ಕರ್ನಾಟಕ

karnataka

ETV Bharat / business

ಸಿಎಎ ಜಾರಿ ಕೆಟ್ಟದ್ದು ಎಂದಿದ್ದ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ ಫೆ.24ರಂದು ಭಾರತಕ್ಕೆ ಭೇಟಿ

ಸತ್ಯ ನಾದೆಲ್ಲಾ ಅವರು ಫೆಬ್ರವರಿ 24ರಿಂದ 26ರವರೆಗೆ ಭಾರತ ಪ್ರವಾಸದಲ್ಲಿ ಇರಲಿದ್ದಾರೆ. ಈ ವೇಳೆ ದೆಹಲಿ, ಮುಂಬೈ ಮತ್ತು ಬೆಂಗಳೂರಲ್ಲಿನ ಉದ್ದಿಮೆ ದಿಗ್ಗಜರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Microsoft CEO Satya Nadella
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ

By

Published : Feb 13, 2020, 7:53 PM IST

ನವದೆಹಲಿ: 'ಭಾರತದ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯು ಕೆಟ್ಟದ್ದು ಮತ್ತು ದುಃಖಕರವಾಗಿದೆ' ಎಂದು ಹೇಳಿಕೆ ನೀಡುವ ಮೂಲಕ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ ಅವರು ಫೆಬ್ರವರಿ ತಿಂಗಳಾಂತ್ಯಕ್ಕೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

ಕಂಪನಿಯ ಸಹ ನಾದೆಲ್ಲಾ ಅವರ ಭಾರತ ಪ್ರವಾಸ ಕೈಗೊಳ್ಳುವುದನ್ನು ಖಚಿತ ಪಡಿಸಿದೆ. ಆದರೆ, ಯಾವ ನಗರಗಳಿಗೆ ಭೇಟಿ ನೀಡಿಲಿದ್ದಾರೆ. ಅವರ ಕಾರ್ಯಕ್ರಮಗಳ ಏನು ಎಂಬುದರ ಸಂಪೂರ್ಣ ವಿವರವನ್ನು ನೀಡಲು ನಿರಾಕರಿಸಿದೆ.

ಇ-ಮೇಲ್​ ಒಂದಕ್ಕೆ ಉತ್ತರಿಸಿದ ಮೈಕ್ರೋಸಾಫ್ಟ್​ ಕಂಪನಿಯು ಹೌದು, ಸತ್ಯ ನಾದೆಲ್ಲಾ ಅವರು ಈ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಗ್ರಾಹಕರು, ಯುವ ಸಾಧಕರು, ವಿದ್ಯಾರ್ಥಿಗಳು, ಪರಿಣಿತರು ಹಾಗೂ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ನಾದೆಲ್ಲಾ ಅವರು ಫೆಬ್ರವರಿ 24ರಿಂದ 26ರವರೆಗೆ ಭಾರತ ಪ್ರವಾಸದಲ್ಲಿ ಇರಲಿದ್ದಾರೆ. ಈ ವೇಳೆ ದೆಹಲಿ, ಮುಂಬೈ ಮತ್ತು ಬೆಂಗಳೂರಲ್ಲಿನ ಉದ್ಯಮ ದಿಗ್ಗಜರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಒಂದೂವರೆ ತಿಂಗಳಿಗೂ ಹೆಚ್ಚು ಸಮಯದಿಂದ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸತ್ಯ ನಾದೆಲ್ಲಾ ಅವರು, 'ಸಿಎಎ ಕಾಯ್ದೆಯು ಕೆಟ್ಟದ್ದು ಮತ್ತು ದುಃಖಕರವಾಗಿದೆ' ಎಂದು ಹೇಳಿಕೆ ಕೊಟ್ಟಿದ್ದರು.

ನಾದೆಲ್ಲಾ ಅಭಿಪ್ರಾಯಕ್ಕೆ ದೇಶಾದ್ಯಂತ ವಿಭಿನ್ನವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. 'ನಾದೆಲ್ಲಾ ಅಮೆರಿಕದ ವಲಸಿಗನಾಗಿ ಇರುವುದರಿಂದ ಆ ರೀತಿ ಹೇಳಿದ್ದಾರೆ' ಎಂದು ಕೆಲವರು ವ್ಯಂಗ್ಯವಾಡಿದ್ದರೇ ಮತ್ತೇ ಕೆಲವರು 'ಅಕ್ರಮ ವಲಸಿಗರ ಬಗ್ಗೆ ಅಲ್ಲ' ಎಂದು ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಈ ವಿವಾದದ ಬಳಿಕ ಪ್ರಥಮ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ. ಈ ವೇಳೆ ಯಾವ ರೀತಿಯ ಪ್ರತಿಕ್ರಿಯೆಗಳು ಹೊರಬರುತ್ತವೆ ಎಂಬುದನ್ನು ಎದುರು ನೋಡಲಾಗುತ್ತಿದೆ.

ABOUT THE AUTHOR

...view details