ನವದೆಹಲಿ:ಎಚ್‌ಎಂಡಿ ಗ್ಲೋಬಲ್ (ನೋಕಿಯಾ ಮೊಬೈಲ್ಸ್) ಉಪಾಧ್ಯಕ್ಷ ಅಜೆಯ್ ಮೆಹ್ತಾ ಅವರು ಕಂಪನಿಯಿಂದ ಹೊರಬರುತ್ತಿದ್ದು, ತಮ್ಮದೇ ಆದ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಉದ್ಯಮದ ಇಕಿವಾ ಹೆಲ್ತ್ ಕೇರ್ ಡೊಮೈನ್ ಪ್ರಾರಂಭಿಸಲಿದ್ದಾರೆ.
ಭಾರತದಲ್ಲಿ ನೋಕಿಯಾ ಮೊಬೈಲ್ಸ್‌ನ ವ್ಯವಹಾರದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಮೆಹ್ತಾ ಅವರು ವಹಿಸಿಕೊಂಡಿದ್ದರು. ಮೆಹ್ತಾ ಅವರು ಕಂಪನಿಯಿಂದ ಹೊರಗುಳಿಯುತ್ತಿದ್ದಾರೆ ಎಂದು ಎಚ್‌ಎಂಡಿ ಗ್ಲೋಬಲ್ (ನೋಕಿಯಾ ಮೊಬೈಲ್ಸ್) ತಿಳಿಸಿದೆ
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ದೇಶದ ನೋಕಿಯಾ ಮೊಬೈಲ್ಸ್ ವ್ಯವಹಾರದ ಮೇಲ್ವಿಚಾರಣೆಯ ಜವಾಬ್ದಾರಿಯಿಂದ ಹೊರನಡೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
16 ವರ್ಷಗಳ ನಂತರ ನನ್ನ ನೆಚ್ಚಿನ ನೋಕಿಯಾ ಬ್ರಾಂಡ್ಗೆ ವಿದಾಯ ಹೇಳುತ್ತಿದ್ದೇನೆ. ಉದ್ಯಮಶೀಲತೆಯ ರೋಮಾಂಚಕಾರಿ ಪ್ರಪಂಚವನ್ನು ಅನ್ವೇಷಿಸಲು ನಾನು ನಿರ್ಧರಿಸಿದ್ದೇನೆ. ನೋಕಿಯಾ ಟು ಮೈಕ್ರೋಸಾಫ್ಟ್ ಟು ಎಚ್‌ಎಂಡಿ, ನಾನು ಅದ್ಭುತ ಜನರೊಂದಿಗೆ ವಿಶ್ವದಾದ್ಯಂತ ಅನೇಕ ಪಾತ್ರಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಒಂದು ಕಾಲದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರಬಲ್ಯ ಮೆರೆದಿದ್ದ ನೋಕಿಯಾ, 2012ರ ವೇಳೆಗೆ ತನ್ನ ನೆಲೆಯನ್ನು ಕಳೆದುಕೊಳ್ಳಲಾರಂಭಿಸಿತು. ಡ್ಯುಯಲ್ ಸಿಮ್ ಮತ್ತು ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳಂತಹ ಬದಲಾದ ಟ್ರೆಂಡ್‌ಗಳಿಗೆ ನಿಧಾನಗತಿಯಲ್ಲಿ ನೋಕಿಯಾ ತೊಡಗಿಸಿಕೊಂಡಿದ್ದು ಮುಳುವಾಯಿತು.