ಕರ್ನಾಟಕ

karnataka

ETV Bharat / business

ವಿಶ್ವದ ಆಗರ್ಭ ಶ್ರೀಮಂತ : ಗೂಗಲ್ ಸಹ-ಸಂಸ್ಥಾಪಕರನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ ಮುಖೇಶ್ ಅಂಬಾನಿ!!

ಕಳೆದ ತಿಂಗಳು ವಿಶ್ವದ ಅಗ್ರ 10 ಶ್ರೀಮಂತ ಉದ್ಯಮಿಗಳು ಕ್ಲಬ್‌ನಲ್ಲಿ ಏಷ್ಯಾದ ಏಕೈಕ ಉದ್ಯಮಿಯಾಗಿ ಮುಖೇಶ್ ಅಂಬಾನಿ ಸ್ಥಾನಪಡೆದಿದ್ದಾರೆ. ಕೋವಿಡ್​-19 ಪೂರ್ವ ಮಟ್ಟಕ್ಕೆ ಹೋಲಿಸಿದರೇ ಅಂಬಾನಿಯ ಸಂಪತ್ತು ಶೇ 1ರಷ್ಟು ಕಡಿಮೆಯಾಗಿದೆ ಎಂದು ವರದಿಯೊಂದು ಹೇಳಿದೆ. ಮಾರುಕಟ್ಟೆ ಬಂಡವಾಳೀಕರಣದಿಂದ (ಎಂ-ಕ್ಯಾಪ್) ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್, ಈಗ ಮಾರುಕಟ್ಟೆ ಕ್ಯಾಪ್ ಮೂಲಕ ವಿಶ್ವದ 51ನೇ ಅತಿ ಹೆಚ್ಚು ಮೌಲ್ಯದ ಕಂಪನಿಯಾಗಿದೆ.

Mukesh Ambani
ಮುಖೇಶ್ ಅಂಬಾನಿ

By

Published : Jul 14, 2020, 3:28 PM IST

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಆಲ್ಫಾಬೆಟ್ (ಗೂಗಲ್‌) ಸಹ ಸಂಸ್ಥಾಪಕರಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್‌ ಅವರನ್ನು ಹಿಂದಿಕ್ಕಿ ವಿಶ್ವದ 6ನೇ ಆಗರ್ಭ ಶ್ರೀಮಂತ ಉದ್ಯಮಿ ಆಗಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಅಂಬಾನಿ ಪ್ರಸ್ತುತ 72.4 ಬಿಲಿಯನ್ ಡಾಲರ್​ ಮೌಲ್ಯದಷ್ಟು ಸಂಪತ್ತು ಹೊಂದಿದ್ದಾರೆ. ಆರ್‌ಐಎಲ್‌ನ ಷೇರು ದರ ಸೋಮವಾರದ ವಹಿವಾಟಿನಂದು ಶೇ. 3ರಷ್ಟು ಏರಿಕೆ ಕಂಡಿದೆ. ಅಂಬಾನಿಯ ಸಂಪತ್ತು 2.17 ಬಿಲಿಯನ್ ಡಾಲರ್​ನಷ್ಟು ಏರಿಕೆಯಾಗಿದೆ. ಸೋಮವಾರ ಅಮೆರಿಕದ ಟೆಕ್ ಷೇರುಗಳ ಕುಸಿತದಿಂದ ಪೇಜ್ ಮೌಲ್ಯವು. 71.6 ಬಿಲಿಯನ್​ ಡಾಲರ್​ಗೆ ಇಳಿದ್ರೇ ಬ್ರಿನ್ ಅವರ ಮೌಲ್ಯ 69.4 ಬಿಲಿಯನ್ ಡಾಲರ್​ಗೆ ತಲುಪಿತು.

63ರ ಹರೆಯದ ಅಂಬಾನಿ ಕಳೆದ ವಾರ ವಾರೆನ್ ಬಫೆಟ್‌ ಅವರನ್ನು ಹಿಂದಿಕ್ಕೆ ವಿಶ್ವದ 8ನೇ ಶ್ರೀಮಂತ ಉದ್ಯಮಿ ಎಂಬ ಹೆಗ್ಗಳಿಕೆ ಪಡೆದಿದ್ದರು. ಡಿಜಿಟಲ್ ಪ್ಲಾಟ್​ಫಾರ್ಮ್​ ಜಿಯೋದಲ್ಲಿ ಹಲವು ಕಂಪನಿಗಳು ಹೂಡಿಕೆ ಮಾಡಿದ್ದ ಕಾರಣದಿಂದಾಗಿ ಮಾರ್ಚ್​ನಲ್ಲಿ ಆರ್​​ಐ​ಎಲ್ ಷೇರುಗಳು ದ್ವಿಗುಣವಾಗಿವೆ. ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಅಂಬಾನಿಯ ಸಂಪತ್ತು ಗಮನಾರ್ಹ ಏರಿಕೆ ಕಂಡಿದೆ.

ಸೂಚ್ಯಂಕದ ಪ್ರಕಾರ, ಕಳೆದ ತಿಂಗಳು ವಿಶ್ವದ ಅಗ್ರ 10 ಶ್ರೀಮಂತ ಉದ್ಯಮಿಗಳು ಕ್ಲಬ್‌ನಲ್ಲಿ ಏಷ್ಯಾದ ಏಕೈಕ ಉದ್ಯಮಿಯಾಗಿ ಮುಖೇಶ್ ಅಂಬಾನಿ ಸ್ಥಾನ ಪಡೆದಿದ್ದಾರೆ. ಕೋವಿಡ್​-19 ಪೂರ್ವ ಮಟ್ಟಕ್ಕೆ ಹೋಲಿಸಿದ್ರೇ ಅಂಬಾನಿಯ ಸಂಪತ್ತು ಶೇ.1ರಷ್ಟು ಕಡಿಮೆಯಾಗಿದೆ ಎಂದು ವರದಿಯೊಂದು ಹೇಳಿದೆ.

ಮಾರುಕಟ್ಟೆ ಬಂಡವಾಳೀಕರಣದಿಂದ (ಎಂ-ಕ್ಯಾಪ್) ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್, ಈಗ ಮಾರುಕಟ್ಟೆ ಕ್ಯಾಪ್ ಮೂಲಕ ವಿಶ್ವದ 51ನೇ ಅತಿ ಹೆಚ್ಚು ಮೌಲ್ಯದ ಕಂಪನಿಯಾಗಿದೆ.

ABOUT THE AUTHOR

...view details