ಕರ್ನಾಟಕ

karnataka

ಜಾರ್ಜ್ ಫ್ಲಾಯ್ಡ್ ಹತ್ಯೆ: ವರ್ಣಭೇದ ನೀತಿ ವಿರುದ್ಧ ಸಿಡಿದೆದ್ದ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ

By

Published : Jun 2, 2020, 4:32 PM IST

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ ಅಮೆರಿಕದಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟ ಭುಗಿಲೆದ್ದಿದೆ. ವರ್ಣೀಯ ತಾರತಮ್ಯ ವಿರುದ್ಧ ಮೈಕ್ರೋಸಾಫ್ಟ್​ ಸಿಇಒ ಧ್ವನಿ ಎತ್ತಿದ್ದಾರೆ.

Microsoft CEO Satya Nadella
ಮೈಕ್ರೋಸಾಫ್ಟ್​ ಸಿಇಒ ಸತ್ಯ

ವಾಷಿಂಗ್ಟನ್: ಸಮಾಜದಲ್ಲಿ ದ್ವೇಷ ಮತ್ತು ವರ್ಣಭೇದ ನೀತಿಗೆ ಸ್ಥಾನವಿಲ್ಲ. ಬೇರೊಬ್ಬ ವ್ಯಕ್ತಿಯ ದೃಷ್ಟಿಕೋನದಿಂದ ಪ್ರಪಂಚವನ್ನು ಅರ್ಥಮಾಡಿಕೊಳ್ಳುವ ಪರಾನುಭೂತಿ ಮತ್ತು ಪರಸ್ಪರ ತಿಳುವಳಿಕೆ ಪ್ರಾರಂಭವಾಗಿದೆ. ಆದರೂ ಇದಕ್ಕೂ ಇನ್ನೂ ಹೆಚ್ಚಿನದನ್ನು ನಾವು ಮಾಡಬೇಕಾಗಿದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಜಾಗತಿಕ ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ.

ನಮ್ಮ ಸಮಾಜದಲ್ಲಿ ದ್ವೇಷ ಮತ್ತು ವರ್ಣಭೇದ ನೀತಿಗೆ ಸ್ಥಾನವಿಲ್ಲ. ಪರಾನುಭೂತಿ ಮತ್ತು ಹಂಚಿಕೆಯ ತಿಳುವಳಿಕೆಯೊಂದನ್ನು ಆರಂಭವಿದು. ಆದರೆ ನಾವು ಇದಕ್ಕೂ ಹೆಚ್ಚಿನದನ್ನು ಮಾಡಬೇಕು ಎಂದು ನಾದೆಲ್ಲಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನಾನು, ಕಪ್ಪು ಮತ್ತು ಆಫ್ರಿಕನ್ ಅಮೇರಿಕನ್ ಸಮುದಾಯದೊಂದಿಗೆ ನಿಲ್ಲುತ್ತೇನೆ. ನಮ್ಮ ಕಂಪನಿಯಲ್ಲಿ ಮತ್ತು ನಮ್ಮ ಸಮುದಾಯಗಳಲ್ಲಿ ಈ ಕೆಲಸವನ್ನು ಮಾಡಲು ನಾವು ಬದ್ಧರಾಗಿದ್ದೇವೆ ಎಂದು ನಾದೆಲ್ಲಾ ಹೇಳಿದರು.

ಇಂದು ಅಮೆರಿಕ ಗೂಗಲ್ ಮತ್ತು ಯೂಟ್ಯೂಬ್ ಮುಖಪುಟಗಳಲ್ಲಿ ನಾವು ಜನಾಂಗೀಯ ಸಮಾನತೆಗೆ ನಮ್ಮ ಬೆಂಬಲವನ್ನು ಕಪ್ಪು ಸಮುದಾಯದೊಂದಿಗೆ ಹಂಚಿಕೊಳ್ಳುತ್ತೇವೆ. ಜಾರ್ಜ್ ಫ್ಲಾಯ್ಡ್, ಬ್ರಿಯೋನಾ ಟೇಲರ್, ಅಹ್ಮದ್ ಅರ್ಬೆರಿ ಮತ್ತು ಧ್ವನಿ ಇಲ್ಲದ ಇತರರ ನೆನಪಿಗಾಗಿ ಹಂಚಿಕೊಳ್ಳುತ್ತೇವೆ ಎಂದು ಪಿಚೈ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ABOUT THE AUTHOR

...view details