ಕರ್ನಾಟಕ

karnataka

ETV Bharat / business

ಸುಪ್ರೀಂ ತೀರ್ಪು ಹೊರಬೀಳುವ ತನಕ ಒಂದು ರೂ. ಬಾಕಿ ಕೊಡಲ್ಲ: ಏರ್​ಟೆಲ್​ ಖಡಕ್​ ಸಂದೇಶ - ಭಾರತೀಯ ಟೆಲಿಕಾಂ ವಲಯ

ಅಕ್ಟೋಬರ್ 24ರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಜನವರಿ 23ರ ಗಡುವು ಇಂದಿಗೆ ಕೊನೆಗೊಳ್ಳುತ್ತದೆ. ಯಾವುದೇ ಎಜಿಆರ್​ ಶುಲ್ಕ ಪಾವತಿಸುವುದಿಲ್ಲ ಮತ್ತು ಮುಂದಿನ ತೀರ್ಪಿನವರೆಗೂ ಕಾಯುವುದಾಗಿ ಏರ್​ಟೆಲ್​ ಡಾಟ್​ಗೆ ತಿಳಿಸಿದ್ದು, ವೊಡಾಫೋನ್​- ಐಡಿಯಾ ಕೂಡ ಇದೇ ನಿಲುವು ತೆಗೆದುಕೊಂಡಿದೆ.

Airtel
ಏರ್​ಟೆಲ್

By

Published : Jan 23, 2020, 1:40 PM IST

ನವದೆಹಲಿ:ಮುಂದಿನ ವಾರ ಸುಪ್ರೀಂಕೋರ್ಟ್ ವಿಚಾರಣೆ ಹೊರಬೀಳುವವರೆಗೂ ಯಾವುದೇ ಎಜಿಆರ್​ನ ಬಾಕಿ ಹಣ ಪಾವತಿಸುವುದಿಲ್ಲ ಎಂದು ಭಾರ್ತಿ ಏರ್ಟೆಲ್ ಟೆಲಿಕಾಂ ಇಲಾಖೆಗೆ ತಿಳಿಸಿದೆ.

'ಇಂದು ಎಜಿಆರ್ ಬಾಕಿ ಪಾವತಿ ಮಾಡುವುದಿಲ್ಲ. ಸುಪ್ರೀಂಕೋರ್ಟ್​ನ ಮಾರ್ಪಾಡು ಅರ್ಜಿ ವಿಚಾರಣೆ ಮುಗಿದು ತೀರ್ಪು ಬರುವವರೆಗೂ ಕಾಯುವಂತೆ' ಏರ್​ಟೆಲ್​, ಡಿಒಟಿಗೆ ಪತ್ರ ಮುಖೇನ ತಿಳಿಸಿದೆ.

ಅಕ್ಟೋಬರ್ 24ರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಜನವರಿ 23ರ ಗಡುವು ಇಂದಿಗೆ ಕೊನೆಗೊಳ್ಳುತ್ತದೆ. ಯಾವುದೇ ಶುಲ್ಕ ಪಾವತಿಸುವುದಿಲ್ಲ ಮತ್ತು ಮುಂದಿನ ತೀರ್ಪಿನವರೆಗೂ ಕಾಯುವುದಾಗಿ ತಿಳಿಸಿದೆ. ವೊಡಾಫೋನ್​- ಐಡಿಯಾ ಕೂಡ ಇದೇ ನಿಲುವು ತೆಗೆದುಕೊಂಡಿದೆ.

ಏರ್​ಟೆಲ್​ನ ಎಜಿಆರ್​ ಬಾಕಿ ಮೊತ್ತ ₹ 35,586 ಕೋಟಿ ಮತ್ತು ವೊಡಾಫೋನ್​​- ಐಡಿಯಾದ ಮೊತ್ತ ₹ 52,039 ಕೋಟಿಯಷ್ಟಿದೆ. ಟಾಟಾ ಟೆಲಿಸರ್ವೀಸ್​ ಸೇರಿ ಒಟ್ಟು ಎಜಿಆರ್​ ಬಾಕಿ 1.02 ಲಕ್ಷ ಕೋಟಿಯಷ್ಟಿದೆ.

ABOUT THE AUTHOR

...view details