ಕರ್ನಾಟಕ

karnataka

ETV Bharat / business

ಭಾರತ ಪೆಟ್ರೋಲಿಯಂ ಖರೀದಿಗೆ ಮುಖೇಶ್ ಅಂಬಾನಿ ಇಚ್ಛೆ: ಬಿಡ್​ ಸಲ್ಲಿಕೆ ಸಾಧ್ಯತೆ! - ಆರ್​ಐಎಲ್

ಬಿಪಿಸಿಎಲ್‌ನ ಮೂರು ಸಂಸ್ಕರಣಾಗಾರಗಳಾದ ಮುಂಬೈ, ಕೇರಳದ ಕೊಚ್ಚಿ ಮತ್ತು ಮಧ್ಯಪ್ರದೇಶದ ಬಿನಾ ಹೊಂದಿದ್ದು, 16,309 ಪೆಟ್ರೋಲ್ ಪಂಪ್‌ಗಳು, 6,113 ಎಲ್‌ಪಿಜಿ ವಿತರಕ ಏಜೆನ್ಸಿಗಳು ಮತ್ತು ದೇಶದ 256 ವಾಯುಯಾನ ಇಂಧನ ಕೇಂದ್ರಗಳಲ್ಲಿ ಐದನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಖರೀದಿದಾರರಿಗೆ ನೀಡುತ್ತದೆ.

Mukesh Ambani
ಮುಖೇಶ್ ಅಂಬಾನಿ

By

Published : Jul 30, 2020, 3:53 PM IST

ನವದೆಹಲಿ:ಬಿಲಿಯನೇರ್ ಮುಖೇಶ್ ಅಂಬಾನಿಯ ತೈಲದಿಂದ ದೂರಸಂಪರ್ಕ ಸಂಘಟನೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಐಎಲ್) ಮತ್ತು ರಷ್ಯಾದ ಇಂಧನ ದೈತ್ಯ ರೋಸ್ನೆಫ್ಟ್ ಅಥವಾ ಅದರ ಅಂಗಸಂಸ್ಥೆಗಳಾದ ಸೌದಿ ಅರೇಬಿಯನ್ ಆಯಿಲ್ ಕಂಪನಿ (ಸೌದಿ ಅರಾಮ್ಕೊ) ಸರ್ಕಾರದ ಶೇ 52.98ರಷ್ಟು ಪಾಲನ್ನು ಖರೀದಿಸಲು ಬಿಡ್ ಮಾಡಬಹುದಾದ ಸಂಭವನೀಯ ಸಾಲಿನಲ್ಲಿ ಸೇರಿವೆ ಎಂದು ಮೂಲಗಳು ತಿಳಿಸಿವೆ.

ಭಾರತದ ಮೂರನೇ ಅತಿದೊಡ್ಡ ತೈಲ ಸಂಸ್ಕರಣಾಗಾರ ಮತ್ತು ಎರಡನೇ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಬಿಡ್ಡಿಂಗ್ ಸಾಲಿನಲ್ಲಿವೆ.

ಬಿಪಿಸಿಎಲ್‌ನ ತೈಲ ಸಂಸ್ಕರಣಾಗಾರಗಳು ವಹಿವಾಟು ನಡೆಸಲು ಸೂಕ್ತವಲ್ಲದ ಸ್ಥಳಗಳಲ್ಲಿವೆ. ಇದಲ್ಲದೆ, ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಇಂಧನ ಮಾರುಕಟ್ಟೆಯನ್ನು ಪ್ರವೇಶಿಸಲು ಇಲ್ಲಿನ ಕಾರ್ಮಿಕ ಕಾಯ್ದೆಗಳು ತೊಡಕಾಗಿವೆ ಎನ್ನುವ ಕಾರಣಗಳನ್ನು ನೀಡಿ ಬ್ರಿಟನ್‌ನ ಬಿಪಿ ಪಿಎಲ್‌ಸಿ ಮತ್ತು ಫ್ರಾನ್ಸ್‌ನ ಟೋಟಲ್‌ ಕಂಪನಿಗಳು ಬಿಡ್‌ನಿಂದ ಹಿಂದೆ ಸರಿದಿವೆ.

ಬಿಪಿಸಿಎಲ್‌ನ ಮೂರು ಸಂಸ್ಕರಣಾಗಾರಗಳಾದ ಮುಂಬೈ, ಕೇರಳದ ಕೊಚ್ಚಿ ಮತ್ತು ಮಧ್ಯಪ್ರದೇಶದ ಬಿನಾ ಹೊಂದಿದ್ದು, 16,309 ಪೆಟ್ರೋಲ್ ಪಂಪ್‌ಗಳು, 6,113 ಎಲ್‌ಪಿಜಿ ವಿತರಕ ಏಜೆನ್ಸಿಗಳು ಮತ್ತು ದೇಶದ 256 ವಾಯುಯಾನ ಇಂಧನ ಕೇಂದ್ರಗಳಲ್ಲಿ ಐದನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಖರೀದಿದಾರರಿಗೆ ನೀಡುತ್ತದೆ.

ರಾಷ್ಟ್ರವ್ಯಾಪಿ ಇಂಧನ ಚಿಲ್ಲರೆ ವ್ಯಾಪಾರ ಜಾಲದಲ್ಲಿ ಇದು ಶೇ 22ರಷ್ಟು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತದೆ ಎಂಬುದು ಒಪ್ಪಂದದ ಅತ್ಯಂತ ಲಾಭದಾಯಕ ಭಾಗವಾಗಿದೆ ಎಂದು ಬಿಡ್ಡಿಂಗ್ ಪ್ರಕ್ರಿಯೆಯ ಬಗ್ಗೆ ತಿಳಿದಿರುವ ಮೂಲಗಳು ಹೇಳಿವೆ.

ABOUT THE AUTHOR

...view details