ನವದೆಹಲಿ : ಪ್ರಪಂಚವನ್ನೇ ಭೀತಿಗೆ ತಳ್ಳಿದ ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಲಭ್ಯವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಶುಭ ಸೂಚಕದ ನಡುವೆ ವ್ಯಾಕ್ಸಿನ್ನ ಲಭ್ಯತೆ ಮತ್ತು ದರದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ.
ಇದರ ನಡುವೆ ಇನ್ಫೋಸಿಸ್ ಸಹ - ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು, ಕೊರೊನಾ ವೈರಸ್ ಲಸಿಕೆ ಲಭ್ಯವಾದ ನಂತರ ಜನರಿಗೆ ಶುಲ್ಕ ವಿಧಿಸಬಾರದು ಎಂದು ಮನವಿ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನನ್ನ ನಂಬಿಕೆ ಅನುಗುಣವಾಗಿ ಕೋವಿಡ್ -19 ಲಸಿಕೆ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿರಬೇಕು. ಅದನ್ನು ಪ್ರತಿಯೊಬ್ಬರಿಗೂ ಉಚಿತವಾಗಿ ನೀಡಬೇಕು. ಈ ಲಸಿಕೆಗಳು ಭೂಮಿಯ ಸಂಪೂರ್ಣ ಜನಸಂಖ್ಯೆಗೆ ಮುಕ್ತವಾಗಿರಬೇಕು.