ಮುಂಬೈ:ಫೋರ್ಬ್ಸ್ ಹೊರಡಿಸಿದ 'ದಿ ರಿಯಲ್- ಟೈಮ್ ಬಿಲಿಯನೇರ್ ಲಿಸ್ಟ್'ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯು ವಿಶ್ವದ 9ನೇ ಶ್ರೀಮಂತ ಉದ್ಯಮಿ ಸ್ಥಾನ ಪಡೆದಿದ್ದಾರೆ.
ಈ ವರ್ಷದ ಕೆಲ ತಿಂಗಳ ಹಿಂದೆ ಬಿಡುಗಡೆ ಮಾಡಿದ ಫೋರ್ಬ್ಸ್-2019 ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದ್ದರು. ಆಯಿಲ್ನಿಂದ ಟೆಲಿಕಾಂವರೆಗೂ ಹರಡಿರುವ ಆರ್ಐಎಲ್, ಮುಂಬೈ ಬಿಎಸ್ಇನಲ್ಲಿ ಎಂ-ಕ್ಯಾಪ್ (ಮಾರುಕಟ್ಟೆ ಬಂಡವಾಳ) 10 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿತ್ತು.