ನವದೆಹಲಿ:ಕೆಲವು ದಿನಗಳ ಹಿಂದೆಯಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದ ಚೀನಾದ ಲೋನ್ ವುಲ್ಫ್(ಒಂಟಿ ತೋಳ) ಝಾಂಗ್ ಶನ್ಶನ್ ಅವರನ್ನು ಹಿಂದಿಕ್ಕಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.
ಭಾರತದ ಮುಖೇಶ್ ಅಂಬಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದು, ಮಾರುಕಟ್ಟೆಯಲ್ಲಿ ಅವರ ಸಂಪತ್ತು ವೃದ್ಧಿಯಾಗುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ತೈಲದಿಂದ ರಾಸಾಯನಿಕ ವ್ಯವಹಾರದ ತನಕ ವ್ಯಾಪಿಸಿಕೊಂಡಿದೆ. ಸುಮಾರು 80 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅಂಬಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಝಾಂಗ್ ಶನ್ಶನ್ ಅವರ ವಾಟರ್ ಬಾಟಲ್ ಕಂಪನಿ ಷೇರು ಈ ವಾರ ಶೇ. 20ರಷ್ಟು ಇಳಿಕೆಯಾಗಿದೆ.