ಹೈದರಾಬಾದ್:ಜಾಗತಿಕ ಸಾಫ್ಟವೇರ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯ ಭಾರತ ಮೂಲದ ಸಿಇಒ ಸತ್ಯಾ ನಾಡೆಲ್ಲ ಅವರ ಪತ್ನಿ ಅನುಪಮಾ ವಿ ನಾಡೆಲ್ಲ ಅವರು ಪ್ರಧಾನ ಮಂತ್ರಿ ಕೇರ್ಗೆ 2 ಕೋಟಿ ರೂ. ನೀಡಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಈ ಸಮಯದಲ್ಲಿ ದೇಶದ ಜನರ ಬಗ್ಗೆ ಅವರ ಕಾಳಜಿ ಮತ್ತು ಒಗ್ಗಟ್ಟಿನ ಬಗ್ಗೆ ತಮ್ಮ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಟ್ವೀಟ್ ಮಾಡಿ ಪ್ರಶಂಸಿಸಿದರು.
ಲಾಕ್ಡೌನ್ ಅವಧಿಯಲ್ಲಿ ಬಡವರಿಗೆ ನೆರವಾಗಲು ಅನುಪಮಾ ನಾಡೆಲ್ಲಾ ಅವರು ಈ ಹಿಂದೆಯೂ ತೆಲಂಗಾಣ ಮುಖ್ಯಮಂತ್ರಿಗಳ ಕಲ್ಯಾಣ ನಿಧಿಗೆ 2 ಕೋಟಿ ರೂ. ನೀಡಿದ್ದರು.
ಕೋವಿಡ್ -19 ಅನ್ನು ಎದುರಿಸಲು ಅನುಪಮಾ ನಾಡೆಲ್ಲಾ ತಮ್ಮ ವೈಯಕ್ತಿಕ ಆದಾಯದಿಂದ ಪ್ರಧಾನ ಮಂತ್ರಿ ಕೇರ್ಸ್ ಫಂಡ್ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 2 ಕೋಟಿ ರೂ. ನೀಡಿದ್ದಾರೆ. ವಿದೇಶದಲ್ಲಿ ವಾಸಿಸುತ್ತಿದ್ದರೂ ತಾಯಿ ನಾಡಿನ ಬಗ್ಗೆ ಅವರ ಕಾಳಜಿಯನ್ನು ತೋರಿಸುತ್ತದೆ ಎಂದು ಶ್ಲಾಘಿಸಿದ್ದಾರೆ.