ಕರ್ನಾಟಕ

karnataka

ETV Bharat / business

Microsoft: ಸಿಇಒ ಸ್ಥಾನದಿಂದ ಮೈಕ್ರೋಸಾಫ್ಟ್ ಅಧ್ಯಕ್ಷಗಿರಿಗೇರಿದ ಸತ್ಯ ನಾದೆಲ್ಲಾ - ಸಿಇಒ ಸತ್ಯ ನಾದೆಲ್ಲಾ

2014ರ ಫೆಬ್ರವರಿಯಲ್ಲಿ ಸ್ವೀಚ್ ಬಲ್ಮೇರ್​ ಅವರಿಂದ ಕಂಪನಿಯ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದ ಸತ್ಯ ನಾದೆಲ್ಲಾ ಈಗ ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Microsoft names India-born CEO Satya Nadella as companys chairman
ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ಸತ್ಯ ನಾದೆಲ್ಲಾ ಆಯ್ಕೆ

By

Published : Jun 17, 2021, 11:44 AM IST

ನ್ಯೂಯಾರ್ಕ್(ಅಮೆರಿಕ):ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ ಆಗಿದ್ದ ಭಾರತೀಯ ಮೂಲದ ಸತ್ಯ ನಾದೆಲ್ಲಾ ಇದೀಗ ಕಂಪೆನಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಸಂಸ್ಥೆಯ ಸ್ವತಂತ್ರ ನಿರ್ದೇಶಕರು ಸತ್ಯ ನಾದೆಲ್ಲಾ ಅವರನ್ನು ಅವಿರೋಧವಾಗಿ ಚುನಾಯಿಸಿದ್ದಾರೆ ಎಂದು ಮೈಕ್ರೋಸಾಫ್ಟ್​ ಹೇಳಿದೆ. ಸತ್ಯ ನಾದೆಲ್ಲಾ ಅವರಿಗೆ ಇದು ಹೆಚ್ಚುವರಿ ಜವಾಬ್ದಾರಿಯಾಗಿದೆ.

ಈ ಮೊದಲು ಸಂಸ್ಥೆಯ ಅಧ್ಯಕ್ಷರಾಗಿದ್ದ ಜಾನ್ ಡಬ್ಲ್ಯೂ ಥಾಂಪ್ಸನ್ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಈಗ ಸತ್ಯ ನಾದೆಲ್ಲಾ ಸಂಸ್ಥೆಯ ಬೋರ್ಡ್​ಗೆ ಕಾರ್ಯಸೂಚಿಯನ್ನು ನಿಗದಿಪಡಿಸುವ ಕಾರ್ಯದ ನೇತೃತ್ವ ವಹಿಸಿಕೊಳ್ಳುತ್ತಾರೆ. ಜೊತೆಗೆ ಬೋರ್ಡ್​ಗೆ ಅವಕಾಶಗಳನ್ನು ಹೆಚ್ಚಿಸಲು ಮತ್ತು ವ್ಯವಹಾರ ವಿಸ್ತರಣೆಯ ಅಧಿಕಾರವಿರುತ್ತದೆ ಎಂದು ಕಂಪನಿ ಹೇಳಿಕೆ ನೀಡಿದೆ.

ಸತ್ಯ ನಾದೆಲ್ಲಾ 2014ರ ಫೆಬ್ರವರಿಯಲ್ಲಿ ಸ್ವೀಚ್ ಬಲ್ಮೇರ್​ ಅವರಿಂದ ಕಂಪನಿಯ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಇವರು ಸಿಇಒ ಆಗಿ ಆಯ್ಕೆಯಾದ ನಂತರ ಮೊಬೈಲ್ ಕ್ಷೇತ್ರದಲ್ಲಿ ಎದುರಾಳಿಗಳಾದ ಆಪಲ್ ಮತ್ತು ಗೂಗಲ್ ಅನ್ನು ಸ್ಪರ್ಧಾತ್ಮಕವಾಗಿ ಎದುರಿಸಲು ಸಾಧ್ಯವಾಯಿತು ಎನ್ನಲಾಗಿದೆ.

ನಾದೆಲ್ಲಾ ಬಗ್ಗೆ ಇನ್ನಷ್ಟು..

ಮೈಕ್ರೋಸಾಫ್ಟ್ 1975ರಲ್ಲಿ ಸ್ಥಾಪನೆಯಾದ ಕಂಪನಿಯಾಗಿದ್ದು, ಈ ಕಂಪನಿಗೆ ಹೊಸ ಶಕ್ತಿಯನ್ನು ತರಲು ಕಾರಣಕರ್ತರಾಗಿದ್ದಾರೆ ಕೆಲವರ ಅಭಿಪ್ರಾಯ. ಪರ್ಸನಲ್ ಕಂಪ್ಯೂಟರ್​​ಗಳಿಗೆ ಬೇಕಾದ ಸಾಫ್ಟ್​ವೇರ್ ಪ್ಯಾಕೇಜ್​ ಜಕಡಗೆ ಇವರು ಸಾಕಷ್ಟು ಗಮನಹರಿಸಿದ್ದರು.

ಇದನ್ನೂ ಓದಿ:'ಟೀಂ ಇಂಡಿಯಾ ರಬ್ಬರ್ ಚೆಂಡು ಇದ್ದಂತೆ, ಪುಟಿಯುತ್ತದೆ, ಪುಟಿಯುತ್ತಲೇ ಇರುತ್ತದೆ'

ಸಂಸ್ಥೆಯ ರಚನೆಯನ್ನು ಸರಳಗೊಳಿಸಿ ಮತ್ತು ಫಿನ್‌ಲ್ಯಾಂಡ್‌ನ ನೋಕಿಯಾಗೂ ಸಾಫ್ಟ್​ವೇರ್​ ಸಂಯೋಜಿಸುವ ಗುರಿಯನ್ನು ಹೊಂದಿರುವ ಯೋಜನೆಯಡಿಯಲ್ಲಿ, ನಾಡೆಲ್ಲಾ ತನ್ನ ಅಧಿಕಾರಾವಧಿಯ ಆರಂಭದಲ್ಲಿ, ಶೇಕಡಾ 14ರಷ್ಟು ಉದ್ಯೋಗಗಳಿಗೆ ಕತ್ತರಿ ಹಾಕಲಾಗಿತ್ತು. ಕ್ಲೌಡ್ ಕಂಪ್ಯೂಟಿಂಗ್​ಗೆ ಕೂಡಾ ನಾದೆಲ್ಲಾ ಕೊಡುಗೆ ಹೆಚ್ಚಾಗಿದೆ.

ABOUT THE AUTHOR

...view details