ಕರ್ನಾಟಕ

karnataka

ETV Bharat / business

WTOಗೆ ನೈಜೀರಿಯಾ ಅರ್ಥಶಾಸ್ತ್ರಜ್ಞೆ ಸಾರಥಿ: ಉನ್ನತ ಹುದ್ದೆಗೇರಿದ ಮೊದಲ ಮಹಿಳೆ ಮುಂದಿರುವ ಸವಾಲುಗಳೇನು? - ಡಬ್ಲ್ಯುಟಿ ಹೊಸ ಮುಖ್ಯಸ್ಥೆ

ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಸಾಕಷ್ಟು ವಾಣಿಜ್ಯ ಭಿನ್ನಾಭಿಪ್ರಾಯಗಳು ಇರುವಾಗಲೇ ವಿಶ್ವ ವಾಣಿಜ್ಯ ಒಕ್ಕೂಟದ ಮುಖ್ಯಸ್ಥ ಹುದ್ದೆಗೆ ಪ್ರಥಮ ಬಾರಿಗೆ ನೈಜೀರಿಯಾದ ಅರ್ಥಶಾಸ್ತ್ರಜ್ಞೆ ಎನ್‌ಗೊಜಿ ಒಕೊಂಜೊ-ಐವಾಲಾ ನೇಮಕವಾಗಿದ್ದಾರೆ. 'ಕೋವಿಡ್​-19 ಸಾಂಕ್ರಾಮಿಕ ರೋಗದ ಆರ್ಥಿಕ ಮತ್ತು ಆರೋಗ್ಯದ ಪರಿಣಾಮಗಳನ್ನು ತ್ವರಿತವಾಗಿ ಪರಿಹರಿಸುವುದು ಮತ್ತು ಬಡ ದೇಶಗಳಿಗೆ ಲಸಿಕೆಗಳಿಗಾಗಿ ಕ್ಯೂನಲ್ಲಿ ಕಾಯುವ ಅಗತ್ಯವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಮೊದಲ ಆದ್ಯತೆ' ಎಂದಿದ್ದಾರೆ.

Okonjo-Iweala
Okonjo-Iweala

By

Published : Feb 16, 2021, 8:33 AM IST

ಫ್ರಾಂಕ್​ಫರ್ಟ್​​: ನೈಜೀರಿಯಾದ ಅರ್ಥಶಾಸ್ತ್ರಜ್ಞೆ ಎನ್‌ಗೊಜಿ ಒಕೊಂಜೊ-ಐವಾಲಾ ಅವರನ್ನು ವಿಶ್ವ ವಾಣಿಜ್ಯ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಹೆಚ್ಚುತ್ತಿರುವ ರಕ್ಷಣಾವಾದ ಮತ್ತು ರಾಷ್ಟ್ರಗಳ ನಡುವಿನ ವ್ಯಾಪಾರದ ಭಿನ್ನಾಭಿಪ್ರಾಯದ ಮಧ್ಯೆ ಜಾಗತಿಕ ವಾಣಿಜ್ಯ ಒಕ್ಕೂಟದ ನೇತೃತ್ವ ವಹಿಸಿದ ಮೊದಲ ಮಹಿಳೆ ಮತ್ತು ಮೊದಲ ಆಫ್ರಿಕನ್ ಎಂಬ ಹೆಗ್ಗಳಿಕೆಗೆ ಐವಾಲಾ ಪಾತ್ರವಾಗಿದ್ದಾರೆ.

164 ದೇಶಗಳ ಪ್ರತಿನಿಧಿಗಳನ್ನು ಹೊಂದಿರುವ ಡಬ್ಲ್ಯುಟಿಒ, ರಾಷ್ಟ್ರಗಳ ನಡುವಿನ ವ್ಯಾಪಾರದ ನಿಯಮಗಳನ್ನು ನಿರ್ವಹಿಸುತ್ತದೆ. ವಾಣಿಜ್ಯ ವ್ಯಾಜ್ಯಗಳನ್ನು ಪರಿಹರಿಸುತ್ತದೆ. ಇಂತಹ ಮಹತ್ವದ ಹುದ್ದೆಗೆ 66ರ ಹರೆಯದ ಒಕೊಂಜೊ-ಐವಾಲಾ ಅವರು ನೇಮಕವಾಗಿದ್ದಾರೆ.

