ಕರ್ನಾಟಕ

karnataka

ETV Bharat / business

ಕೆಲಸದ ಹೊಸ ಬೇಡಿಕೆ ಪೂರೈಸಲು ಶೇ 64 ಭಾರತೀಯ ಕಂಪನಿಗಳು ಸಿದ್ಧ- ಸಮೀಕ್ಷೆ - ಭಾರತೀಯ ಕಂಪನಿಗಳು

ಉದ್ಯೋಗಿಗಳ ಕೆಲಸ ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಸಾಧನಗಳನ್ನು ಸದುಪಯೋಗಪಡಿಸಿಕೊಳ್ಳಲಿವೆ. ಶೇ 43ರಷ್ಟು ಸಣ್ಣ ಮತ್ತು ಮಧ್ಯಮ ವ್ಯವಹಾರಗಳ (ಎಸ್‌ಎಂಬಿ) ಉದ್ಯಮಗಳು ಇದಕ್ಕಾಗಿ ತಯಾರಾಗಿವೆ. ಶೇ 39ರಷ್ಟು ದೊಡ್ಡ ಉದ್ಯಮಗಳು ಭವಿಷ್ಯಕ್ಕಾಗಿ ಸಜ್ಜಾಗುತ್ತಿವೆ ಎಂದು ಸಮೀಕ್ಷೆ ಹೇಳಿದೆ.

Survey
ಸಮೀಕ್ಷೆ

By

Published : Mar 26, 2020, 7:36 PM IST

ಬೆಂಗಳೂರು: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹಬ್ಬಿದ ಹಿನ್ನೆಲೆಯಲ್ಲಿ ನೂತನ ಕೆಲಸದ ಬೇಡಿಕೆಗಳನ್ನು ಪೂರೈಸಲು 64 ಪ್ರತಿಶತದಷ್ಟು ಭಾರತೀಯ ಉದ್ಯಮಗಳು ಸಿದ್ಧವಾಗುತ್ತಿವೆ ಎಂದು ಪ್ರಮುಖ ಜಾಬ್​ ಪೋರ್ಟಲ್ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ

ಉದ್ಯೋಗಿಗಳ ಕೆಲಸ ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಸಾಧನಗಳನ್ನು ಸದುಪಯೋಗಪಡಿಸಿಕೊಳ್ಳಲಿವೆ. ಶೇ 43ರಷ್ಟು ಸಣ್ಣ ಮತ್ತು ಮಧ್ಯಮ ವ್ಯವಹಾರಗಳ (ಎಸ್‌ಎಂಬಿ) ಉದ್ಯಮಗಳು ಇದಕ್ಕಾಗಿ ತಯಾರಾಗಿವೆ. ಶೇ 39ರಷ್ಟು ದೊಡ್ಡ ಉದ್ಯಮಗಳು ಭವಿಷ್ಯಕ್ಕಾಗಿ ಸಜ್ಜಾಗುತ್ತಿವೆ ಎಂದು ಸಮೀಕ್ಷೆ ಹೇಳಿದೆ.

ವರ್ಕ್​ ಫ್ರಮ್​ ಹೋಮ್​ ಅಥವಾ ಹೊಂದಾಣಿಕೆಯ ಕೆಲಸದ ಸಿಸ್ಟಮ್​ಗೆ ಸಂಬಂಧಿಸಿದ ಮಾನವ ಸಂಪನ್ಮೂಲ ನೀತಿಗಳಲ್ಲಿ ಬದಲಾವಣೆ ಆಗಿವೆ. ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯೆ ಎಂಬಂತೆ ಸಂಸ್ಥೆಗಳ ಗಿಗ್ ಆರ್ಥಿಕತೆ (ತಾತ್ಕಾಲಿಕ) ಮತ್ತು ವ್ಯವಹಾರ ಮುಂದುವರಿಕೆ ಯೋಜನೆಗಳ ಮೇಲೆ ಪ್ರಭಾವ ಬೀರಿದೆ ಎಂದು ವರದಿ ಬಹಿರಂಗಪಡಿಸಿದೆ.

ಜಗತ್ತು ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದರೂ ಸಹ, ಉದ್ಯೋಗಿಗಳು ತಮ್ಮ ಇಚ್ಛೆಯಂತೆ ಕಾರ್ಯನಿರ್ವಹಿಸಲು ಮತ್ತು ವ್ಯವಹಾರ ಮುಂದುವರಿಸಲು ಸಮರ್ಥರಾಗಿದ್ದಾರೆ. ಇದನ್ನು ಅರ್ಥೈಸಿಕೊಳ್ಳಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಅನೇಕ ಉದ್ಯೋಗದಾತರು ಪ್ರಯತ್ನಿಸುತ್ತಿದ್ದಾರೆ ಎಂದು ಇಂಡೀಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಶಿ ಕುಮಾರ್ ಹೇಳಿದ್ದಾರೆ.

ABOUT THE AUTHOR

...view details