ನ್ಯೂಯಾರ್ಕ್:ತಮ್ಮ ವೈಯಕ್ತಿಕ ಫೇಸ್‌ಬುಕ್‌ನಲ್ಲಿ ಸುಮಾರು 45 ಮಿಲಿಯನ್ ಅನುಯಾಯಿಗಳನ್ನು (ಲೈಕ್) ಹೊಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್‌ಬುಕ್‌ನಲ್ಲಿ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿ ಮುಂದುವರೆದಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಇತರ ನಾಯಕರಗಿಂತ ತಮ್ಮ ಅನುಯಾಯಿಗಳೊಂದಿಗೆ ಹೆಚ್ಚಿನ ಸಂವಹನ ನಡೆಸಲು ಫೇಸ್‌ಬುಕ್ ಬಳಸಿಕೊಂಡವರಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಮಧ್ಯೆಯೂ ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಒಂದು ಈ ಬಗ್ಗೆ ಅಧ್ಯಯನ ನಡೆಸಿದೆ.
ಟ್ರಂಪ್ ಫೇಸ್‌ಬುಕ್‌ನಲ್ಲಿ ಎರಡನೇ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿದ್ದು, ಸುಮಾರು 27 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಜೋರ್ಡಾನ್‌ನ ರಾಣಿ ರಾನಿಯಾ 16.8 ಮಿಲಿಯನ್ ಅನುಯಾಯಿಗಳ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಜಾಗತಿಕ ಸಂವಹನ ಸಂಸ್ಥೆ ಬಿಸಿಡಬ್ಲ್ಯೂ (ಬರ್ಸನ್) 'ಫೇಸ್‌ಬುಕ್‌ನಲ್ಲಿ ವಿಶ್ವ ನಾಯಕರು' ಶ್ರೇಯಾಂಕ ಹೆಸರಿನ ವರದಿಯಲ್ಲಿ ತಿಳಿಸಿದೆ.