ಮುಂಬೈ: ಕಳೆದ ತಿಂಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಾಣಿಜ್ಯ ಬ್ಯಾಂಕ್ಗಳು ವಾರದಲ್ಲಿ ಐದು ದಿನ ಮಾತ್ರವೇ ಕೆಲಸ ಎಂಬ ವದಂತಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.
ವಾಣಿಜ್ಯ ಬ್ಯಾಂಕ್ಗಳಲ್ಲಿ ವಾರಕ್ಕೆ ಐದೇ ದಿನ ಕೆಲಸ.. ಆರ್‌ಬಿಐ ಈ ಬಗ್ಗೆ ಏನ್ ಹೇಳಿತು? - undefined
ವಾಣಿಜ್ಯ ಬ್ಯಾಂಕ್ಗಳಿಗೆ ವಾರದಲ್ಲಿ ಐದು ದಿನಗಳವರೆಗೆ ಮಾತ್ರವೇ ಕೆಲಸದ ಅವಧಿ ಎಂಬ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಆರ್‌ಬಿಐ ತಿಳಿಸಿದೆ.

ಸಂಗ್ರಹ ಚಿತ್ರ
ವಾಣಿಜ್ಯ ಬ್ಯಾಂಕ್ಗಳಿಗೆ ವಾರದಲ್ಲಿ ಐದು ದಿನಗಳವರೆಗೆ ಮಾತ್ರವೇ ಕೆಲಸದ ಅವಧಿ ಎಂಬ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.ಆರ್‌ಬಿಐ ಸೂಚನೆಯ ಪ್ರಕಾರ ಬ್ಯಾಂಕ್ಗಳು ವಾರದಲ್ಲಿ ಐದು ದಿನ ಮಾತ್ರವೇ ಕೆಲಸ ಮಾಡಲಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದು ಸುಳ್ಳು. ಭಾನುವಾರ ಬಿಟ್ಟು, ಉಳಿದಂತೆ ತಿಂಗಳು ಎರಡು ಮತ್ತು ನಾಲ್ಕನೇ ಶನಿವಾರ ಮಾತ್ರವೇ ಬ್ಯಾಂಕ್ಗಳಿಗೆ ರಜೆ ಇರಲಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.