ಮುಂಬೈ: ಅಂತರ್ಜಾಲದಲ್ಲಿ ಅತಿ ಅಪಾಯಕಾರಿ ಸೆಲೆಬ್ರಿಟಿ ಯಾರು ಎಂಬುದರ ಈ ಬಗ್ಗೆ ಸಾಕಷ್ಟು ಚರ್ಚೆಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಮ್ಯಾಕ್ಅಫೀ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಕ್ರಿಕೆಟ್ರ ಒಬ್ಬರು ಆ ಸ್ಥಾನ ಪಡೆದಿದ್ದಾರೆ.
ಆನ್ಲೈನ್ನ ಡೇಂಜರಸ್ ಸೆಲೆಬ್ರಿಟಿ: ಸನ್ನಿ ಲಿಯೋನ್ ಹಿಂದಿಕ್ಕಿದ ಭಾರತೀಯ ಕ್ರಿಕೆಟರ್ ಯಾರು ಗೊತ್ತೆ? - ಸಚಿನ್ ತೆಂಡೂಲ್ಕರ್
ಆನ್ಲೈನ್ ಹುಡುಕಾಟದ ಅಪಾಯಕಾರಿ ಸೆಲೆಬ್ರಿಟಿಗಳಲ್ಲಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ನಂ.1 ಸ್ಥಾನದಲ್ಲಿದ್ದಾರೆ ಎಂದು ಮ್ಯಾಕ್ಅಫೀ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಧೋನಿ, ನಟಿಯರಾದ ರಾಧಿಕಾ ಆಪ್ಟೆ, ಶ್ರದ್ಧಾ ಕಪೂರ್, ಕ್ರೀಡಾಪಟು ಪಿ.ವಿ. ಸಿಂಧು, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಹಿಂದಿಕ್ಕಿದ್ದಾರೆ.

ಲಕ್ಷಾಂತರ ಅಭಿಮಾನಿಗಳ ಹೊಂದಿರುವ ಸೆಲೆಬ್ರಿಟಿಗಳ ಹೆಸರುಗಳನ್ನು ಬಳಸಿಕೊಂಡು ಅವರಿಗೆ ಆಮಿಷವೊಡ್ಡಲು ಕೆಲವು ವೆಬ್ಸೈಟ್ಗಳು ಬಳಸಿಕೊಳ್ಳುತ್ತಿವೆ. ಆದರೆ, ಇಂತಹ ಆನ್ಲೈನ್ ದುಷ್ಕೃತ್ಯಗಳು ನಡೆಯುತ್ತಿವೆ ಎಂಬುದು ಯಾವ ಸೆಲೆಬ್ರಿಟಿಗೂ ತಿಳಿದಿಲ್ಲ ಎಂದು ಸಮೀಕ್ಷೆ ಹೇಳಿದೆ.
ಧೋನಿ ಮತ್ತು ಸಚಿನ್ ಉನ್ನತ ಗೌರವ ಸ್ಥಾನ ಪಡೆದಿದ್ದು, ಬಹುಸಂಖ್ಯಾತ ಅಭಿಮಾನಿಗಳ ವರ್ಗಹೊಂದಿದ್ದಾರೆ. ಇದೇ ಖ್ಯಾತಿಯನ್ನು ಬಳಿಸಿಕೊಂಡು ಅವರ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡು ಆನ್ಲೈನ್ನಲ್ಲಿ ಡೇಂಜರಸ್ ಸೆಲೆಬ್ರಿಟಿಗಳ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಬಾಲಿವುಡ್ ನಟ ಸನ್ನಿ ಲಿಯೋನ್ ಮತ್ತು ರಿಯಾಲಿಟಿ ಶೋ ವಿಜೇತ
ಗೌತಮ್ ಗುಲಾಟಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.