕಂಪನಿಯು ಭಾರತದಾದ್ಯಂತ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗೆ ಬದ್ಧವಾಗಿದೆ. ಬಳಕೆದಾರರಿಗೆ ಅವರ ಸಂದೇಶಗಳು ಕೊನೆಯವರೆಗೆ ಎನ್‌ಕ್ರಿಪ್ಟ್ ಇರುತ್ತವೆ ಎಂದರು.
ಸಿಗ್ನಲ್ ಮತ್ತು ಟೆಲಿಗ್ರಾಂನಂತಹ ಪ್ರತಿಸ್ಪರ್ಧಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು ಡೌನ್‌ಲೋಡ್‌ಗಳಲ್ಲಿ ಅಸಾಧಾರಣ ಏರಿಕೆ ಕಂಡಿದ್ದು, ವಾಟ್ಸ್‌ಆ್ಯಪ್ ತನ್ನ ನವೀಕರಿಸಿದ ಗೌಪ್ಯತೆ ನೀತಿಗೆ ಬಳಕೆದಾರರ ಒಪ್ಪಿಗೆ ಕೋರಿದೆ.
ಗೌಪ್ಯತೆಗೆ ಸಂಬಂಧಿಸಿದಂತೆ ನಾವು ಬಳಕೆದಾರರ ನಂಬಿಕೆಗಾಗಿ ಸ್ಪರ್ಧಿಸಬೇಕಾಗಿದೆ ಎಂಬುದು ನಮಗೆ ತಿಳಿದಿದೆ. ಅದು ಜಗತ್ತಿಗೆ ತುಂಬಾ ಒಳ್ಳೆಯದು. ಜನರು ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಬಗ್ಗೆ ಆಯ್ಕೆಗಳನ್ನು ಹೊಂದಿರಬೇಕು. ಅವರ ಚಾಟ್‌ಗಳನ್ನು ಬೇರೆ ಯಾರೂ ನೋಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಕ್ಯಾಥ್‌ಕಾರ್ಟ್ ಹೇಳಿದರು.
ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಪ್ರತಿಸ್ಪರ್ಧಿ ಅಪ್ಲಿಕೇಷನ್‌ಗಳತ್ತ ಬಳಕೆದಾರರ ಚಲನವನ್ನು ವಾಟ್ಸಾಪ್ ನೋಡಿದೆಯೇ ಎಂದು ಕೇಳಿದಾಗ, ಕ್ಯಾಥ್‌ಕಾರ್ಟ್ ಋಣಾತ್ಮಕವಾಗಿ ಉತ್ತರಿಸಿದರು.