ಕರ್ನಾಟಕ

karnataka

ETV Bharat / business

ಐಸಿಐಸಿಐ-ವಿಡಿಯೊಕಾನ್ ಮನಿ ಲಾಂಡರಿಂಗ್​: ಕೊಚ್ಚಾರ್ ದಂಪತಿಯ ಜಾಮೀನು ಅರ್ಜಿ ವಜಾ - ದೀಪಕ್ ಕೊಚ್ಚಾರ್ ಮನಿ ಲಾಂಡರಿಂಗ್

ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೀಪಕ್ ಕೊಚ್ಚಾರ್ ಅವರನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

Deepak Kochhar
ದೀಪಕ್ ಕೊಚ್ಚಾರ್​

By

Published : Nov 12, 2020, 6:50 PM IST

Updated : Nov 12, 2020, 7:43 PM IST

ಮುಂಬೈ: ಐಸಿಐಸಿಐ-ವಿಡಿಯೊಕಾನ್ ಮನಿ ಲಾಂಡರಿಂಗ್​ ಪ್ರಕರಣ ಸಂಬಂಧ ಐಸಿಐಸಿಐ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೊಚ್ಚಾರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್​ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೀಪಕ್ ಕೊಚ್ಚಾರ್ ಅವರನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

ಉದ್ಯಮಿಯ ಪರ ವಕೀಲರು, ಅರ್ಹತೆ ಮತ್ತು ಪೂರ್ವನಿಯೋಜಿತ ಕಾರಣದಡಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಿಗದಿತ ಅವಧಿಯೊಳಗೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ವಿಶೇಷ ಪಿಎಂಎಲ್ಎ ನ್ಯಾಯಾಧೀಶರು ಕೊಚ್ಚಾರ್​ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಅರ್ಹತೆ ಮೇಲೆ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನವೆಂಬರ್ 23 ರಂದು ನಡೆಸಲಾಗುವುದು ಎಂದು ಇಡಿ ಪರ ವಕೀಲ ಹಿತೆನ್ ವೆನೆಗೋಕರ್ ಹೇಳಿದ್ದಾರೆ.

ತನಿಖಾ ಸಂಸ್ಥೆ ಸಮಯಕ್ಕೆ ಸರಿಯಾಗಿ ಚಾರ್ಜ್‌ಶೀಟ್ ಸಲ್ಲಿಸುವಲ್ಲಿ ವಿಫಲವಾಗಿದೆ ಎಂಬ ಕೊಚ್ಚಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಾಸಿಕ್ಯೂಷನ್, ನವೆಂಬರ್ 3ರಂದು ಸಲ್ಲಿಸಲಾಗಿದೆ. ಆದರೆ ಸಂಬಂಧಪಟ್ಟ ಇಲಾಖೆಯಿಂದ ಪರಿಶೀಲನೆ ಬಾಕಿ ಇದೆ. ಹೀಗಾಗಿ, ಪ್ರಾಸಿಕ್ಯೂಷನ್ ದೂರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದಿದೆ.

ವಿಡಿಯೊಕಾನ್ ಗ್ರೂಪ್ ಆಫ್ ಕಂಪೆನಿಗಳಿಗೆ 1,875 ಕೋಟಿ ರೂ. ಸಾಲವನ್ನು ಅಕ್ರಮವಾಗಿ ಮಂಜೂರು ಮಾಡಿದ್ದಕ್ಕಾಗಿ ಕೊಚ್ಚಾರ್ ಮತ್ತು ಅವರ ವ್ಯಾಪಾರ ಸಂಸ್ಥೆಗಳ ವಿರುದ್ಧ ಮನಿ ಲಾಂಡರಿಂಗ್ ಆರೋಪದ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆ ದಾಖಲಿಸಿದೆ.

Last Updated : Nov 12, 2020, 7:43 PM IST

ABOUT THE AUTHOR

...view details