ನವದೆಹಲಿ:ಐಟಿ ಸಂಸ್ಥೆ ಮೈಂಡ್‌ಟ್ರೀ ತನ್ನ ಷೇರು ಮರು ಖರೀದಿಯ ಉದ್ದೇಶಿತ ಪ್ರಸ್ತಾವನೆ ಕೈಬಿಟ್ಟಿರಿವುದಾಗಿ ಆಡಳಿತ ಮಂಡಳಿ ನಿರ್ದೇಶಕರು ಷೇರುಪೇಟೆಗೆ ಮಾಹಿತಿ ನೀಡಿದ್ದಾರೆ.
ಷೇರು ಮರು ಖರೀದಿಯಿಂದ ಹಿಂದೆ ಸರಿದ ಮೈಂಡ್‌ಟ್ರೀ..! - undefined
ಷೇರು ಮರು ಖರೀದಿ ಸಂಬಂಧ ಮೈಂಡ್‌ಟ್ರೀ ನಿರ್ದೇಶಕ ಮಂಡಳಿಯು ಮಾರ್ಚ್ 20ರಂದು ನಡೆದ ಸಭೆಯಲ್ಲಿ ವಿವರವಾದ ಚರ್ಚೆಯ ನಂತರ, ಯಾವುದೇ ಖಚಿತ ತೀರ್ಮಾನಕ್ಕೆ ಬರದ ಪ್ರಯುಕ್ತ ಸಭೆಯನ್ನು ಮುಂದೂಡಲಾಗಿತ್ತು.
ಒತ್ತಾಯಪೂರ್ವಕವಾಗಿ ಸ್ವಾಧೀನಕ್ಕೆ ಪಡೆಯಲು ಎಂಜಿನಿಯರಿಂಗ್ ಸಂಸ್ಥೆ ಲಾರ್ಸನ್ ಅಂಡ್ ಟುಬ್ರೊ (ಎಲ್‌ಅಂಡ್‌ಟಿ) ನೀಡಿರುವ ಕೊಡುಗೆಯ ಬಗ್ಗೆ ವರದಿ ನೀಡಲು ಸ್ವತಂತ್ರ ನಿರ್ದೇಶಕರ ಸಮಿತಿಯೊಂದನ್ನು ರಚನೆ ಮಾಡಿದೆ. ಎಲ್‌ಅಂಡ್‌ಟಿ ಕೊಡುಗೆಗೆ ಮೈಂಡ್‌ಟ್ರೀನ ಸಹ ಸ್ಥಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಂಡ್‌ಟ್ರೀನಲ್ಲಿನ ಶೇ. 66ರಷ್ಟು ಪಾಲು ಬಂಡವಾಳವನ್ನು ₹ 10,800 ಕೋಟಿಗೆ ಖರೀದಿಸಲು ಎಲ್‌ಅಂಡ್‌ಟಿ ಮುಂದಾಗಿತ್ತು. ಈ ಸಂಬಂಧ ಸಂಸ್ಥೆಯಲ್ಲಿನ ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ್ ಅವರ ಶೇ. 20.32ರಷ್ಟು ಷೇರುಗಳನ್ನು ಖರೀದಿಸಲು ನಿರ್ಧರಿಸಿತ್ತು. ಇದರ ಜೊತೆಗೆ ಮುಕ್ತ ಮಾರುಕಟ್ಟೆಯಿಂದ ಶೇ.15ರಷ್ಟು ಷೇರುಗಳನ್ನು ಮತ್ತು ಶೇ. 31ರಷ್ಟು ಷೇರುಗಳನ್ನು ಮುಕ್ತ ಕೊಡುಗೆ ಮುಖೇನ ಖರೀದಿಸಲು ಎಲ್‌ಅಂಡ್‌ಟಿ ಯೋಜನೆ ರೂಪಿಸಿಕೊಂಡಿತ್ತು.