ನವದೆಹಲಿ:ಅಬುಧಾಬಿ ಮೂಲದ ಹೂಡಿಕೆದಾರ ಮುಬಡಾಲಾ ಇನ್ವೆಸ್ಟ್ಮೆಂಟ್ ಕಂಪನಿ (ಮುಬಡಾಲಾ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (ರಿಲಯನ್ಸ್ ಇಂಡಸ್ಟ್ರೀಸ್) ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ನಲ್ಲಿ (ಆಆರ್ವಿಎಲ್) 6,247.5 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿದೆ.
ರಿಲಯನ್ಸ್ ರೀಟೇಲ್ ವೆಂಚರ್ಸ್ನಲ್ಲಿ 6,247.5 ಕೋಟಿ ರೂ. ಹೂಡಿಕೆ ಮಾಡಿದ ಅಬುಧಾಬಿಯ ಮುಬಡಾಲಾ - ರಿಲಯನ್ಸ್ ರೀಟೇಲ್ ವೆಂಚರ್ಸ್
ರಿಲಯನ್ಸ್ ರಿಟೇಲ್ ಒಟ್ಟಾರೆ ಈಕ್ವಿಟಿ ಮೌಲ್ಯವು 4.28 ಲಕ್ಷ ಕೋಟಿ ರೂ.ಯಷ್ಟಾಗಲಿದೆ. ಮುಬಡಾಲಾ ತನ್ನ ಹೂಡಿಕೆ ಮುಖೇನ ಆರ್‌ಆರ್‌ವಿಎಲ್‌ನಲ್ಲಿ ಶೇ 1.40ರಷ್ಟು ಷೇರು ಪಡೆಯಲಿದೆ. ಈ ವರ್ಷದ ಆರಂಭದಲ್ಲಿ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 1.2 ಬಿಲಿಯನ್ ಡಾಲರ್ ಹೂಡಿಕೆಯ ಬಳಿಕ ಮುಬಡಾಲಾ, ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಲ್ಲಿ ಎರಡನೇ ಅತಿ ದೊಡ್ಡ ಹೂಡಿಕೆ ಮಾಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮಾತನಾಡಿ, ರಿಲಯನ್ಸ್ ರಿಟೇಲ್ ವೆಂಚರ್ಸ್ನಲ್ಲಿ ಮೌಲ್ಯಯುತ ಹೂಡಿಕೆದಾರರಾಗಿ ಮುಬಡಾಲಾ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಮುಬಡಾಲಾದಂತಹ ಜ್ಞಾನ ಶ್ರೀಮಂತ ಸಂಘಟನೆಯೊಂದಿಗಿನ ಸಹಭಾಗಿತ್ವವನ್ನು ನಾವು ಗೌರವಿಸುತ್ತೇವೆ. ಉದ್ಯಮವನ್ನು ಬಲಪಡಿಸುವ ನಮ್ಮ ಧ್ಯೇಯದಲ್ಲಿ ಅವರ ವಿಶ್ವಾಸವನ್ನು ಒಪ್ಪಿಕೊಂಡಿದ್ದೇವೆ. ಭಾರತದ ಚಿಲ್ಲರೆ ಕ್ಷೇತ್ರದ ಲಕ್ಷಾಂತರ ಸಣ್ಣ ಚಿಲ್ಲರೆ ವ್ಯಾಪಾರಿಗಳು, ವರ್ತಕರು ಮತ್ತು ಅಂಗಡಿಯವರು ತಂತ್ರಜ್ಞಾನದ ಮೂಲಕ ಇನ್ನಷ್ಟು ಶಕ್ತಿ ತುಂಬಲಿದ್ದೇವೆ ಎಂದರು.