ಕರ್ನಾಟಕ

karnataka

ETV Bharat / business

ಕೋವಿಡ್ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್​ ಹೊರೆ ಇಳಿಕೆ: 'ಬ್ಯಾರಿಸಿಟಿನಿಬ್' ಮಾತ್ರೆಗೆ ಸಿಕ್ತು ಅನುಮೋದನೆ! - ನ್ಯಾಟ್ಕೊ ಫಾರ್ಮಾದ ಬ್ಯಾರಿಸಿಟಿನಿಬ್

ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ​ತುರ್ತು ಚಿಕಿತ್ಸೆಗೆ ನ್ಯಾಟ್ಕೊ ಫಾರ್ಮಾದ ಬ್ಯಾರಿಸಿಟಿನಿಬ್ 1 ಮಿ.ಗ್ರಾಂ., 2ಮಿ.ಗ್ರಾಂ. ಮತ್ತು 4ಮಿ.ಗ್ರಾಂ. ಮಾತ್ರೆಗಳನ್ನು ಬಳಸಲು ಸೋಮವಾರ ಬೆಳಗ್ಗೆ ಅನುಮೋದನೆ ನೀಡಿದೆ ಎಂದು ಕಂಪನಿ ತಿಳಿಸಿದೆ. ಕೋವಿಡ್ -19 ಪಾಸಿಟಿವ್​ ರೋಗಿಗಳ ಚಿಕಿತ್ಸೆಯಲ್ಲಿ ಈ ಬ್ಯಾರಿಸಿಟಿನಿಬ್ ಮಾತ್ರೆ ಬಳಸಲಾಗುತ್ತದೆ.

drug
drug

By

Published : May 3, 2021, 9:05 PM IST

ಹೈದರಾಬಾದ್: ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ತುರ್ತು ಬಳಕೆಗಾಗಿ ಮತ್ತೊಂದು ಔಷಧಕ್ಕೆ ಅನುಮೋದ ನೀಡಲಾಗಿದೆ.

ಕೋವಿಡ್​-19 ಪಾಸಿಟಿವ್​ ರೋಗಿಗಳ ಚಿಕಿತ್ಸೆಗಾಗಿ ನ್ಯಾಟ್ಕೊ ಫಾರ್ಮಾ ತನ್ನ ಬ್ಯಾರಿಸಿಟಿನಿಬ್ ಮಾತ್ರೆಗಳ ತುರ್ತು ಬಳಕೆಗೆ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್​ನಿಂದ (ಸಿಡಿಎಸ್​​ಸಿ​​​ಒ) ಅನುಮೋದನೆ ಪಡೆದಿದೆ.

ಸಿಡಿಎಸ್​​ಸಿಒ ತುರ್ತು ಚಿಕಿತ್ಸೆಗೆ ಬ್ಯಾರಿಸಿಟಿನಿಬ್ 1 ಮಿ.ಗ್ರಾಂ., 2ಮಿ.ಗ್ರಾಂ. ಮತ್ತು 4ಮಿ.ಗ್ರಾಂ. ಮಾತ್ರೆಗಳನ್ನು ಬಳಸಲು ಸೋಮವಾರ ಬೆಳಗ್ಗೆ ಅನುಮೋದನೆ ನೀಡಿದೆ ಎಂದು ನ್ಯಾಟ್ಕೊ ಫಾರ್ಮಾ ತಿಳಿಸಿದೆ. ಕೋವಿಡ್ -19 ಪಾಸಿಟಿವ್​ ರೋಗಿಗಳ ಚಿಕಿತ್ಸೆಯಲ್ಲಿ ಈ ಬ್ಯಾರಿಸಿಟಿನಿಬ್ ಮಾತ್ರೆ ಬಳಸಲಾಗುತ್ತದೆ.

ದೇಶಾದ್ಯಂತದ ಕೊರೊನಾ ರೋಗಿಗಳಿಗೆ ಬ್ಯಾರಿಸಿಟಿನಿಬ್ ಪೂರೈಸಲು ಈ ವಾರ ಉತ್ಪಾದನೆ ಪ್ರಾರಂಭಿಸುವುದಾಗಿ ನ್ಯಾಟ್ಕೊ ಫಾರ್ಮಾ ಹೇಳಿದೆ.

ದೇಶದಲ್ಲಿ ರೆಮ್ಡೆಸಿವಿರ್​ ಔಷಧದ ಕೊರತೆ ನೀಗಿಸಲು ‘ಬ್ಯಾರಿಸಿಟಿನಿಬ್’ ತುರ್ತು ಬಳಕೆಗೆ ನ್ಯಾಟ್ಕೊ ಫಾರ್ಮಾ ಅನುಮೋದನೆ ಪಡೆದಿದೆ. 'ಬ್ಯಾರಿಸಿಟಿನಿಬ್' ಔಷಧದ ಅನುಮೋದನೆಯೊಂದಿಗೆ ನ್ಯಾಟ್ಕೊ ಫಾರ್ಮಾದ ಷೇರುಗಳ ಬೆಲೆ ಏರಿಕೆಯತ್ತ ಸಾಗುತ್ತಿವೆ. ನ್ಯಾಟ್ಕೊ ಫಾರ್ಮಾ ಬ್ರಾಂಡೆಡ್, ಜೆನೆರಿಕ್ ಔಷಧ, ಬೃಹತ್ ಆಕ್ಟಿವೇಟರ್‌ ಮತ್ತು ಸ್ಟಾಕ್​ಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪೂರೈಸುತ್ತದೆ.

ABOUT THE AUTHOR

...view details