ಆನ್‌ಲೈನ್ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಐವಾಲಾ, ಡಬ್ಲ್ಯುಟಿಒ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ವ್ಯಾಪಕವಾದ ಸುಧಾರಣೆಗಳು ಅಗತ್ಯವಿರುವ ಸಮಯದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದೇನೆ ಎಂದರು.

ಕೋವಿಡ್​-19 ಸಾಂಕ್ರಾಮಿಕ ರೋಗದ ಆರ್ಥಿಕ ಮತ್ತು ಆರೋಗ್ಯದ ಪರಿಣಾಮಗಳನ್ನು ತ್ವರಿತವಾಗಿ ಪರಿಹರಿಸುವುದು ಮತ್ತು ಬಡ ದೇಶಗಳಿಗೆ ಲಸಿಕೆಗಳಿಗಾಗಿ ಕ್ಯೂನಲ್ಲಿ ಕಾಯುವ ಅಗತ್ಯವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಮೊದಲ ಆದ್ಯತೆಯಾಗಿದೆ. ವ್ಯಾಕ್ಸಿನೇಷನ್ ವಿಳಂಬವಾದರೇ ಆ ದೇಶಗಳು ಹೊಸ ರೂಪಾಂತರಗಳ ಮೂಲವಾಗಿರುತ್ತವೆ ಎಂದು ಹೇಳಿದರು.

ಇದನ್ನೂ ಓದಿ: ಭಾರಿ ಹಿಮಪಾತಕ್ಕೆ ಹೆಪ್ಪುಗಟ್ಟಿದ ಟೆಕ್ಸಸ್​: 120 ಅಪಘಾತ, ವಿದ್ಯುತ್​ ತುರ್ತು ಪರಿಸ್ಥಿತಿ ಘೋಷಣೆ!

ಸಂಸ್ಥೆಯ ಮುಂದೆ ಇರುವ ವಿವಾದಗಳ ಪರಿಹಾರ ಪ್ರಕ್ರಿಯೆ ಸುಧಾರಿಸುವುದು ಮತ್ತು ಡಿಜಿಟಲೀಕರಣ ಹಾಗೂ ಇ-ಕಾಮರ್ಸ್‌ನಂತಹ ಬದಲಾವಣೆ ಎದುರಿಸಲು ವ್ಯಾಪಾರ ನಿಯಮಗಳಿಗೆ ಮಾರ್ಗಗಳನ್ನು ಕಂಡುಕೊಳ್ಳುವುದು ನನ್ನ ಆದ್ಯತೆಯಾಗಿದೆ. ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ದೇಶಗಳು ತಮ್ಮ ವ್ಯಾಪಾರ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಏಕೈಕ ಸ್ಥಳ ಡಬ್ಲ್ಯುಟಿಒ ಎಂದು ತಿಳಿಸಿದರು.

ಇದು ಅಂದುಕೊಂಡಷ್ಟು ಸುಲಭವಾಗಿ ಆಗುವುದಿಲ್ಲ. ಏಕೆಂದರೆ ಸದಸ್ಯ ರಾಷ್ಟ್ರಗಳಲ್ಲಿ ನಂಬಿಕೆಯ ಕೊರತೆಯ ಸಮಸ್ಯೆ ನಮಗೆ ಎದುರಾಗಲಿದೆ. ಅದು ಕಾಲಾನಂತರದಲ್ಲಿ ಮತ್ತಷ್ಟು ಬೆಳೆದಿದೆ. ಒಂದು ಒಳ್ಳೆಯ ವಿಷಯವೆಂದರೆ, ವಿವಾದ ಪರಿಹಾರವನ್ನು ಸುಧಾರಿಸಬೇಕಾಗಿದೆ ಎಂಬುದನ್ನು ಪ್ರತಿಯೊಬ್ಬ ಸದಸ್ಯರೂ ಒಪ್ಪುತ್ತಾರೆ. ಆದರೂ ಆ ಸುಧಾರಣೆಗಳು ಏನಾಗಿರಬೇಕು ಎಂಬುದರ ಬಗ್ಗೆ ಅವರೆಲ್ಲ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ಐವಾಲಾ ವಿಶ್ಲೇಷಿಸಿದರು.

ABOUT THE AUTHOR

...view details