ನವದೆಹಲಿ :ಭಾರತದಲ್ಲಿ ತಯಾರಿಸಿದ ಕೊರೊನಾ ಲಸಿಕೆ ಕೋವ್ಯಾಕ್ಸಿನ್ನ ತುರ್ತು ಬಳಕೆಗೆ ನೇಪಾಳ ರಾಷ್ಟ್ರೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿದೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಈವರೆಗೆ ಮೂರು ದೇಶಗಳಲ್ಲಿ ಅನುಮೋದಿಸಲಾಗಿದೆ. ಕೊರೊನಾ ನಿರೋಧಕತೆಯ ಮೇಲೆ ಶೇ.81ರಷ್ಟು ಪರಿಣಾಮಕಾರಿತ್ವ ಹೊಂದಿರುವ ಈ ಲಸಿಕೆಯನ್ನು ತುರ್ತು ಬಳಕೆಯಡಿ ಕೇಂದ್ರ ಸರ್ಕಾರವು ಜನವರಿಯಲ್ಲಿ ಅಂಗೀಕರಿಸಿತ್ತು. ಈ ತಿಂಗಳ ಆರಂಭದಲ್ಲಿ ಜಿಂಬಾಬ್ವೆ ಸರ್ಕಾರವು ಕೋವ್ಯಾಕ್ಸಿನ್ ಲಸಿಕೆ ಬಳಕೆಗೆ ಹಸಿರು ನಿಶಾನೆ ನೀಡಿತು.