ಕರ್ನಾಟಕ

karnataka

ETV Bharat / business

ಅಂಬಾನಿ ಖಜಾನೆಗೆ ನುಸುಳಿದ ಕೊರೊನಾ: ಕರ್ನಾಟಕದ ಅರ್ಧ ಬಜೆಟ್​ನಷ್ಟು ರೊಕ್ಕ ಖೋತಾ - ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ಗುರುವಾರದ ವಹಿವಾಟಿನಂದು ರಿಲಾಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯದಲ್ಲಿ ಶೇ 9ರಷ್ಟು ಇಳಿಕೆಯಾಗಿದೆ. ಈ ದರವು ಕಳೆದ 52 ವಾರಗಳಲ್ಲಿ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ.

Mukesh Ambani
ಮುಖೇಶ್ ಅಂಬಾನಿ

By

Published : Mar 12, 2020, 8:04 PM IST

ಮುಂಬೈ: ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಬೆಂಬಿಡದೆ ಕಾಡುತ್ತಿರುವ ಕೊರೊನಾ ವೈರಸ್​, ರಿಲಾಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ನ ಉದ್ಯಮ ದಿಗ್ಗಜ ಮುಖೇಶ್ ಅಂಬಾನಿ ಖಜಾನೆಗೂ ಲಗ್ಗೆ ಇಟ್ಟಿದೆ.

ಗುರುವಾರದ ವಹಿವಾಟಿನಂದು ರಿಲಾಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯದಲ್ಲಿ ಶೇ 9ರಷ್ಟು ಇಳಿಕೆಯಾಗಿದೆ. ಈ ದರವು ಕಳೆದ 52 ವಾರಗಳಲ್ಲಿ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ.

ಮಧ್ಯಾಹ್ನ 12.32ರ ವೇಳೆಗೆ ಷೇರು ಮೌಲ್ಯದಲ್ಲಿ ಶೇ 5.83ರಷ್ಟು ಕುಸಿದು ₹ 1,086ಕ್ಕೆ ತಲುಪಿತು. ಇದು ಕಳೆದ 52 ವಾರಗಳಲ್ಲಿನ ತೀರಾ ಕೆಳಮಟ್ಟದ ದರವಾಗಿದೆ.

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟಾರೆ ಷೇರು ಮೌಲ್ಯದ ಕುಸಿತವು ಶೇ 28ರಷ್ಟಿದ್ದು, 15 ಬಿಲಿಯನ್​ ಡಾಲರ್​ನಷ್ಟು (₹ 1.11 ಲಕ್ಷ ಕೋಟಿ) ಸಂಪತ್ತನ್ನು ಮುಖೇಶ್ ಅಂಬಾನಿ ಕಳೆದುಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟು ಏಷ್ಯಾದ ಶ್ರೀಮಂತ ಉದ್ಯಮಿ ಎಂಬ ಹಣೆಪಟ್ಟಿಯನ್ನು ಚೀನಾದ ಉದ್ಯಮಿ ಜಾಕ್ ಮಾ ಅವರಿಗೆ ಬಿಟ್ಟುಕೊಟ್ಟರು.

ABOUT THE AUTHOR

...view details