ನವದೆಹಲಿ: ದೇಶದಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದ್ದರಿಂದ ಮೊಬೈಲ್ ಬಳಕೆದಾರರು ಮಾರ್ಚ್ ತಿಂಗಳಲ್ಲಿ ಇಂಟರ್ನೆಟ್ ವೇಗದ ಸಮಸ್ಯೆ ಎದುರಿಸಿದ್ದರು.
ದೇಶದಲ್ಲಿ ಶೇ 97ರಷ್ಟು ಮೊಬೈಲ್ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಹೊಂದಿರುವುದರಿಂದ ಮನೆಯಿಂದಲೇ ಕೆಲಸ ಮಾಡುವುದನ್ನು ಬೆಂಬಲಿಸುವುದು ನಿರ್ಣಾಯಕವಾಗಿತ್ತು.
ಮಾರ್ಚ್ನಲ್ಲಿ ಟೆಲಿಕಾಮ್ ಅಥಾರಿಟಿ ಆಫ್ ಇಂಡಿಯಾ ಪ್ರಕಟಿಸಿದ ಸರಾಸರಿ ಮೊಬೈಲ್ ಬ್ರಾಡ್ಬ್ಯಾಂಡ್ ವೇಗದ ಮಾಹಿತಿ ತಿಳಿಸಿದ್ದು 4 ಜಿ ಡೌನ್ಲೋಡ್ ವೇಗದಲ್ಲಿ ಶೇಕಡಾ 22.5 ರಷ್ಟು ಮತ್ತು ಹಾಗೂ ಭಾರತಿ ಏರ್ಟೆಲ್ನ ನೆಟ್ವರ್ಕ್ನಲ್ಲಿ ಶೇ. 13ರಷ್ಟು ಕುಸಿದಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಭಾರತಿ ಏರ್ಟೆಲ್ ಡೌನ್ಲೋಡ್ಗಾಗಿ ಕೇವಲ 2ಜಿ ಮತ್ತು 4ಜಿ ನೆಟ್ವರ್ಕ್ ಸೇವೆಯನ್ನು ಮಾತ್ರ ಒದಗಿಸಿತ್ತು. ಫೆಬ್ರವರಿಯಲ್ಲಿ 8 ಎಂಬಿಪಿಎಸ್ ಇದ್ದ ವೇಗ ಲಾಕ್ಡೌನ್ನಿಂದಾಗಿ 6.2 ಎಂಬಿಪಿಎಸ್ಗೆ ಕುಸಿದಿದೆ ಎಂದು ತಿಳಿದುಬಂದಿದೆ.
ಐಡಿಯಾದ 4ಜಿ ಡೌನ್ಲೋಡ್ ವೇಗ ಶೇ.19 ರಷ್ಟು ಕಡಿತವಾಗಿದೆ. ಫೆಬ್ರವರಿಯಲ್ಲಿ 6.3 ಎಂಬಿಪಿಎಸ್ ಇದ್ದ ಡೌನ್ಲೋಡ್ ವೇಗ 5.1ಕ್ಕೆ ಕುಸಿದಿದೆ. ವೊಡಾಫೋನ್ ನೆಟ್ವರ್ಕ್ ಶೇ. 16 ರಷ್ಟು ಕುಸಿದಿದ್ದು, 8 ಎಂಬಿಪಿಎಸ್ ವೇಗದಿಂದ 6.7 ಎಂಬಿಪಿಎಸ್ ಕುಸಿದಿದೆ.
ಇನ್ನು ರಿಲಿಯನ್ಸ್ ಜಿಯೋ ನೆಟ್ವರ್ಕ್ ಡೌನ್ಲೋಡ್ ವೇಗದಲ್ಲಿ ಶೇ. 9 ಕುಸಿತ ಕಂಡಿದೆ. ಫೆಬ್ರವರಿಯಲ್ಲಿ 21.5 ಎಂಬಿಪಿಎಸ್ ಇದ್ದ ನೆಟ್ವರ್ಕ್ ವೇಗ ಮಾರ್ಚ್ನಲ್ಲಿ 19.6 ಎಂಬಿಪಿಎಸ್ಗೆ ಇಳಿಮುಖವಾಗಿದೆ. ಈ ಈ ಸರಾಸರಿ ವೇಗದ ಲೆಕ್ಕಾಚಾರವನ್ನ ಟ್ರಾಯ್ ಮೈ ಸ್ಪೀಡ್ ಆ್ಯಪ್ನ ಸಹಾಯದ ಮೂಲಕ ದೇಶದೆಲ್ಲೆಡೆ ದತ್ತಾಂಶಗಳನ್ನು ಸಂಗ್ರಹಿಸಿದೆ.
ಡೌನ್ಲೋಡ್ ವೇಗವು ವಿವಿಧ ಆ್ಯಪ್ಗಳಿಂದ ವಿಷಯಗಳನ್ನ ಪಡೆಯಲು ಸಹಾಯ ಮಾಡಿದರೆ ಅಪ್ಲೋಡ್ ವೇಗವು ಇಮೇಲ್, ಫೋಟೊ ಹಾಗೂ ವಿಡಿಯೋ ಸೇರಿದಂತೆ ಮುಂತಾದ ವಿಷಯಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.