ನವದೆಹಲಿ:ವಿಶಿಷ್ಟ ಗುರುತಿನ ಆಧಾರ್ ಕಾರ್ಡ್ ಛಾಯಾಚಿತ್ರದ ಬಗ್ಗೆ ಅತೃಪ್ತಿ ಹೊಂದಿರುವವರು ತಮ್ಮ ಫೋಟೋ ಬದಲಾಯಿಸುವ ಅವಕಾಶ ಕಲ್ಪಿಸುತ್ತಿದೆ.
ಕಾರ್ಡ್ದಾರರು ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಫೋಟೋ ನವೀಕರಣ ಮಾಡಿಕೊಳ್ಳಬಹುದು.
ಯುಐಡಿಎಐ ಪ್ರಕಾರ, ಆಧಾರ್ ಕಾರ್ಡ್ ಫೋಟೋ ನವೀಕರಣಕ್ಕೆ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬೇಕು. ಅಲ್ಲಿನ ಆಧಾರ್ ಕಾರ್ಯನಿರ್ವಾಹಕರಿಂದ ಛಾಯಾಚಿತ್ರ ಬದಲಾವಣೆ ಬಗ್ಗೆ ಕೇಳಬೇಕು. ಫೋಟೋ ಬದಲಾವಣೆ ಶುಲ್ಕ 25 ರೂ. ಜೊತೆಗೆ ಜಿಎಸ್ಟಿ ಒಳಗೊಂಡಿರುತ್ತದೆ. ಆಧಾರ್ ಕಾರ್ಯನಿರ್ವಾಹಕನು ಆಧಾರ್ ಕಾರ್ಡ್ ಹೊಂದಿರುವವರಿಗೆ ನವೀಕರಣ ವಿನಂತಿ ಸಂಖ್ಯೆ (ಯುಆರ್ಎನ್) ಜತೆಗೆ ಸ್ವೀಕೃತಿ ಸ್ಲಿಪ್ ನೀಡುತ್ತಾರೆ.
ಆಧಾರ್ ಕಾರ್ಡ್ ಫೋಟೋ ನವೀಕರಣ ವಿಧಾನ ಹೀಗಿದೆ
1) ಯುಐಡಿಎಐ ವೆಬ್‌ಸೈಟ್ - uidai.gov.in ಭೇಟಿ ಕೊಟ್ಟು, ಆಧಾರ್ ದಾಖಲಾತಿ ಫಾರ್ಮ್ ಡೌನ್‌ಲೋಡ್ ಮಾಡಿ
2) ಆಧಾರ್ ದಾಖಲಾತಿ ಫಾರ್ಮ್ ಭರ್ತಿ ಮಾಡಿ ಮತ್ತು ಹತ್ತಿರದ ಆಧಾರ್ ದಾಖಲಾತಿ ಕೇಂದ್ರದಲ್ಲಿ ಆಧಾರ್ ಕಾರ್ಯನಿರ್ವಾಹಕರಿಗೆ ಸಲ್ಲಿಸಿ